AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ಕರ್ನಾಟಕವನ್ನು ಕಡೆಗಣಿಸಿದ ‘ಆದಿಪುರುಷ್​’ ತಂಡ; ಉತ್ತರ ಭಾರತದ ಮೇಲೆ ಭಾರಿ ವ್ಯಾಮೋಹ

Prabhas: ಹಿಂದಿ ವರ್ಷನ್​ ಪ್ರಚಾರಕ್ಕೆ ಅಪಾರ ಆಸಕ್ತಿ ವಹಿಸಿರುವ ‘ಆದಿಪುರುಷ್​’ ಚಿತ್ರತಂಡವು ಕನ್ನಡದ ಬಗ್ಗೆ ಗಮನ ಹರಿಸಿಲ್ಲ. ಕರ್ನಾಟಕದಲ್ಲಿ ಯಾವುದೇ ಪ್ರಚಾರ ಕಾರ್ಯಕ್ರಮ ಮಾಡಿಲ್ಲ.

Adipurush: ಕರ್ನಾಟಕವನ್ನು ಕಡೆಗಣಿಸಿದ ‘ಆದಿಪುರುಷ್​’ ತಂಡ; ಉತ್ತರ ಭಾರತದ ಮೇಲೆ ಭಾರಿ ವ್ಯಾಮೋಹ
ಪ್ರಭಾಸ್​
ಮದನ್​ ಕುಮಾರ್​
|

Updated on: Jun 15, 2023 | 1:13 PM

Share

ಬಹಳ ದೊಡ್ಡ ಮಟ್ಟದಲ್ಲಿ ‘ಆದಿಪುರುಷ್​’ ಸಿನಿಮಾ (Adipurush Movie) ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಓಂ ರಾವತ್​ ಅವರು ನಿರ್ದೇಶನ ಮಾಡಿದ್ದಾರೆ. ರಾಮಾಯಣದ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್​ (Prabhas) ಅವರು ರಾಮನ ಪಾತ್ರ ನಿಭಾಯಿಸಿದ್ದಾರೆ. ಸೀತೆಯಾಗಿ ಕೃತಿ ಸನೋನ್​ (Kriti Sanon) ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಮೇಲೆ ಹೈಪ್​ ಕ್ರಿಯೇಟ್​ ಆಗಿದೆ. ಜೂನ್​ 16ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಆದಿಪುರುಷ್​’ ತೆರೆಕಾಣಲಿದೆ. ಹಿಂದಿ, ತೆಲುಗು ಮಾತ್ರವಲ್ಲದೇ ಕನ್ನಡ, ಮಲಯಾಳಂ ಹಾಗೂ ತಮಿಳಿನಲ್ಲೂ ಈ ಸಿನಿಮಾ ಪ್ರದರ್ಶನ ಆಗಲಿದೆ. ಆದರೆ ಹಿಂದಿ ಮತ್ತು ತೆಲುಗಿನಲ್ಲಿ ಮಾತ್ರ ಹೆಚ್ಚಿನ ಪ್ರಚಾರ ಮಾಡಲಾಗುತ್ತಿದೆ. ಕನ್ನಡ, ಮಲಯಾಳಂ ಹಾಗೂ ತಮಿಳು ವರ್ಷನ್​ಗಳ ಪ್ರಚಾರಕ್ಕೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಆದಿಪುರುಷ್​’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿರುವುದು ಹಿಂದಿ ಚಿತ್ರರಂಗದ ನಿರ್ದೇಶಕ ಓಂ ರಾವತ್​. ನಾಯಕಿ ಕೃತಿ ಸನೋನ್​ ಕೂಡ ಬಾಲಿವುಡ್​ನವರು. ರಾವಣನ ಪಾತ್ರ ಮಾಡಿದ ಸೈಫ್​ ಅಲಿ ಖಾನ್​, ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿರುವ ಸನ್ನಿ ಸಿಂಗ್​, ಆಂಜನೇಯನ ಪಾತ್ರ ಮಾಡಿದ ದೇವದತ್ತ ನಾಗೆ ಕೂಡ ಹಿಂದಿಯವರು. ನಿರ್ಮಾಣ ಸಂಸ್ಥೆಯಾದ ಟಿ-ಸೀರಿಸ್​ ಕೂಡ ಬಾಲಿವುಡ್​ನದ್ದು. ಅದೇ ಕಾರಣಕ್ಕೋ ಏನೋ ಹಿಂದಿ ವರ್ಷನ್​ ಪ್ರಚಾರಕ್ಕೆ ಅಪಾರ ಆಸಕ್ತಿ ವಹಿಸಿರುವ ‘ಆದಿಪುರುಷ್​’ ಚಿತ್ರತಂಡ ಕನ್ನಡ, ಮಲಯಾಳಂ ಮತ್ತು ತಮಿಳು ಪ್ರೇಕ್ಷಕರ ಬಗ್ಗೆ ಸ್ವಲ್ಪವೂ ಗಮನ ಹರಿಸಿಲ್ಲ.

ಇದನ್ನೂ ಓದಿ: Adipurush: ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗಾಗಿ ನಡೆಯಲಿದೆ ‘ಆದಿಪುರುಷ್​’ ಚಿತ್ರದ ಅದ್ದೂರಿ ಪ್ರೀಮಿಯರ್​ ಶೋ

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ‘ಆದಿಪುರುಷ್​’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿತ್ತು. ನಂತರ ಪ್ರೀ-ರಿಲೀಸ್​ ಇವೆಂಟ್​ ಮತ್ತು 2ನೇ ಟ್ರೇಲರ್​ ಬಿಡುಗಡೆಯನ್ನು ತಿರುಪತಿಯಲ್ಲಿ ಮಾಡಲಾಯಿತು. ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಯಾವುದೇ ಇವೆಂಟ್​ ಮಾಡಿಲ್ಲ. ಈ ಮೂರು ರಾಜ್ಯಗಳನ್ನು ಯಾಕೆ ಕಡೆಗಣಿಸಲಾಗಿದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಎಲ್ಲ ರಾಜ್ಯಗಳಲ್ಲೂ ಈಗಾಗಲೇ ಬುಕಿಂಗ್​ ಓಪನ್​ ಆಗಿದೆ. ಜೀರೋ ಪ್ರಮೋಷನ್​ ಮಾಡಿರುವ ಈ ರಾಜ್ಯಗಳಲ್ಲಿ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಕೆಜಿಎಫ್ 2’ ದಾಖಲೆ ಮುರಿಯಲಿದೆಯೇ ‘ಆದಿಪುರುಷ್’ ಸಿನಿಮಾ? ಸಾಧ್ಯವೇ ಇಲ್ಲ ಎನ್ನುತ್ತಿದೆ ಲೆಕ್ಕಾಚಾರ

ದೆಹಲಿಯಲ್ಲಿ ಟಿಕೆಟ್​​ ಬೆಲೆ ದುಬಾರಿ:

ದೆಹಲಿಯಲ್ಲಿ ‘ಆದಿಪುರುಷ್​’ ಸಿನಿಮಾದ ಕ್ರೇಜ್​ ಕೊಂಚ ಜಾಸ್ತಿಯೇ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಈ ಸಿನಿಮಾದ ಟಿಕೆಟ್​ ಬೆಲೆ ಮುಗಿಲು ಮುಟ್ಟಿದೆ. 2250 ರೂಪಾಯಿ ಟಿಕೆಟ್​ ದರ ಇರುವ ಮಾಲ್​ಗಳಲ್ಲೂ ಬಹುತೇಕ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ಇದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. 3ಡಿ ವರ್ಷನ್​ನಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿದೆ. ‘ಬಾಹುಬಲಿ 2’ ಬಳಿಕ ಮತ್ತೊಂದು ದೊಡ್ಡ ಗೆಲುವಿಗಾಗಿ ಪ್ರಭಾಸ್​ ಕಾದಿದ್ದಾರೆ.

ಇದನ್ನೂ ಓದಿ: ಆದಿಪುರುಷ್: ಖಾಲಿ ಸೀಟಿನ ಪಕ್ಕದ ಸೀಟಿಗೆ ಭಾರಿ ಬೆಲೆಯಂತೆ ಹೌದೆ? ಎಲ್ಲ ಹನುಮಂತನ ಮಹಿಮೆ

ಕೆಲವು ಸೆಲೆಬ್ರಿಟಿಗಳು ಸಾವಿರಾರು ಟಿಕೆಟ್​ಗಳನ್ನು ಖರೀದಿಸಿ, ಅವುಗಳನ್ನು ಬಡಮಕ್ಕಳಿಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ. ನಟ ರಣಬೀರ್​ ಕಪೂರ್​ ಅವರು ಬರೋಬ್ಬರಿ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ‘ದಿ ಕಾಶ್ಮೀರ್ ಫೈಲ್ಸ್​’ ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್​ವಾಲ್ ಅವರು ‘ಆದಿಪುರುಷ್​’ ಚಿತ್ರದ 10 ಸಾವಿರ ಟಿಕೆಟ್​ಗಳನ್ನು ಉಚಿತವಾಗಿ ಹಂಚಲು ಮುಂದಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್