Sara Ali Khan: ಅಪ್ಪನ ಸಿನಿಮಾ ಬಿಡುಗಡೆಯಿಂದ ಮಗಳ ಚಿತ್ರಕ್ಕೆ ಹೊಡೆತ; ‘ಆದಿಪುರುಷ್’ ವರ್ಸಸ್ ‘ಜರಾ ಹಟ್ಕೆ ಜರಾ ಬಚ್ಕೆ’
Zara Hatke Zara Bachke: ‘ಆದಿಪುರುಷ್’ ಸಿನಿಮಾದ ಕ್ರೇಜ್ ಜೋರಾಗಿದೆ. ಸಾವಿರಾರು ಪರದೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿರುವುದರಿಂದ ಈಗಾಗಲೇ ರಿಲೀಸ್ ಆಗಿರುವ ‘ಜರಾ ಹಟ್ಕೆ ಜರಾ ಬಚ್ಕೆ’ ರೀತಿಯ ಸಣ್ಣ ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಲಿದೆ.
ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ (Sara Ali Khan) ಅವರು ಚಿತ್ರರಂಗದಲ್ಲಿ ಈಗತಾನೆ ನೆಲೆ ಕಂಡುಕೊಳ್ಳುತ್ತಿದ್ದಾರೆ. ಅವರು ನಟಿಸಿದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಒಂದು ಮಟ್ಟದ ಕಲೆಕ್ಷನ್ ಮಾಡಿದೆ. ಸತತ 14 ದಿನಗಳ ಪ್ರದರ್ಶನದ ಬಳಿಕ ಈ ಸಿನಿಮಾದ ಒಟ್ಟು ಕಲೆಕ್ಷನ್ 61 ಕೋಟಿ ರೂಪಾಯಿ ಆಗಿದೆ. ಈ ಚಿತ್ರದಲ್ಲಿ ಸಾರಾ ಅಲಿ ಖಾನ್ಗೆ ಜೋಡಿಯಾಗಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಪ್ರದರ್ಶನವಾದರೆ 70 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇತ್ತು. ಆದರೆ ‘ಆದಿಪುರುಷ್’ (Adipurush) ಸಿನಿಮಾ ಜೂನ್ 16ರಂದು ಬಿಡುಗಡೆ ಆಗಲಿರುವುದರಿಂದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದ ಆಟ ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್ (Saif Ali Khan) ಅವರು ರಾವಣನ ಪಾತ್ರ ಮಾಡಿದ್ದಾರೆ. ಹಾಗಾಗಿ ಸಾರಾ ಅಲಿ ಖಾನ್ ಅವರ ಚಿತ್ರಕ್ಕೆ ಅಪ್ಪನ ಸಿನಿಮಾವೇ ಅಡ್ಡ ಬಂದಂತೆ ಆಗಲಿದೆ.
ದೊಡ್ಡ ಮಟ್ಟದ ನಿರೀಕ್ಷೆ ಇರಲಿಲ್ಲ ಎಂಬ ಕಾರಣಕ್ಕೆ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆಲ್ಲುವುದಿಲ್ಲ ಎಂದು ಕೆಲವರು ಊಹಿಸಿದ್ದರು. ಹೆಚ್ಚೆಂದರೆ ಈ ಚಿತ್ರ 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಆಗುವ ರೀತಿಯಲ್ಲಿ ಕಮಾಯಿ ಆಗಿದೆ. ನಿಧಾನವಾಗಿ ಈ ಸಿನಿಮಾ ಹಿಟ್ ಎನಿಸಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಆದರೆ ಜೂನ್ 16ರ ನಂತರ ಈ ಸಿನಿಮಾದ ಹವಾ ಸಹಜವಾಗಿಯೇ ಕಡಿಮೆ ಆಗಲಿದೆ. ಹಿಂದಿ ಪ್ರೇಕ್ಷಕರ ವಲಯದಲ್ಲಿ ‘ಆದಿಪುರುಷ್’ ಸಿನಿಮಾದ ಕ್ರೇಜ್ ಜೋರಾಗಿದೆ. ಸಾವಿರಾರು ಪರದೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿರುವುದರಿಂದ ಈಗಾಗಲೇ ರಿಲೀಸ್ ಆಗಿರುವ ‘ಜರಾ ಹಟ್ಕೆ ಜರಾ ಬಚ್ಕೆ’ ರೀತಿಯ ಸಣ್ಣ ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಲಿದೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಅನ್ನು ಮರೆತ ಪ್ರಭಾಸ್ ಹಾಗೂ ಆದಿಪುರುಷ್ ತಂಡ: ಈ ಮರೆವು ಉದ್ದೇಶಪೂರ್ವಕವೇ?
ಸೈಫ್ ಅಲಿ ಖಾನ್ ಅವರು ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳನ್ನು ಮಾಡಿ ಅವರು ಯಶಸ್ಸು ಗಳಿಸಿದ್ದಾರೆ. ‘ಆದಿಪುರುಷ್’ ಸಿನಿಮಾದಲ್ಲಿ ಅವರಿಗೆ ರಾವಣನ ಪಾತ್ರ ನೀಡಲಾಗಿದೆ. ರಾಮನಾಗಿ ಪ್ರಭಾಸ್ ಅಭಿನಯಿಸಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೋನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಆಂಜನೇಯನ ಪಾತ್ರದಲ್ಲಿ ದೇವದತ್ತ ನಾಗೆ ನಟಿಸಿದ್ದಾರೆ. ಎಲ್ಲರೂ ವಿವಿಧ ನಗರಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಸೈಫ್ ಅಲಿ ಖಾನ್ ಮಾತ್ರ ಪ್ರಚಾರದಿಂದ ದೂರ ಉಳಿದುಕೊಂಡಿದ್ದಾರೆ. ಯಾಕೆ ಹೀಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹಲವು ಬಗೆಯ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: Adipurush: ಕರ್ನಾಟಕವನ್ನು ಕಡೆಗಣಿಸಿದ ‘ಆದಿಪುರುಷ್’ ತಂಡ; ಉತ್ತರ ಭಾರತದ ಮೇಲೆ ಭಾರಿ ವ್ಯಾಮೋಹ
‘ಆದಿಪುರುಷ್’ ಸಿನಿಮಾದ ಮೊದಲ ಟೀಸರ್ ರಿಲೀಸ್ ಆದಾಗ ರಾವಣನ ಪಾತ್ರ ಮಾಡಿದ ಸೈಫ್ ಅಲಿ ಖಾನ್ ಅವರ ಲುಕ್ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಹಾಗಾಗಿ ನಿರ್ದೇಶಕ ಓಂ ರಾವತ್ ಅವರು ಕೆಲವು ಬದಲಾವಣೆ ಮಾಡುವುದು ಅನಿವಾರ್ಯ ಆಯಿತು. ಇತ್ತೀಚೆಗೆ ಇದರ ಹೊಸ ಟ್ರೇಲರ್ ಬಿಡುಗಡೆ ಮಾಡಲಾಯಿತು. ಇದರಲ್ಲಿ ಸೈಫ್ ಅಲಿ ಖಾನ್ ಅವರ ಪಾತ್ರ ಗಮನ ಸೆಳೆದಿದೆ. ಸೀತೆಯನ್ನು ರಾವಣ ಅಪಹರಣ ಮಾಡುವ ದೃಶ್ಯ ಈ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಆ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಬದಲಾದ ಗೆಟಪ್ನಲ್ಲಿ ಸೈಫ್ ಅಲಿ ಖಾನ್ ಅವರನ್ನು ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.