ಮಿಲಿಟರಿ ಬ್ಯಾಂಡ್ ಸಾರೇ ಜಹಾನ್ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ ನುಡಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ತಾಳಕ್ಕೆ ತಕ್ಕಂತೆ ಪೋಡಿಯಂ ತಟ್ಟುತ್ತಿದ್ದರು!
Independence Day 2023: ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ದಿನಗಳಂದು ನಾವೆಲ್ಲ ಅದನ್ನು ಕೇಳುತ್ತಲೇ ಬೆಳೆದಿದ್ದೇವೆ. ಈ ಎರಡು ದಿನ ಬೆಳಗ್ಗೆ ಏಳುವಾಗಲೇ ನಮ್ಮಲ್ಲಿ ದೇಶಭಕ್ತಿಯ ಭಾವ ತುಂಬಿಕೊಂಡಿರುತ್ತದೆ. ಇದೆಲ್ಲ ಹೇಳುವ ವಿಷಯ ಅಲ್ಲ ಆದರೆ ಹೇಳುವ ಪ್ರಮೇಯವನ್ನು ಪ್ರಧಾನಿ ಮೋದಿ ಸೃಷ್ಟಿಸಿದ್ದಾರೆ.
ದೆಹಲಿ: ಮಿಲಿಟರಿ ಬ್ಯಾಂಡೇ (Military Band) ಹಾಗೆ, ಅದು ಕಿವಿಗೆ ಬೀಳುತ್ತಿದ್ದಂತೆ ರಾಷ್ಟ್ರಪ್ರೇಮ, ರಾಷ್ಟ್ರಾಭಿಮಾನ ಮತ್ತು ಚೇತನ ಉಕ್ಕಿ ಬರುತ್ತದೆ. ಸ್ವಾತಂತ್ರ್ಯೋತ್ಸವ (Independence Day) ಮತ್ತು ಗಣರಾಜ್ಯೋತ್ಸವ (Republic Day) ದಿನಗಳಂದು ನಾವೆಲ್ಲ ಅದನ್ನು ಕೇಳುತ್ತಲೇ ಬೆಳೆದಿದ್ದೇವೆ. ಈ ಎರಡು ದಿನ ಬೆಳಗ್ಗೆ ಏಳುವಾಗಲೇ ನಮ್ಮಲ್ಲಿ ದೇಶಭಕ್ತಿಯ ಭಾವ ತುಂಬಿಕೊಂಡಿರುತ್ತದೆ. ಇದೆಲ್ಲ ಹೇಳುವ ವಿಷಯ ಅಲ್ಲ; ಹೇಳುವ ಪ್ರಮೇಯವನ್ನು 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ರಾಷ್ಟ್ರದ ರಾಜಧಾನಿ ದೆಹಲಿಯ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತಾಡುವ ಮೊದಲು ಹಿನ್ನೆಲೆಯಲ್ಲಿ ಕೇಳುತ್ತಿದ್ದ ಮಿಲಿಟಿರಿ ಬ್ಯಾಂಡ್ ನ ತಾಳ ಮತ್ತು ಸದ್ದಿಗೆ ಅನುಗುಣವಾಗಿ ತಮ್ಮ ಬೆರಳುಗಳಿಂದ ಪೋಡಿಯಂ ಅನ್ನು ತಟ್ಟುತ್ತಿದ್ದ ದೃಶ್ಯ ಸೃಷ್ಟಿಸಿದೆ. ಮಿಲಿಟರಿ ಬ್ಯಾಡ್ ನುಡಿಸುತ್ತಿದ್ದ ದೇಶಭಕ್ತಿ ಗೀತೆ ‘ಸಾರೇ ಜಹಾನ್ ಸೆ ಅಚ್ಛಾ, ಹಿಂದೂಸ್ತಾನ್ ಹಮಾರಾ…’ ಮೈಮನಗಳಲ್ಲಿ ರೋಮಾಂಚನ ಮೂಡಿಸುತ್ತದೆ. ಅದೇ ಭಾವ ಪ್ರಧಾನಿ ಮೋದಿಯವರಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ