Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕನ ಮಗನ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್; ಟೈಟಲ್ ಗುಟ್ಟಾಗಿಯೇ ಇಟ್ಟ ತಂಡ

ಸಂಚಿತ್ ಸಂಜೀವ್ ಅವರ ಸಿನಿಮಾದ ಮುಹೂರ್ತ ಬೆಂಗಳೂರಿನ ಗವಿಪುರದ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ಇಂದು (ಜೂನ್ 15) ಸಿಂಪಲ್ ಆಗಿ ನಡೆದಿದೆ. ಸುದೀಪ್ ಅವರು ಆಗಮಿಸಿ ಕ್ಲ್ಯಾಪ್ ಮಾಡಿ, ತಂಡಕ್ಕೆ ಶುಭಕೋರಿದ್ದಾರೆ.

ಅಕ್ಕನ ಮಗನ ಸಿನಿಮಾಗೆ ಕ್ಲ್ಯಾಪ್ ಮಾಡಿ ಶುಭಕೋರಿದ ಕಿಚ್ಚ ಸುದೀಪ್; ಟೈಟಲ್ ಗುಟ್ಟಾಗಿಯೇ ಇಟ್ಟ ತಂಡ
ಸಂಚಿತ್
Follow us
ರಾಜೇಶ್ ದುಗ್ಗುಮನೆ
|

Updated on:Jun 15, 2023 | 12:39 PM

ಸ್ಟಾರ್ ನಟ-ನಟಿಯರ ಕುಟುಂಬದವರು ಸಿನಿಮಾ ಇಂಡಸ್ಟ್ರಿಗೆ ಬರುತ್ತಾರೆ ಎಂದರೆ ಸಹಜವಾಗಿಯೇ ಕುತೂಹಲ ಇರುತ್ತದೆ. ಈಗ ಕಿಚ್ಚ ಸುದೀಪ್ (Sudeep) ಅಕ್ಕನ ಮಗ ಸಂಚಿತ್ ಸಂಜೀವ್ (Sanchit Sanjeev) ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಅವರನ್ನು ಚಿತ್ರರಂಗಕ್ಕೆ ಸುದೀಪ್ ಲಾಂಚ್ ಮಾಡುತ್ತಿದ್ದಾರೆ. ಇಂದು (ಜೂನ್ 15) ಚಿತ್ರದ ಮುಹೂರ್ತ ನೆರವೇರಿದೆ. ಕಿಚ್ಚ ಸುದೀಪ್ ಆಗಮಿಸಿ ಕ್ಲ್ಯಾಪ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ. ಈ ಚಿತ್ರದ ಟೈಟಲ್ ಇನ್ನೂ ಗುಟ್ಟಾಗಿಯೇ ಇದೆ. ಶೀಘ್ರದಲ್ಲೇ ಅದ್ದೂರಿ ಕಾರ್ಯಕ್ರಮ ಆಯೋಜನೆಗೊಳಿಸಲಾಗುತ್ತಿದೆ. ಅಲ್ಲಿ ಚಿತ್ರದ ಶೀರ್ಷಿಕೆ ಅನಾವರಣ ಆಗುವ ನಿರೀಕ್ಷೆ ಇದೆ.

ಬೆಂಗಳೂರಿನ ಗವಿಪುರದ ಬಂಡೆಮಹಾಕಾಳಿ ದೇವಸ್ಥಾನದಲ್ಲಿ ಇಂದು (ಜೂನ್ 15) ಸಿಂಪಲ್ ಆಗಿ ಮುಹೂರ್ತ ಕಾರ್ಯಕ್ರಮ ನಡೆದಿದೆ. ಸುದೀಪ್ ಅವರು ಆಗಮಿಸಿ ಕ್ಲ್ಯಾಪ್ ಮಾಡಿ, ತಂಡಕ್ಕೆ ಶುಭಕೋರಿದ್ದಾರೆ. ಶೀಘ್ರದಲ್ಲೇ ನಡೆಯುವ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಸದ್ಯ ಈ ಚಿತ್ರಕ್ಕೆ ‘ಪ್ರೊಡಕ್ಷನ್ ನಂಬರ್ 3’ ಎಂದು ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ.

‘ಅಂಬಿ‌ ನಿಂಗೆ ವಯಸ್ಸಾಯ್ತೋ’, ‘ವಿಕ್ರಾಂತ್ ರೋಣ’ ಸಿನಿಮಾಗಳಲ್ಲಿ ಸಂಚಿತ್ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದ್ದರು. ಈಗ ಅವರು ಇದೇ ಮೊದಲ ಬಾರಿಗೆ ಹೀರೋ ಆಗುತ್ತಿದ್ದಾರೆ. ಸಿನಿಮಾದಲ್ಲಿ ನಾಯಕನಾಗಿರುವ ಜೊತೆಗೆ ನಿರ್ದೇಶನವನ್ನೂ ಸಂಚಿತ್ ಅವರೇ ಮಾಡಲಿದ್ದಾರೆ.

ಇದನ್ನೂ ಓದಿ: ಅಕ್ಕನ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಕಿಚ್ಚ ಸುದೀಪ್: ಇಲ್ಲಿವೆ ಹೊಸ ಹೀರೋ ಚಿತ್ರಗಳು

‌ಕೆ.ಪಿ.ಶ್ರೀಕಾಂತ್, ಲಹರಿ‌ ಸಂಸ್ಥೆಯ ಮನೋಹರ್ ನಾಯ್ಡು , ಪ್ರಿಯಾ ಸುದೀಪ್ ನಿರ್ಮಾಣದಲ್ಲಿ ಕಿಚ್ಚನ ಅಳಿಯ ಇಂಡಸ್ಟ್ರಿಗೆ ಎಂಟ್ರಿ ನೀಡಲಿದ್ದಾರೆ. ಹೊಸ ಪ್ರತಿಭೆಗೆ ಸುದೀಪ್ ಬೆಂಬಲ ನೀಡಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರುವಾಗ ಒಂದಷ್ಟು ಸಿದ್ಧತೆ ಬೇಕೇಬೇಕು. ಅದನ್ನು ಮಾಡಿಕೊಂಡಿದ್ದಾರೆ ಸಂಚಿತ್. ‘ವಿ ಆರ್​ ದಿ ಸೇಮ್’ ಹೆಸರಿನ ಕಿರುಚಿತ್ರವನ್ನು ಸಂಚಿತ್ ನಿರ್ದೇಶನ ಮಾಡಿದ್ದಾರೆ. ಮುಂಬೈನಲ್ಲಿ ಅವರು ನಟನೆ ಕಲಿತು ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:21 pm, Thu, 15 June 23