AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುಮ್ಮನಿರಿ.. 2 ಮಕ್ಕಳ ತಾಯಿ ಅವರು’: ನಯನತಾರಾ ಮೇಲೆ ಲವ್​ ಆಯ್ತಾ ಅಂತ ಕೇಳಿದ್ದಕ್ಕೆ ಶಾರುಖ್​ ಉತ್ತರ

Nayanthara: ಸಿನಿಮಾದಲ್ಲಿ ಒಟ್ಟಿಗೆ ನಟಿಸಿದಾಗ ಆ ಕಲಾವಿದರ ನಡುವೆ ಆಪ್ತತೆ ಹೆಚ್ಚುತ್ತದೆ. ಕೆಲವರಿಗೆ ಪ್ರೀತಿ ಚಿಗುರುತ್ತದೆ. ‘ಜವಾನ್​’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ನಯನತಾರಾ ಮತ್ತು ಶಾರುಖ್​ ಖಾನ್​ ನಡುವೆ ಅಂಥ ಪ್ರೀತಿ ಹುಟ್ಟಿಕೊಂಡಿದೆಯೇ ಎಂಬ ಗುಮಾನಿ ಕೆಲವರಿಗೆ ಇದೆ.

‘ಸುಮ್ಮನಿರಿ.. 2 ಮಕ್ಕಳ ತಾಯಿ ಅವರು’: ನಯನತಾರಾ ಮೇಲೆ ಲವ್​ ಆಯ್ತಾ ಅಂತ ಕೇಳಿದ್ದಕ್ಕೆ ಶಾರುಖ್​ ಉತ್ತರ
ಶಾರುಖ್​ ಖಾನ್​, ನಯನತಾರಾ
ಮದನ್​ ಕುಮಾರ್​
|

Updated on: Aug 10, 2023 | 6:42 PM

Share

ನಟ ಶಾರುಖ್​ ಖಾನ್​ (Shah Rukh Khan) ಅವರು ಇತ್ತೀಚೆಗೆ ಅಭಿಮಾನಿಗಳಿಗಾಗಿ ಒಂದಷ್ಟು ಸಮಯ ಮೀಸಲಿಡುತ್ತಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್​ ಆಗಿದ್ದರೂ ಕೂಡ ಅವರು ಅಭಿಮಾನಿಗಳನ್ನು ಮರೆತಿಲ್ಲ. ಸಾಧ್ಯವಾದಾಗಲೆಲ್ಲ ಸೋಶಿಯಲ್​ ಮೀಡಿಯಾ ಮೂಲಕ ಫ್ಯಾನ್ಸ್​ ಜೊತೆ ಪ್ರಶ್ನೋತ್ತರ ನಡೆಸುತ್ತಾರೆ. ಆಗ ಅವರಿಗೆ ಬಗೆಬಗೆಯ ಪ್ರಶ್ನೆಗಳು ಎದುರಾಗುತ್ತವೆ. ಅವುಗಳಿಗೆ ಶಾರುಖ್​ ಖಾನ್​ ಅವರು ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬರು ಒಂದು ವಿಚಿತ್ರ ಪ್ರಶ್ನೆ ಹೇಳಿದ್ದಾರೆ. ನಯನತಾರಾ (Nayanthara) ಜೊತೆ ಶಾರುಖ್​ ಖಾನ್​ಗೆ ಲವ್​ ಆಗಿದೆಯೇ ಎಂದು ನೇರವಾಗಿ ಕೇಳಲಾಯಿತು. ಆ ಪ್ರಶ್ನೆಯನ್ನು ಶಾರುಖ್​ ಖಾನ್​ ಅವರು ಕೂಡಲೇ ತಳ್ಳಿಹಾಕಿದ್ದಾರೆ. ಸದ್ಯಕ್ಕೆ ಈ ಟ್ವೀಟ್​ ವೈರಲ್​ ಆಗಿದೆ. ಜವಾನ್​’ (Jawan) ಸಿನಿಮಾದಲ್ಲಿ ಶಾರುಖ್​ ಖಾನ್​ ಮತ್ತು ನಯನತಾರಾ ಅವರು ಜೊತೆಯಾಗಿ ನಟಿಸಿದ್ದಾರೆ.

ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದಾಗ ಆ ಕಲಾವಿದರ ನಡುವೆ ಆಪ್ತತೆ ಹೆಚ್ಚುತ್ತದೆ. ಕೆಲವರಿಗೆ ಪ್ರೀತಿ ಚಿಗುರುತ್ತದೆ. ‘ಜವಾನ್​’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ನಯನತಾರಾ ಮತ್ತು ಶಾರುಖ್​ ಖಾನ್​ ನಡುವೆ ಅಂಥ ಪ್ರೀತಿ ಹುಟ್ಟಿಕೊಂಡಿದೆಯೇ ಎಂಬ ಗುಮಾನಿ ಕೆಲವರಿಗೆ ಇದೆ. ಆ ಬಗ್ಗೆ ಟ್ವಿಟರ್​ ಮೂಲಕ ನೇರವಾಗಿ ಪ್ರಶ್ನೆ ಕೇಳಲಾಯಿತು. ‘ನಯನತಾರಾ ಮೇಡಂ ಮೇಲೆ ನಿಮಗೆ ಪ್ರೀತಿ ಆಗಿದೆಯೋ ಅಥವಾ ಇಲ್ಲವೋ’ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ. ‘ಸುಮ್ಮನಿರಿ. ಅವರು 2 ಮಕ್ಕಳ ತಾಯಿ’ ಎಂದು ಶಾರುಖ್​ ಖಾನ್​ ಉತ್ತರಿಸಿದ್ದಾರೆ.

ಎಲ್ಲ ರೀತಿಯ ಪಾತ್ರಗಳನ್ನು ಮಾಡುವ ಮೂಲಕ ನಯನತಾರಾ ಅವರು ಜನರನ್ನು ರಂಜಿಸಿದ್ದಾರೆ. ‘ಜವಾನ್​’ ಸಿನಿಮಾದಲ್ಲಿ ಅವರಿಗೆ ಖಡಕ್​ ಆದಂತಹ ಪಾತ್ರ ಇದೆ ಎಂಬುದಕ್ಕೆ ಪ್ರಿವ್ಯೂ ವಿಡಿಯೋದಲ್ಲಿ ಸುಳಿವು ಸಿಕ್ಕಿದೆ. ಈ ಸಿನಿಮಾದ ಶೂಟಿಂಗ್​ ನಡೆಯುತ್ತಿರುವಾಗಲೇ ನಯನತಾರಾ ಅವರು ಬ್ರೇಕ್​ ತೆಗೆದುಕೊಂಡು ವಿಘ್ನೇಶ್​ ಶಿವನ್​ ಜೊತೆ ಮದುವೆ ಆಗಿದ್ದರು. ಆ ಶುಭದಿನಕ್ಕೆ ಶಾರುಖ್​ ಖಾನ್​ ಕೂಡ ಸಾಕ್ಷಿ ಆಗಿದ್ದರು. ಈ ಸಿನಿಮಾ ಮೂಲಕ ಇಬ್ಬರ ನಡುವೆ ಉತ್ತಮವಾದ ಒಡನಾಟ ಬೆಳೆದಿದೆ.

ಇದನ್ನೂ ಓದಿ: ಜೋರಾಯ್ತು ‘ಜವಾನ್​’ ಚಿತ್ರದ ಹವಾ; ಕೆಲವೇ ನಿಮಿಷಗಳಲ್ಲಿ ಮಿಲಿಯನ್​ ದಾಟಿದ ‘ಜಿಂದಾ ಬಂದಾ’ ಹಾಡಿನ ವೀಕ್ಷಣೆ

ಅಟ್ಲಿ ನಿರ್ದೇಶನದ ‘ಜವಾನ್​’ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಮತ್ತು ನಯನತಾರಾ ಜೊತೆ ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ ಮುಂತಾದವರು ಕೂಡ ನಟಿಸಿದ್ದಾರೆ. ಶಾರುಖ್​ ಖಾನ್​ ಅವರ ಪಾತ್ರಕ್ಕೆ ಹಲವು ಶೇಡ್ಸ್ ಇರಲಿವೆ. ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈಗಾಗಲೇ ಹಾಡು ಮತ್ತು ಪೋಸ್ಟರ್​ಗಳು ಹವಾ ಕ್ರಿಯೇಟ್​ ಮಾಡಿವೆ. ಈ ಸಿನಿಮಾದ ಬಾಕ್ಸ್​ ಆಫೀಸ್​ ಗಳಿಕೆ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಜ್ಯುವೆಲ್ಲರಿ ಅಂಗಡಿಗೆ ಕನ್ನ: ಸಿಸಿಟಿವಿಯ ಡಿವಿಆರ್ ಕದ್ದೊಯ್ದ ಖದೀಮರು
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಮದ್ವೆಯಾದ ಹತ್ತೇ ದಿನದಲ್ಲಿ ನವವಿವಾಹಿತ ಜೈಲು ಪಾಲು!
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ಅಲೋಕ್ ಕುಮಾರ್ ವಿಶೇಷ ಕಾರ್ಯಾಚರಣೆ:ಮಂಗಳೂರು ಜೈಲು ಪರಿಶೀಲನೆ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ
ವಾಹನ ಸವಾರರೇ ಎಚ್ಚರ ಎಚ್ಚರ: ಬೆಂಗಳೂರಲ್ಲಿ ಪಂಕ್ಚರ್ ಮಾಫಿಯಾ ಮತ್ತೆ ಸಕ್ರಿಯ