ವೈರಲ್ ಆಗಿರುವ ‘ಈ ಸುಂದರನ ಸನ್ಯಾಸಿ ಮಾಡಬಹುದೆ’ ಹಾಡಿನ ಹಿನ್ನೆಲೆ ಏನು? ಹಾಡಿದ್ದು ಯಾರು?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 'ಈ ಸುಂದರನ ಸನ್ಯಾಸಿ ಮಾಡಬಹುದೇ' ಹಾಡನ್ನು ಹಾಡಿರುವ ಗಾಯಕ ಇವರೇ. ಈ ಹಾಡು ಎಲ್ಲಿಯದ್ದು? ಹಾಡಿನ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ.

ವೈರಲ್ ಆಗಿರುವ 'ಈ ಸುಂದರನ ಸನ್ಯಾಸಿ ಮಾಡಬಹುದೆ' ಹಾಡಿನ ಹಿನ್ನೆಲೆ ಏನು? ಹಾಡಿದ್ದು ಯಾರು?
ಮಳವಳ್ಳಿ ಮಹದೇವಸ್ವಾಮಿ
Follow us
ಮಂಜುನಾಥ ಸಿ.
|

Updated on:Jun 15, 2023 | 6:30 PM

ಸಾಮಾಜಿಕ ಜಾಲತಾಣದಲ್ಲಿ (Social Media) ಕಳೆದ ಕೆಲವು ದಿನಗಳಿಂದ ಕನ್ನಡದ ಹಾಡೊಂದು ಸಖತ್ ಟ್ರೆಂಡ್ (Viral S0ng) ಆಗುತ್ತಿದೆ. ”ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ” ಎಂಬ ಜನಪದ ಹಾಡನ್ನು ಬಳಸಿ ಹಲವರು ರೀಲ್ಸ್ ಮಾಡುತ್ತಿದ್ದಾರೆ. ಸಿಂಗಲ್ ಹುಡುಗರನ್ನು ರೇಗಿಸಲು ರೀಲ್ಸ್​ಗಳಲ್ಲಿ ಈ ಹಾಡು ಅತಿಯಾಗಿ ಬಳಕೆಯಾಗುತ್ತಿದೆ. ಹಾಡಿನ ಸಾಹಿತ್ಯ, ಹಾಡನ್ನು ಹಾಡಿರುವ ಅಪ್ಪಟ ಜನಪದ ದನಿ ಕೇಳುಗರನ್ನು ಸೆಳೆಯುತ್ತಿದೆ. ಅಂದಹಾಗೆ ಈ ಹಾಡು ಯಾವುದು? ಹಾಡು ಹಾಡಿದವರು ಯಾರು? ಇಲ್ಲಿದೆ ಮಾಹಿತಿ.

ಈ ಸುಂದರವಾದ ಹಾಡನ್ನು ಅಷ್ಟೆ ಅದ್ಭುತವಾಗಿ ಹಾಡಿರುವುದು ನಾಡಿನ ಜನಪ್ರಿಯ ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ. ಈಗ ವೈರಲ್ ಆಗಿರುವ ‘ಈ ಸುಂದರನ ಸನ್ಯಾಸಿ ಮಾಡಬಹುದೆ’ ಹಾಡು ಅವರು ಹಾಡಿರುವ ಅರ್ಜುನನ ಜೋಗಿ ಹಾಡು ಎಂಬ ಕತೆಯಲ್ಲಿ ಬರುತ್ತದೆ. ಅರ್ಜುನನ ಜೋಗಿ ಹಾಡನ್ನು ಮಳವಳ್ಳಿ ಮಹದೇವಸ್ವಾಮಿಯವರು ಲಹರಿ ಮ್ಯೂಸಿಕ್​ಗಾಗಿ ಕೆಲವು ವರ್ಷಗಳ ಹಿಂದೆ ಹಾಡಿದ್ದರು. ಅದು ಯೂಟ್ಯೂಬ್​ನಲ್ಲಿ ಹಲವು ಭಾಗಗಳಲ್ಲಿ ಲಭ್ಯವಿದೆ.

ಈಗ ವೈರಲ್ ಆಗಿರುವ ಈ ಸುಂದರನ ಸನ್ಯಾಸಿ ಮಾಡಬಹುದೆ ಹಾಡಿನ ಹಿನ್ನೆಲೆಯನ್ನು ಕತೆಯಲ್ಲಿ ವಿವರಿಸಿದ್ದಾರೆ ಮಳವಳ್ಳಿ ಮಹದೇವಸ್ವಾಮಿಯವರು. ಅರ್ಜುನ ಜೋಗಿಯ ವೇಷ ಧರಿಸಿ ವೇಶ್ಯೆಯರ ಬೀದಿಯಲ್ಲಿ ನಡೆದುಕೊಂಡು ಹೋಗುವ ಸನ್ನಿವೇಶ ಕತೆಯಲ್ಲಿ ಬರುತ್ತದೆ. ಆಗ ವೇಶ್ಯೆಯರು ಅರ್ಜುನನ ಅಂದವನ್ನು ಕಂಡು ಹಾಡುವ ಹಾಡಿನ ಮಧ್ಯದಲ್ಲಿ ಈ ಸುಂದರನ ಸನ್ಯಾಸಿ ಮಾಡಬಹುದೆ ಸಾಲು ಬರುತ್ತದೆ. ”ಅಂದ ಸಿರಿ ಗಂದದೊಲವೆ, ಅರಿಮೆಳದ ಕೆಂದವರಿ ಕುಲದ ವನವೆ” ಎಂದು ಆರಂಭವಾಗುವ ಹಾಡಿನಲ್ಲಿ ಜೋಗಿಯ ವೇಷ ತೊಟ್ಟ ಅರ್ಜುನನ ಅಂದವನ್ನು ವಿವರವಾಗಿ ವರ್ಣಿಸಲಾಗಿದೆ. ‘ಇಂದ್ರನಾ ಚಂದನಿವನೊ ಜೋಗಯ್ಯ, ಕಂದ ಮುಕುಂದನಿವನೋ’, ‘ಇಂಥಹಾ ಸುಂದರನ ಅವರ ತಾಯಿಯೇಕೆ ದೂರ ಮಾಡಿಕೊಂಡಳೋ’ ಎಂಬಿತ್ಯಾದಿ ಸಾಲುಗಳು ಹಾಡಿನಲ್ಲಿವೆ.

ನಾಡಿನ ಜನಪ್ರಿಯ ಜನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿಯವರು ಮಲೆ ಮಾದೇಶ್ವರನ ಹಾಡಿನಿಂದಾಗಿ ಬಹಳ ಖ್ಯಾತಿ ಪಡೆದಿದ್ದಾರೆ. ಮಾದೇಶ್ವರ ದಯ ಬಾರದೆ ಹಾಡು ಹಾಡಿದ್ದು ಇವರೆ. ಅರ್ಜುನನ ಜೋಗಿ ಹಾಡು ಸೇರಿದಂತೆ ಹಲವು ಕತೆಗಳನ್ನು ಸೊಗಸಾಗಿ ಮಳವಳ್ಳಿ ಮಹದೇವಸ್ವಾಮಿ ಹಾಡುತ್ತಾರೆ. ಅವರ ಮಲೆ ಮಾದೇಶ್ವರನ ಕತೆ, ಶಿವಶರಣೆ ಸಂಕವ್ವನ ಕತೆ ಇನ್ನೂ ಹಲವಾರು ಕತೆಗಳು ಬಹಳ ಪ್ರಸಿದ್ಧಿ.

ಮಳವಳ್ಳಿ ಬಳಿಯ ಹಳ್ಳಿವರಾದ ಮಹದೇವಸ್ವಾಮಿಯವರು ಚಿಕ್ಕಂದಿನಲ್ಲಿ ಮೇಯರ್ ಮುತ್ತಣ್ಣ ಸಿನಿಮಾದ ಹಳ್ಳಿಯಾದರೇನು ಸಿವ ಹಾಡನ್ನು ಬಹಳ ಚೆನ್ನಾಗಿ ಹಾಡುತ್ತಿದ್ದರಂತೆ. ಅದನ್ನು ಗುರುತಿಸಿದ ಕೆಲವರು ಹಾಡುಗಾರರಾಗಲು ಪ್ರೇರಣೆ ಒದಗಿಸಿದ್ದಾರೆ. ಬಳಿಕ ಕೆಲವು ಹಾಡುಗಳನ್ನು ಕಲಿತು ತಮ್ಮ ಸಹೋದರನೊಟ್ಟಿಗೆ ಬಸ್ಸುಗಳಲ್ಲಿ ಹಾಡಿ ಭಿಕ್ಷೆ ಪಡೆದುಕೊಳ್ಳುತ್ತಿದ್ದರಂತೆ. ಬಳಿಕ ಊರಿನ ಕೇರಿಗಳಲ್ಲಿ ಹಾಡಿ ರಾಗಿ ಭಿಕ್ಷೆ ಪಡೆಯುತ್ತಿದ್ದರಂತೆ. ಬಳಿಕ ಗುರುಗಳೊಬ್ಬರು ಇವರ ಗಾಯನ ಗಮಿಸಿ ಅವರೊಟ್ಟಿಗೆ ಸೇರಿಸಿಕೊಂಡು ರಾಜ್ಯವೆಲ್ಲ ಸುತ್ತಿ ಕತೆಗಳನ್ನು ಕಲಿಸಿದರಂತೆ. ಅಂತೆಯೇ ಹಲವು ಕತೆಗಳನ್ನು ಕಲಿತು ಹಾಡಲು ಶುರು ಮಾಡಿದ ಮಹದೇವಸ್ವಾಮಿಯರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕತೆಗಳನ್ನು ಹಾಡಿದ್ದಾರೆ. ಮಹದೇವಸ್ವಾಮಿಯವರ ಸೇವೆ ಗುರುತಿಸಿ ಕೆಲವು ಪ್ರಶಸ್ತಿಗಳನ್ನು ಸಹ ನೀಡಲಾಗಿದೆ. ಈಗ ದೇಶ, ವಿದೇಶಗಳಲ್ಲಿಯೂ ಮಹದೇವಸ್ವಾಮಿಯವರು ಹಾಡುಗಳನ್ನು ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Thu, 15 June 23

ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್