AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾಲಕ ಈಗ ಬಾಲಿವುಡ್​ನ ಸೂಪರ್​ ಸ್ಟಾರ್​, ಭವಿಷ್ಯದ ಡಾನ್​; ಯಾರು ಅಂತ ಗೊತ್ತಾಯ್ತಾ?

ಸೆಲೆಬ್ರಿಟಿಗಳು ತಾವು ಚಿಕ್ಕ ವಯಸ್ಸಿನಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಾರೆ. ಅವುಗಳಿಗೆ ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಾರೆ. ಈಗ ಬಾಲಿವುಡ್​ನ ಓರ್ವ ಸ್ಟಾರ್​ ಹೀರೋ ಫೋಟೋ ವೈರಲ್​ ಆಗಿದೆ.

ಈ ಬಾಲಕ ಈಗ ಬಾಲಿವುಡ್​ನ ಸೂಪರ್​ ಸ್ಟಾರ್​, ಭವಿಷ್ಯದ ಡಾನ್​; ಯಾರು ಅಂತ ಗೊತ್ತಾಯ್ತಾ?
ಬಾಲಿವುಡ್​ ನಟನ ಬಾಲ್ಯದ ಫೋಟೋ
ಮದನ್​ ಕುಮಾರ್​
|

Updated on: Aug 11, 2023 | 11:08 AM

Share

ನಟ-ನಟಿಯರ ಬಾಲ್ಯದ ಫೋಟೋಗಳ (Childhood Photo) ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ತಮ್ಮ ನೆಚ್ಚಿನ ಕಲಾವಿದರು ಬಾಲ್ಯದಲ್ಲಿ ಹೇಗೆ ಕಾಣುತ್ತಿದ್ದರು ಎಂಬುದನ್ನು ತಿಳಿಯುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಹಾಗಾಗಿ ಸೆಲೆಬ್ರಿಟಿಗಳು ತಾವು ಚಿಕ್ಕ ವಯಸ್ಸಿನಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಾರೆ. ಅವುಗಳಿಗೆ ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಾರೆ. ಈಗ ಬಾಲಿವುಡ್​ನ ಓರ್ವ ಸ್ಟಾರ್​ ಹೀರೋ ಫೋಟೋ ವೈರಲ್​ ಆಗಿದೆ. ಅಂದು ಚಿಕ್ಕ ಬಾಲಕನಾಗಿದ್ದ ಅವರು ಈಗ ಬಹುಬೇಡಿಕೆಯ ಸ್ಟಾರ್​. ಭವಿಷ್ಯದಲ್ಲಿ ಡಾನ್​ ಕೂಡ ಆಗುತ್ತಾರೆ. ಯಾರು ಅಂತ ಗೊತ್ತಾಯ್ತಾ? ಇದು ಬೇರೆ ಯಾರೂ ಅಲ್ಲ, ನಟ ರಣವೀರ್​ ಸಿಂಗ್​! ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಅವರು ಹೊಸ ಸಿನಿಮಾದ (Don 3) ತಯಾರಿಯಲ್ಲಿದ್ದಾರೆ. ರಣವೀರ್​ ಸಿಂಗ್​ (Ranveer Singh) ಅವರ ಬಾಲ್ಯದ ಈ ಫೋಟೋ ಗಮನ ಸೆಳೆಯುತ್ತಿದೆ.

ಬಾಲಿವುಡ್​ನಲ್ಲಿ ‘ಡಾನ್​’ ಸಿನಿಮಾ ಸರಣಿ ತುಂಬ ಫೇಮಸ್​. ಈಗಾಗಲೇ ಅಮಿತಾಭ್​ ಬಚ್ಚನ್​ ಮತ್ತು ಶಾರುಖ್ ಖಾನ್​ ಅವರು ಡಾನ್​ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ‘ಡಾನ್​ 3’ ಸಿನಿಮಾದಲ್ಲಿ ಶಾರುಖ್​ ಖಾನ್​ ನಟಿಸುತ್ತಿಲ್ಲ. ಅವರ ಬದಲಿಗೆ ರಣವೀರ್​ ಸಿಂಗ್​ ಅವರಿಗೆ ಅವಕಾಶ ಸಿಕ್ಕಿದೆ. ಈಗಾಗಲೇ ನಿರ್ದೇಶಕ ಫರ್ಹಾನ್​ ಅಖ್ತರ್​ ಅವರು ‘ಡಾನ್​ 3’ ಚಿತ್ರವನ್ನು ಅನೌನ್ಸ್​ ಮಾಡಿದ್ದಾರೆ. ಅದರ ಬೆನ್ನಲ್ಲೇ ರಣವೀರ್​ ಸಿಂಗ್​ ಅವರು ಬಾಲ್ಯದ ಫೋಟೋ ಹಂಚಿಕೊಂಡು ತಮ್ಮ ಮನದ ಮಾತುಗಳನ್ನು ತಿಳಿಸಿದ್ದಾರೆ.

ಅಮಿತಾಭ್​ ಬಚ್ಚನ್​ ಮತ್ತು ಶಾರುಖ್​ ಖಾನ್​ ಅವರು ಮಾಡಿ ಸೈ ಎನಿಸಿಕೊಂಡ ಪಾತ್ರವನ್ನು ಈಗ ಬೇರೆ ನಟ ಮುಂದುವರಿಸುವುದು ಎಂದರೆ ಸುಲಭದ ಮಾತಲ್ಲ. ಅದು ದೊಡ್ಡ ಜವಾಬ್ದಾರಿ. ಅದನ್ನು ತಾವು ಸಮರ್ಥವಾಗಿ ನಿಭಾಯಿಸುವುದಾಗಿ ರಣವೀರ್​ ಸಿಂಗ್​ ಭರವಸೆ ನೀಡಿದ್ದಾರೆ. ಅಮಿತಾಭ್​ ಬಚ್ಚನ್​ ಮತ್ತು ಶಾರುಖ್​ ಖಾನ್​ಗೆ ಹೆಮ್ಮೆ ಆಗುವ ರೀತಿಯಲ್ಲಿ ನಟಿಸುವುದಾಗಿ ರಣವೀರ್​ ಸಿಂಗ್​ ಹೇಳಿದ್ದಾರೆ. ತಮ್ಮ ಮೇಲೆ ನಂಬಿಕೆ ಇಟ್ಟು ಈ ಪಾತ್ರ ನೀಡಿದ ಚಿತ್ರತಂಡಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ‘ಒಂದು ಎಚ್ಚರಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು’; ದೀಪಿಕಾ ಪಡುಕೋಣೆ ಹಾಟ್​ ಅವತಾರಕ್ಕೆ ದಂಗಾದ ಪತಿ ರಣವೀರ್​ ಸಿಂಗ್​

ಇತ್ತೀಚಿನ ವರ್ಷಗಳಲ್ಲಿ ರಣವೀರ್​ ಸಿಂಗ್​ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘83’, ‘ಜಯೇಶ್​ಭಾಯ್​ ಜೋರ್ದಾರ್​’ ಮುಂತಾದ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಸಾಧಾರಣ ಗಳಿಕೆ ಮಾಡಿದೆ. ಮುಂದಿನ ಸಿನಿಮಾಗಳಲ್ಲಿ ರಣವೀರ್​ ಸಿಂಗ್​ ಅವರು ಹೆಚ್ಚು ಶ್ರಮ ಮತ್ತು ಕಾಳಜಿ ವಹಿಸಿ ಕೆಲಸ ಮಾಡಬೇಕಿದೆ. ‘ಡಾನ್​ 3’ ಸಿನಿಮಾದಲ್ಲಿ ಭರಪೂರ ಮನರಂಜನೆ ನೀಡುವುದಾಗಿ ಅವರು ತಿಳಿಸಿದ್ದಾರೆ. ಈ ಚಿತ್ರದ ಟೀಸರ್​ ಇತ್ತೀಚೆಗೆ ಬಿಡುಗಡೆ ಆಗಿ ಗಮನ ಸೆಳೆದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ