‘ಸಪ್ತ ಸಾಗರದಾಚೆ ಎಲ್ಲೋ’ ಬಿಡುಗಡೆ ದಿನಾಂಕ ಘೋಷಣೆ; ಎರಡೇ ತಿಂಗಳಲ್ಲಿ ಎರಡೂ ಪಾರ್ಟ್ ರಿಲೀಸ್
SSE Movie Release Date: ರಕ್ಷಿತ್ ಶೆಟ್ಟಿ ಅವರು ಸಿನಿಮಾ ವಿಚಾರದಲ್ಲಿ ಎಂದಿಗೂ ಗಡಿಬಿಡಿ ಮಾಡಿದವರಲ್ಲ. ತುಂಬಾನೇ ಶ್ರದ್ಧೆಯಿಂದ ಅವರು ಸಿನಿಮಾ ಮಾಡುತ್ತಾರೆ. ಈ ಕಾರಣಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಾಕಷ್ಟು ಸಮಯ ಹಿಡಿದಿದೆ.
ರಕ್ಷಿತ್ ಶೆಟ್ಟಿ (Rakshit Shetty) ಸಿನಿಮಾ ಎಂದರೆ ಒಂದು ಹೊಸತನ ಇರುತ್ತದೆ. ಅವರ ಮುಂದಿನ ಸಿನಿಮಾ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ರಿಲೀಸ್ ದಿನಾಂಕ ಶೀಘ್ರದಲ್ಲೇ ಘೋಷಣೆ ಆಗಲಿದೆ ಎಂದು ರಕ್ಷಿತ್ ಶೆಟ್ಟಿ ಬರ್ತ್ಡೇ ದಿನ ಘೋಷಣೆ ಮಾಡಲಾಗಿತ್ತು. ಈಗ ಆ ಅನೌನ್ಸ್ಮೆಂಟ್ ಆಗಿದೆ. ರಕ್ಷಿತ್ ಶೆಟ್ಟಿ ಅವರು ‘ಸಪ್ತ ಸಾಗರದಾಚೆ ಎಲ್ಲೋ’ (SSE Movie) ಬಿಡುಗಡೆ ದಿನಾಂಕ ತಿಳಿಸಿದ್ದಾರೆ. ಎರಡೇ ತಿಂಗಳಲ್ಲಿ ಎರಡೂ ಪಾರ್ಟ್ಗಳು ರಿಲೀಸ್ ಆಗಲಿವೆ.
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಆ ಬಳಿಕ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡರು. ಸಿನಿಮಾ ಕೆಲಸಗಳ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಅವರು ಎಂದಿಗೂ ಗಡಿಬಿಡಿ ಮಾಡಿದವರಲ್ಲ. ತುಂಬಾನೇ ಶ್ರದ್ಧೆಯಿಂದ ಅವರು ಸಿನಿಮಾ ಮಾಡುತ್ತಾರೆ. ಈ ಕಾರಣಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಾಕಷ್ಟು ಸಮಯ ಹಿಡಿದಿದೆ. ಈಗ ಈ ಸಿನಿಮಾ ಎರಡು ಭಾಗದಲ್ಲಿ ಬರುತ್ತಿದೆ. ಮೊದಲ ಭಾಗ ಸೆಪ್ಟೆಂಬರ್ 1ಕ್ಕೆ ರಿಲೀಸ್ ಆದರೆ, ಎರಡನೇ ಭಾಗ ಅಕ್ಟೋಬರ್ 20ಕ್ಕೆ ತೆರೆಗೆ ಬರಲಿದೆ.
‘ನಾನು ಈ ಸಿನಿಮಾ ಕಥೆಯನ್ನು 20 ವರ್ಷದ ಹಿಂದೆಯೇ ಬರೆದಿದ್ದೆ. ಇದು ನನ್ನ ಹೃದಯಕ್ಕೆ ಹತ್ತಿರವಾದ ಕಥೆ. ಸಮಯಕ್ಕೆ ತಕ್ಕಂತೆ ಈ ಕಥೆಯಲ್ಲಿ ವಿಕಸನ ಆಗಿದೆ. ಈ ಕಥೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಸೈಡ್ ಎ ಸೆಪ್ಟೆಂಬರ್ 1, ಸೈಡ್ ಬಿ ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ. ಶೀಘ್ರದಲ್ಲೇ ಸಿಗೋಣ’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
I wrote this film 12 years ago. It’s incredibly close to my heart. It’s evolved a lot over time & after all these years, finally, I get to share this story with the rest of the world. Side A of #SSE will be out on 1st Sep & Side B of #SSE on Oct 20th. See you at the movies… pic.twitter.com/sbcpuDlpA7
— Hemanth M Rao (@hemanthrao11) June 15, 2023
ಇದನ್ನೂ ಓದಿ: ಒಂದೇ ಪಾರ್ಟ್ನಲ್ಲಿ ಮುಗಿಯಲ್ಲ ‘ಸಪ್ತ ಸಾಗರದಾಚೆ ಎಲ್ಲೋ’; ರಕ್ಷಿತ್ ಬರ್ತ್ಡೇಗೆ ಬಿಗ್ ಅನೌನ್ಸ್ಮೆಂಟ್
ಈ ಸಿನಿಮಾದ ಮೂಲಕ ಒಂದು ಗಂಭೀರವಾದ ಪ್ರೇಮಕತೆಯನ್ನು ನಿರ್ದೇಶಕ ಹೇಮಂತ್ ರಾವ್ ಹೇಳಲಿದ್ದಾರೆ. ರಕ್ಷಿತ್ಗೆ ಜೊತೆಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಇದೆ. ಈ ಮೊದಲು ರಿಲೀಸ್ ಆದ ರಕ್ಷಿತ್-ಹೇಮಂತ್ ಕಾಂಬಿನೇಷನ್ನ ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ಕೂಡ ಗಂಭೀರ ಕಥೆಯನ್ನೇ ಹೊಂದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ