AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ದಿನ ವಿದೇಶದಲ್ಲಿ 50 ಕೋಟಿ ರೂ. ಕಲೆಕ್ಷನ್​ ಮಾಡುತ್ತಾ ‘ಜವಾನ್​’? ಜೋರಾಗಿದೆ ಲೆಕ್ಕಾಚಾರ

ಶಾರುಖ್​ ಖಾನ್​ ನಟನೆಯ ಬಹುನಿರೀಕ್ಷಿತ ‘ಜವಾನ್​’ ಸಿನಿಮಾ ಬಿಡುಗಡೆ ಆಗಲು ಇನ್ನೂ ಒಂದಷ್ಟು ದಿನ ಬಾಕಿ ಇದೆ. ಈಗಾಗಲೇ ವಿದೇಶದಲ್ಲಿ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಆರಂಭ ಆಗಿದೆ. ಮೂಲಗಳ ಪ್ರಕಾರ ಅಮೆರಿಕದಲ್ಲಿ ಸಾವಿರಾರು ಟಿಕೆಟ್​ಗಳು ಸೋಲ್ಡ್​ ​ಔಟ್​ ಆಗಿವೆ. ಸೆಪ್ಟೆಂಬರ್​ 7ರ ವೇಳೆಗೆ ದೊಡ್ಡ ಬಿಸ್ನೆಸ್​ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಮೊದಲ ದಿನ ವಿದೇಶದಲ್ಲಿ 50 ಕೋಟಿ ರೂ. ಕಲೆಕ್ಷನ್​ ಮಾಡುತ್ತಾ ‘ಜವಾನ್​’? ಜೋರಾಗಿದೆ ಲೆಕ್ಕಾಚಾರ
ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Aug 18, 2023 | 3:37 PM

ಬಾಲಿವುಡ್​ ಬಾದ್​ಷಾ ಶಾರುಖ್ ಖಾನ್​​ (Shah Rukh Khan) ಅವರು ‘ಜವಾನ್​’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸುವ ಸಾಧ್ಯತೆ ಇದೆ. ಈ ಹಿಂದಿನ ಎಲ್ಲ ದಾಖಲೆಗಳು ಉಡೀಸ್​ ಆಗಲಿವೆ ಎಂದು ಅಂದಾಜಿಸಲಾಗುತ್ತಿದೆ. ಈ ವರ್ಷ ಆರಂಭದಲ್ಲಿ ಬಿಡುಗಡೆ ಆಗಿದ್ದ ‘ಪಠಾಣ್​’ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆ ಚಿತ್ರಕ್ಕಿಂತಲೂ ಹೆಚ್ಚಿನ ಕಮಾಯಿಯನ್ನು ಜವಾನ್​’ ಸಿನಿಮಾ (Jawan Movie) ಮಾಡಬಹುದು ಎಂದು ಬಾಕ್ಸ್ ಆಫೀಸ್​ ಪಂಡಿತರು ಊಹಿಸುತ್ತಿದ್ದಾರೆ. ವಿದೇಶದಲ್ಲಿ ಮೊದಲ ದಿನ ಈ ಚಿತ್ರಕ್ಕೆ ಬರೋಬ್ಬರಿ 50 ಕೋಟಿ ರೂಪಾಯಿ ಕಲೆಕ್ಷನ್​ (Box Office Collection) ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಶಾರುಖ್​ ಖಾನ್​ ಅವರ ಅಭಿಮಾನಿಗಳ ಈ ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

‘ಜವಾನ್​’ ಸಿನಿಮಾದ ಮೇಲೆ ಇಷ್ಟೆಲ್ಲ ಹೈಪ್​ ಕ್ರಿಯೇಟ್​ ಆಗಲು ಅನೇಕ ಕಾರಣಗಳಿವೆ. ಸ್ಟಾರ್​ ಕಲಾವಿದರ ದಂಡು, ಪ್ರತಿಭಾವಂತ ತಂತ್ರಜ್ಞರ ಸಮಾಗಮ, ಅದ್ದೂರಿ ಮೇಕಿಂಗ್​ ಸೇರಿದಂತೆ ಹಲವು ಅಂಶಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಅಟ್ಲಿ ಮತ್ತು ಶಾರುಖ್​ ಖಾನ್​ ಅವರು ಜಂಟಿಯಾಗಿ ಕೆಲಸ ಮಾಡಿರುವುದರಿಂದ ಅಭಿಮಾನಿಗಳ ಕಾತರ ಹೆಚ್ಚಾಗಿದೆ. ಇನ್ನೂ ಅನೇಕ ಸರ್ಪ್ರೈಸ್​ಗಳು ಈ ಚಿತ್ರದಲ್ಲಿ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಜವಾನ್​’ ಚಿತ್ರಕ್ಕಾಗಿ ತಮ್ಮದೇ ಹಳೇ ನಿಯಮ ಮುರಿದುಕೊಂಡ್ರಾ ನಯನತಾರಾ?

‘ಪಠಾಣ್​’ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 37 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಆ ಮೂಲಕ ವಿದೇಶಿ ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಆ ಚಿತ್ರ ಒಳಗಾಗಿತ್ತು. ಒಂದು ವೇಳೆ ‘ಜವಾನ್’ ಸಿನಿಮಾ 50 ಕೋಟಿ ರೂಪಾಯಿ ಗಳಿಸಿದರೆ ‘ಪಠಾಣ್​’ ಚಿತ್ರದ ದಾಖಲೆಯನ್ನು ಮುರಿದಂತಾಗುತ್ತದೆ. ಸೆಪ್ಟೆಂಬರ್​ 7ರಂದು ‘ಜವಾನ್’ ಬಿಡುಗಡೆ ಆಗಲಿದೆ. ಅಂದು ಶಾರುಖ್​ ಖಾನ್​ ಅಭಿಮಾನಿಗಳ ಪಾಲಿಗೆ ಹಬ್ಬದ ವಾತಾವರಣ ನಿರ್ಮಾಣ ಆಗಲಿದೆ.

ಇದನ್ನೂ ಓದಿ: ‘ಜವಾನ್​’ ತಂಡದವರ ವಿರುದ್ಧವೇ ಕೇಸ್ ಹಾಕಿದ ಶಾರುಖ್ ಖಾನ್; ಏನು ಕಾರಣ?

‘ಜವಾನ್​’ ಬಿಡುಗಡೆ ಆಗಲು ಇನ್ನೂ ಒಂದಷ್ಟು ದಿನ ಬಾಕಿ ಇದೆ. ಈಗಾಗಲೇ ವಿದೇಶದಲ್ಲಿ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಆರಂಭ ಆಗಿದೆ. ಮೂಲಗಳ ಪ್ರಕಾರ ಅಮೆರಿಕದಲ್ಲಿ ಸಾವಿರಾರು ಟಿಕೆಟ್​ಗಳು ಸೋಲ್ಡ್ಔಟ್​ ಆಗಿವೆ. 61 ಲಕ್ಷ ರೂಪಾಯಿ ಮೌಲ್ಯದ ಟಿಕೆಟ್​ಗಳು ಮಾರಾಟ ಆಗಿವೆ. ದಿನದಿಂದ ದಿನಕ್ಕೆ ಕ್ರೇಜ್​ ಹೆಚ್ಚಾಗುತ್ತಿದ್ದು ಸೆಪ್ಟೆಂಬರ್​ 7ರ ವೇಳೆಗೆ ದೊಡ್ಡ ಬಿಸ್ನೆಸ್​ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ, ನಯನತಾರಾ, ಸಾನ್ಯಾ ಮಲ್ಹೋತ್ರಾ, ವಿಜಯ್​ ಸೇತುಪತಿ ಮುಂತಾದವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ?
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಇವತ್ತು ಚಾಮುಂಡಿತಾಯಿ ದರ್ಶನದ ನಂತರ ನಾಳೆ ಬೆಂಗಳೂರಲ್ಲಿ ಓಡಾಡಲಿದೆ ಕಾರು!
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?