ಸಾರಾ ಅಲಿ ಖಾನ್​ಗೆ ಜನ್ಮದಿನದ ಸಂಭ್ರಮ; ಇಲ್ಲಿದೆ ಖಾನ್​ ಫ್ಯಾಮಿಲಿ ಟ್ರೀ

Sara Ali Khan Birthday: ಸಾರಾ ಅಲಿ ಖಾನ್ ಅಜ್ಜ ಅಂದರೆ ಸೈಫ್ ಅಲಿ ಖಾನ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಪಟೌಡಿಯ ಎಂಟನೇ ನವಾಬ್ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ. ಸಾರಾ ಅಲಿ ಖಾನ್ ಅವರ ಅಜ್ಜಿ ಶರ್ಮಿಳಾ ಟಾಗೋರ್ ಅವರು ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದರು

ಸಾರಾ ಅಲಿ ಖಾನ್​ಗೆ ಜನ್ಮದಿನದ ಸಂಭ್ರಮ; ಇಲ್ಲಿದೆ ಖಾನ್​ ಫ್ಯಾಮಿಲಿ ಟ್ರೀ
ಸಾರಾ ಅಲಿ ಖಾನ್ ಕುಟುಂಬ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 12, 2023 | 11:19 AM

ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಅವರಿಗೆ ಇಂದು (ಆಗಸ್ಟ್ 12) ಜನ್ಮದಿನದ ಸಂಭ್ರಮ. ಅವರು 28 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೈಫ್ ಅಲಿ ಖಾನ್ ಮತ್ತು ಅಮೃತಾ ಅವರ ಪುತ್ರಿಯಾಗಿ ಸಾರಾ ಜನಿಸಿದರು. ಅವರಿಗೆ ಚಿತ್ರರಂಗದಲ್ಲಿ ಯಶಸ್ಸು ಸಿಗುತ್ತಿದೆ. ಈ ವರ್ಷ ರಿಲೀಸ್ ಆದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಯಶಸ್ಸು ಕಂಡಿದೆ. ಹೀಗಾಗಿ ಅವರಿಗೆ ಬರ್ತ್​ಡೇ ವಿಶೇಷ ಎನಿಸಿಕೊಂಡಿದೆ. ನಟಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರ ಫ್ಯಾಮಿಲಿ ಟ್ರೀ ಬಗ್ಗೆ ಇಲ್ಲಿದೆ ಮಾಹಿತಿ.

ಸಾರಾ ಅಲಿ ಖಾನ್ ಅಜ್ಜ ಅಂದರೆ ಸೈಫ್ ಅಲಿ ಖಾನ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಪಟೌಡಿಯ ಎಂಟನೇ ನವಾಬ್ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ. ಸಾರಾ ಅಲಿ ಖಾನ್ ಅವರ ಅಜ್ಜಿ ಶರ್ಮಿಳಾ ಟಾಗೋರ್ ಅವರು ಬಾಲಿವುಡ್​ನಲ್ಲಿ ಆ್ಯಕ್ಟೀವ್ ಆಗಿದ್ದರು. 60ರಿಂದ 70ರ ದಶಕದವರೆಗೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಶರ್ಮಿಳಾ 1968ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ವಿವಾಹವಾದರು. ಶರ್ಮಿಳಾ-ಮನ್ಸೂರ್​​ಗೆ ಮೂವರು ಮಕ್ಕಳು. ಸಬಾ ಚಿತ್ರರಂಗದಿಂದ ದೂರವಿದ್ದರೆ, ಸೈಫ್ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಸೈಫ್ ಅಲಿ ಖಾನ್ ತಮಗಿಂತ 12 ವರ್ಷ ದೊಡ್ಡವರಾದ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಅಮೃತಾ ಧರ್ಮವನ್ನು ಬದಲಾಯಿಸಿಕೊಂಡರು. ಮದುವೆಯಾದ ನಂತರ ಅಮೃತಾ ಸಿಂಗ್​ಗೆ ಸಿನಿಮಾದಿಂದ ಹಲವು ಆಫರ್​ಗಳು ಬಂದವು. ಮದುವೆಯಾದ 4 ವರ್ಷಗಳ ಬಳಿಕ ಸಾರಾ ಅಲಿ ಖಾನ್ ಜನಿಸಿದರು. ಆ ಬಳಿಕ ಇಬ್ರಾಹಿಂ ಅಲಿ ಖಾನ್ ಹುಟ್ಟಿದರು. ಆದರೆ ಕೆಲವು ವರ್ಷಗಳ ಬಳಿಕ ಸೈಫ್​-ಅಮೃತಾ ಬೇರೆ ಆದರು. ಸದ್ಯ ಸಾರಾ ಅಮ್ಮನ ಜೊತೆ ವಾಸವಾಗಿದ್ದಾರೆ. ಅವರಿಗೆ ಹಿಂದೂ ದೇವರ ಮೇಲೆ ಭಕ್ತಿ ಇದೆ.

ಸಾರಾ ಅಲಿ ಖಾನ್ ಅವರು ಕ್ಯೂಟ್‌ನೆಸ್ ಮತ್ತು ಹಾಟ್ ಅವತಾರದಲ್ಲಿ ಎಲ್ಲರ ಮನ ಗೆದ್ದಿದ್ದಾರೆ. ಸಾರಾ ಅಲಿ ಖಾನ್ ‘ಕೇದಾರನಾಥ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸೆಲೆಬ್ರಿಟಿ ಕುಟುಂಬದ ಹಿನ್ನೆಲೆ ಇರುವುದರಿಂದ ಸುಲಭದಲ್ಲಿ ಅವಕಾಶ ಪಡೆದರು. ಸಾರಾ ಅಲಿ ಖಾನ್ ಸಹೋದರ ಇಬ್ರಾಹಿಂ ಚಿತ್ರರಂಗಕ್ಕೆ ಶೀಘ್ರವೇ ಕಾಲಿಡಲಿದ್ದಾರೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ವಿಚಾರದಲ್ಲಿ ಜೂನಿಯರ್ ಎನ್​ಟಿಆರ್ ಅಭಿಮಾನಿಗಳಿಗೆ ಶುರುವಾಗಿದೆ ಟೆನ್ಷನ್

ಸೈಫ್ ಅಲಿ ಖಾನ್ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ವಿಲನ್ ಆಗಿ, ನಟನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡಿದ್ದರು. ಈಗ ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಸೈಫ್ ನಟಿ ಕರೀನಾ ಕಪೂರ್ ಅವರನ್ನು ಮದುವೆ ಆಗಿದ್ದಾರೆ.

ಕರೀನಾ ಕಪೂರ್ ಖಾನ್- ಸೈಫ್ ಅಲಿ ಖಾನ್ ಪ್ರೀತಿಸಿ ಮದುವೆ ಆದವರು. ಸೈಫ್ ಅಲಿ ಖಾನ್​ಗಿಂತ ಕರೀನಾ ಕಪೂರ್ 10 ವರ್ಷ ಚಿಕ್ಕವರು. ಇಬ್ಬರ ಮದುವೆ 2012ರಲ್ಲಿ ನಡೆಯಿತು. ಈ ದಂಪತಿಗೆ ತೈಮೂರ್ ಅಲಿ ಖಾನ್ ಮತ್ತು ಜೆಹ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಸೈಫ್​ನ ಮದುವೆ ಆದ ಕಾರಣಕ್ಕೆ ಕರೀನಾ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ