‘ಜವಾನ್​’ ತಂಡದವರ ವಿರುದ್ಧವೇ ಕೇಸ್ ಹಾಕಿದ ಶಾರುಖ್ ಖಾನ್; ಏನು ಕಾರಣ?

ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದ್ದಾಗ ಆ ಚಿತ್ರದ ಕ್ಲಿಪ್, ಸೆಟ್​​ನ ಫೋಟೋ ಹಾಗೂ ಮ್ಯೂಸಿಕ್​ಗಳನ್ನು ಲೀಕ್ ಮಾಡಲಾಗುತ್ತದೆ. ‘ಜವಾನ್’ ಚಿತ್ರಕ್ಕೂ ಇದೇ ತೊಂದರೆ ಎದುರಾಗಿದೆ. ಕೆಲವರು ಈ ಚಿತ್ರದ ಕ್ಲಿಪ್​ನ ಹರಿಬಿಟ್ಟಿದ್ದು, ಶಾರುಖ್ ಖಾನ್ ಚಿಂತೆಗೆ ಕಾರಣ ಆಗಿದೆ. ಹಾಗಾಗಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

‘ಜವಾನ್​’ ತಂಡದವರ ವಿರುದ್ಧವೇ ಕೇಸ್ ಹಾಕಿದ ಶಾರುಖ್ ಖಾನ್; ಏನು ಕಾರಣ?
ಜವಾನ್​ ಸಿನಿಮಾ ಪೋಸ್ಟರ್​
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Aug 13, 2023 | 8:49 AM

ನಟ ಶಾರುಖ್ ಖಾನ್ (Shah Rukh Khan) ಅಭಿನಯದ ‘ಜವಾನ್’ ಸಿನಿಮಾ (Jawan Movie) ಬಗ್ಗೆ ಮೂಡಿರುವ ನಿರೀಕ್ಷೆ ಅಷ್ಟಿಷ್ಟಲ್ಲ. ಈ ಸಿನಿಮಾ ಅಪೂರ್ವ ಸಂಗಮಕ್ಕೆ ಸಾಕ್ಷಿ ಆಗಿದೆ. ಬಾಲಿವುಡ್​ ನಟ ಶಾರುಖ್ ಖಾನ್​ ಹಾಗೂ ತಮಿಳು ನಿರ್ದೇಶಕ ಅಟ್ಲೀ ಅವರು ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಶಾರುಖ್ ಚಿತ್ರದಲ್ಲಿ ವಿಜಯ್ ಸೇತುಪತಿ ಇದೇ ಮೊದಲ ಬಾರಿಗೆ ವಿಲನ್ ಪಾತ್ರ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ನಯನತಾರಾ ತೆರೆ ಹಂಚಿಕೊಂಡಿದ್ದಾರೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಚಿತ್ರ ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಮಧ್ಯೆ ಶಾರುಖ್​ ಖಾನ್ ಒಡೆತನದ ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ (Red Chillies Entertainment) ದೂರೊಂದನ್ನು ನೀಡಿದೆ. ಇದನ್ನು ಆಧರಿಸಿ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದ್ದಾಗ ಆ ಚಿತ್ರದ ಕ್ಲಿಪ್, ಸೆಟ್​​ನ ಫೋಟೋ ಹಾಗೂ ಮ್ಯೂಸಿಕ್​ಗಳನ್ನು ಲೀಕ್ ಮಾಡಲಾಗುತ್ತದೆ. ‘ಜವಾನ್’ ಚಿತ್ರಕ್ಕೂ ಇದೇ ತೊಂದರೆ ಎದುರಾಗಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿರುವುದರಿಂದ ಕೆಲವರು ಈ ಚಿತ್ರದ ಕ್ಲಿಪ್​ನ ಹರಿಬಿಟ್ಟಿದ್ದಾರೆ. ಇದು ಶಾರುಖ್ ಖಾನ್ ಚಿಂತೆಗೆ ಕಾರಣ ಆಗಿದೆ. ಈ ಕಾರಣಕ್ಕೆ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

‘ಸುಮ್ಮನಿರಿ.. 2 ಮಕ್ಕಳ ತಾಯಿ ಅವರು’: ನಯನತಾರಾ ಮೇಲೆ ಲವ್​ ಆಯ್ತಾ ಅಂತ ಕೇಳಿದ್ದಕ್ಕೆ ಶಾರುಖ್​ ಉತ್ತರ

ಆಗಸ್ಟ್ 10ರಂದು ಮುಂಬೈನ ಸಾಂತಾಕ್ರ್ಯೂಜ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಕ್ಲಿಪ್ ಲೀಕ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾರುಖ್ ಖಾನ್ ಸೂಚಿಸಿದ್ದಾರೆ ಎನ್ನಲಾಗಿದೆ. ಸಿನಿಮಾದ ಕ್ಲಿಪ್​ಗಳು ತಂಡದವರನ್ನು ಹೊರತುಪಡಿಸಿ ಮತ್ತಾರಿಗೂ ಸಿಗುವುದಿಲ್ಲ. ಶಾರುಖ್​ಗೆ ಈ ಬಗ್ಗೆ ಅನುಮಾನ ಮೂಡಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಹೀಗಾಗಿ ಶಾರುಖ್ ಖಾನ್ ತಂಡದವರ ವಿರುದ್ಧವೇ ಕೇಸ್ ಹಾಕಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಜವಾನ್​ ಸಿನಿಮಾ ಬಗ್ಗೆ ಶಾರುಖ್ ಖಾನ್ ಟ್ವೀಟ್​:

‘ಜವಾನ್’ ಸಿನಿಮಾದ ಕ್ಲಿಪ್​ಗಳು ಲೀಕ್ ಆಗಿದ್ದು ಇದೇ ಮೊದಲೇನೂ ಅಲ್ಲ. ಶೂಟಿಂಗ್ ಆರಂಭ ಆದಾಗಿನಿಂದಲೂ ತಂಡಕ್ಕೆ ಈ ರೀತಿಯ ತೊಂದರೆ ಎದುರಾಗುತ್ತಲೇ ಇದೆ. ಈ ಮೊದಲು ಕೂಡ ರೆಡ್​ ಚಿಲ್ಲೀಸ್​ನವರು ಕೋರ್ಟ್ ಮೆಟ್ಟಿಲು ಹತ್ತಿದ್ದರು. ತಂಡದ ಪರವಾಗಿ ಕೋರ್ಟ್ ಆದೇಶ ನೀಡಿತ್ತು. ಲೀಕ್ ಆದ ಕ್ಲಿಪ್​ಗಳನ್ನು ತೆಗೆಯುವಂತೆ ಸೋಶಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ಕೋರ್ಟ್ ಆದೇಶ ನೀಡಿತ್ತು. ಇನ್ನು ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಲೀಕ್ ತಪ್ಪಿಸಲು ಮೊಬೈಲ್ ಫೋನ್​ಗಳ ಮೇಲೆ ಬ್ಯಾನ್ ಹೇರಲಾಗಿತ್ತು.

ಇದನ್ನೂ ಓದಿ: ಜೋರಾಯ್ತು ‘ಜವಾನ್​’ ಚಿತ್ರದ ಹವಾ; ಕೆಲವೇ ನಿಮಿಷಗಳಲ್ಲಿ ಮಿಲಿಯನ್​ ದಾಟಿದ ‘ಜಿಂದಾ ಬಂದಾ’ ಹಾಡಿನ ವೀಕ್ಷಣೆ

‘ಜವಾನ್​’ ಚಿತ್ರವನ್ನು ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನಲ್ಲಿ ಬ್ಯಾಕ್​ ಟು ಬ್ಯಾಕ್ ಹಿಟ್ ನೀಡಿರುವ ಅಟ್ಲೀ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ದೊಡ್ಡ ತಾರಾ ಬಳಗ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಪ್ರಿವ್ಯೂ ವಿಡಿಯೋ ಹಾಗೂ ಟೀಸರ್ ಗಮನ ಸೆಳೆದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ