Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಲನ್ ಪಾತ್ರಕ್ಕೆ ಸಹಿ ಹಾಕಿದ್ರಾ ಕಿಯಾರಾ? ‘ಡಾನ್ 3’ ಚಿತ್ರದಲ್ಲಿ ವಿಶೇಷ ರೋಲ್

ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ. ಅವರು ಸದ್ಯಕ್ಕಂತೂ ಬಾಲಿವುಡ್​ಗೆ ಮರಳುವುದು ಅನುಮಾನವೇ. ಹೀಗಾಗಿ, ಅವರು ಮಾಡಿದ್ದ ರೋಮಾ ಪಾತ್ರಕ್ಕೆ ಮತ್ತೊಬ್ಬರ ಆಯ್ಕೆ ನಡೆಯಬೇಕಿದೆ. ಈಗ ಕಿಯಾರಾ ಮಾಡುತ್ತಿರುವುದು ರೋಮಾ ಪಾತ್ರ ಅಲ್ಲ ಎನ್ನಲಾಗುತ್ತಿದೆ.

ವಿಲನ್ ಪಾತ್ರಕ್ಕೆ ಸಹಿ ಹಾಕಿದ್ರಾ ಕಿಯಾರಾ? ‘ಡಾನ್ 3’ ಚಿತ್ರದಲ್ಲಿ ವಿಶೇಷ ರೋಲ್
ಕಿಯಾರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 10, 2023 | 1:52 PM

ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಹೊಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲಿಕೆ ಆಗುತ್ತದೆ. ಈಗ ಕಿಯಾರಾ ಅವರು ‘ಡಾನ್ 3’ (Don 3 Movie) ಚಿತ್ರದಲ್ಲಿ ನಟಿಸೋಕೆ ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಅವರು ಮಾಡ್ತಿರೋದು ನೆಗೆಟಿವ್ ಶೇಡ್​​ನ ಪಾತ್ರ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಕಿಯಾರಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇಷ್ಟು ದಿನ ಗ್ಲಾಮರ್ ಪಾತ್ರಗಳ ಮೂಲಕ ಗಮನ ಸೆಳೆದ ಅವರು ನೆಗೆಟಿವ್ ರೋಲ್​ನ ಹೇಗೆ ನಿರ್ವಹಿಸುತ್ತಾರೆ ಎಂದು ಕಾದು ನೋಡಬೇಕಿದೆ.

‘ಡಾನ್ 2’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಪೊಲೀಸ್ ಪಾತ್ರ ಮಾಡಿದರೆ ಶಾರುಖ್ ಖಾನ್ ಅವರು ಡಾನ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ‘ಡಾನ್ 3’ ಚಿತ್ರದಲ್ಲಿ ಪಾತ್ರವರ್ಗ ಬದಲಾಗುತ್ತಿದೆ. ಶಾರುಖ್ ಖಾನ್ ಬದಲು ರಣವೀರ್ ಸಿಂಗ್​ಗೆ ಮಣೆ ಹಾಕಲಾಗಿದೆ. ಈ ಚಿತ್ರದಲ್ಲಿ ಕಿಯಾರಾಗೆ ಪ್ರಮುಖ ಪಾತ್ರವೊಂದನ್ನು ನೀಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.

ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ. ಅವರು ಸದ್ಯಕ್ಕಂತೂ ಬಾಲಿವುಡ್​ಗೆ ಮರಳುವುದು ಅನುಮಾನವೇ. ಹೀಗಾಗಿ, ಅವರು ಮಾಡಿದ್ದ ರೋಮಾ ಪಾತ್ರಕ್ಕೆ ಮತ್ತೊಬ್ಬರ ಆಯ್ಕೆ ನಡೆಯಬೇಕಿದೆ. ಈಗ ಕಿಯಾರಾ ಮಾಡುತ್ತಿರುವುದು ರೋಮಾ ಪಾತ್ರ ಅಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳಿಗೆ ಚಿತ್ರತಂಡದಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಕಿಯಾರಾ ಅಡ್ವಾಣಿ ಅವರು ಗ್ಲಾಮರ್ ಲುಕ್​ನಲ್ಲಿ ಪಡ್ಡೆಗಳ ಗಮನ ಸೆಳೆದವರು. ಅವರು ವಿಲನ್ ರೀತಿಯ ಪಾತ್ರಗಳನ್ನು ಈವರೆಗೆ ನಿರ್ವಹಿಸಿಲ್ಲ. ಹೀಗಾಗಿ, ಅವರು ಈ ಪಾತ್ರ ಒಪ್ಪಿಕೊಂಡಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಸೃಷ್ಟಿ ಆಗಿದೆ. ಅವರು ಈ ಚಿತ್ರದ ಮೂಲಕ ಹೊಸ ರೀತಿಯಲ್ಲಿ ಪ್ರೇಕ್ಷಕರ ಎದುರು ಬರಲು ರೆಡಿ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.

‘ಡಾನ್ 3’ ಚಿತ್ರದಿಂದ ಶಾರುಖ್ ಖಾನ್ ಹೊರನಡೆದಿದ್ದಾರೆ ಎಂಬ ವಿಚಾರ ಈ ಮೊದಲೇ ವರದಿ ಆಗಿತ್ತು. ಆದರೆ, ಇದನ್ನು ಚಿತ್ರತಂಡದವರು ಅಧಿಕೃತ ಮಾಡಿರಲಿಲ್ಲ. ಇತ್ತೀಚೆಗೆ ಹೊಸ ವಿಡಿಯೋ ಹಂಚಿಕೊಂಡು ಈ ವಿಚಾರವನ್ನು ಖಚಿತಪಡಿಸಲಾಗಿದೆ. ಶಾರುಖ್ ಖಾನ್ ಜಾಗಕ್ಕೆ ರಣವೀರ್ ಸಿಂಗ್ ಅವರನ್ನು ಕರೆತರಲಾಗಿದೆ. ‘ಡಾನ್’ ಹಾಗೂ ‘ಡಾನ್ 2’ ಚಿತ್ರಗಳನ್ನು ನಿರ್ದೇಶಿಸಿ ಫರ್ಹಾನ್ ಅಖ್ತರ್ ಫೇಮಸ್ ಆಗಿದ್ದಾರೆ. ಅವರು ಮೂರನೇ ಪಾರ್ಟ್​ಗೂ ನಿರ್ದೇಶನ ಮಾಡಲಿದ್ದಾರೆ. ಶಾರುಖ್ ಖಾನ್ ಇಲ್ಲದ ‘ಡಾನ್’ ಸರಣಿಯನ್ನು ಅಭಿಮಾನಿಗಳು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಸದ್ಯ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ: ಬಿಕಿನಿಯಲ್ಲಿ ಸಮುದ್ರಕ್ಕೆ ಜಿಗಿದು ಬರ್ತ್​ಡೇ ಆಚರಿಸಿಕೊಂಡ ನಟಿ ಕಿಯಾರಾ ಅಡ್ವಾಣಿ

2014ರಲ್ಲಿ ರಿಲೀಸ್ ಆದ ‘ಫಗ್ಲಿ’ ಚಿತ್ರದ ಮೂಲಕ ಕಿಯಾರಾ ಬಣ್ಣದ ಬದುಕು ಆರಂಭಿಸಿದರು. 9 ವರ್ಷಗಳಲ್ಲಿ ಅವರು ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್​ಗಳನ್ನು ನೀಡಿದ್ದಾರೆ. ಅವರ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಶಂಕರ್ ನಿರ್ದೇಶನದ ಈ ಚಿತ್ರಕ್ಕೆ ರಾಮ್ ಚರಣ್ ಹೀರೋ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:26 pm, Thu, 10 August 23

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!