AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದು ಮಾಡುತ್ತಿರುವ ನಿಂಗವ್ವ ಸಿದ್ದರಾಮಯ್ಯ ಬಗ್ಗೆ ಹೇಳಿದ್ದಿಷ್ಟು

ಬಸ್ ಹತ್ತುವ ಮುನ್ನು ಮೆಟ್ಟಿಲುಗಳಿಗೆ ನಮಸ್ಕರಿಸಿದ್ದ ಅಜ್ಜಿ ನಿಂಗವ್ವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಫ್ರೀ ಬಸ್​ ಶಕ್ತಿ ಯೋಜನೆ ಬಗ್ಗೆ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹೇಳಿದ್ದಿಷ್ಟು

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದು ಮಾಡುತ್ತಿರುವ ನಿಂಗವ್ವ ಸಿದ್ದರಾಮಯ್ಯ ಬಗ್ಗೆ ಹೇಳಿದ್ದಿಷ್ಟು
ರಮೇಶ್ ಬಿ. ಜವಳಗೇರಾ
|

Updated on: Jun 12, 2023 | 12:12 PM

Share

ಬೆಳಗಾವಿ: ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ (Shakti Scheme) ನಿನ್ನೆ(ಜೂನ್ 11) ಸಿಎಂ ಸಿದ್ದರಾಮಯ್ಯನವರು (Siddaramaiah) ಚಾಲನೆ ನೀಡಿದ್ದಾರೆ. ಮತ್ತೊಂದೆಡೆ ಧಾರವಾಡದಲ್ಲಿ (Dharwad) ಶಕ್ತಿ ಯೋಜನೆಗೆ ಚಾಲನೆ ನೀಡಿದ ವೇಳೆ ವೃದ್ಧೆ ನಿಂಗವ್ವಾ ಶಿಂಗಾಡಿ. ಬಸ್ಸಿನ ಮೆಟ್ಟಿಲಿಗೆ ಶಿರವಿಟ್ಟು ನಮಸ್ಕರಿಸಿ ಬಸ್ಸಿನೊಳಗೆ ಪ್ರವೇಶಿಸಿದ್ದು, ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬಸ್ ಹತ್ತುವ ಮುನ್ನ ಅಜ್ಜಿ ಬಸ್ ಮೆಟ್ಟಿಲ ನಮಸ್ಕರಿಸಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವತಃ ಈ ಬಗ್ಗೆ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ಅಜ್ಜಿಯ ಫೋಟೋವನ್ನು ಕೊಂಡಾಡಿದ್ದಾರೆ. ಇದೀಗ ಇದಕ್ಕೆ ಅಜ್ಜಿ ನಿಂಗವ್ವಾ ಶಿಂಗಾಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳಿದ್ದಾಳೆ.

ಇದನ್ನೂ ಓದಿ: ಧಾರವಾಡ: ಉಚಿತ ಪ್ರಯಾಣ, ತಲೆ ಬಾಗಿ ನಮಸ್ಕರಿಸಿ ಬಸ್ ಏರಿದ ಅಜ್ಜಿ

ನಿನ್ನೆ ಧಾರವಾಡದಿಂದ ಸವದತ್ತಿಗೆ ಸಂಬಂಧಿಕರ ಮನೆ ವಾಸ್ತು ಶಾಂತಿಗೆ ಹೊರಟ್ಟಿದ್ದೆ. ಈ ವೇಳೆ ಉಚಿತ ಪ್ರಯಾಣಕ್ಕೆ ಬಿಟ್ಟಿದ್ದಕ್ಕೆ ಬಸ್‌ಗೆ ನಮಸ್ಕರಿಸಿ ಹತ್ತಿದೆ. ಎಲ್ಲ ಹೆಣ್ಣು ಮಕ್ಕಳಿಗೆ ಫ್ರೀ ಮಾಡಿದ್ದಕ್ಕೆ ಬಹಳ ಅನುಕೂಲ ಆಗಿದೆ. ಸಿದ್ದರಾಮಯ್ಯನವರಿಗೆ ಒಳ್ಳೆಯದಾಗಲಿ ಎಂದು ಇಪ್ಪತ್ತು ರೂಪಾಯಿ ಜೋಗಮ್ಮನಿಗೆ ನೀಡಿ ಹರಸಿದ್ದೆ. ಮನೆ ದೇವರು ಮೈಲಾರಕ್ಕೂ ಹೋಗಿ ಬರುತ್ತೇನೆ. ಸಿದ್ದರಾಮಯ್ಯನವರ ಹೆಸರಿನ ಮೇಲೆವಿಶೇಷ ಪೂಜೆ ಮಾಡಿಸುತ್ತೇನೆ. ಸಿದ್ದರಾಮಯ್ಯ ಕುರಿಗಾಹಿಗಳಿಗೆ ಇನ್ನಷ್ಟು ಅನುಕೂಲ ಮಾಡಲಿ ಎಂದ ಅಜ್ಜಿ ನಿಂಗವ್ವಾ ಸಲಹೆ ನೀಡಿದರು.

ನಿಂಗವ್ವ ಶಿಂಗಾಡಿ ಅವರು ಸವದತ್ತಿಯಲ್ಲಿ ಮೊಮ್ಮಗನ ಮನೆ ಗೃಹ ಪ್ರವೇಶ ಇರುವ ಹಿನ್ನೆಲೆ ಸಂಗೊಳ್ಳಿಯಿಂದ ಧಾರವಾಡಕ್ಕೆ ಬಂದು ಸವದತ್ತಿ ಕಡೆಗೆ ಪ್ರಯಾಣ ಮಾಡುತ್ತಿದ್ದರು. ಅದೇ ವೇಳೆ ನಿನ್ನೆ ಮಧ್ಯಾಹ್ನದ ಬಳಿಕ ಬಸ್ ಫ್ರೀ ಎಂದು ಗೊತ್ತಾಗುತ್ತಿದ್ದಂತೆಯೇ ನಿಂಗವ್ವ ಬಸ್ ಮೆಟ್ಟಿಲಿಗೆ ನಮಸ್ಕರಿಸಿ​ದ್ದಳು. ಅಲ್ಲದೇ ಬಸ್​ ಬಿಡುವಾಗ ಉಧೋ ಉಧೋ ಎಂದು ಜಯಘೋಷ ಮೊಳಗಿಸಿದ್ದರು. ನಿಂಗವ್ವ ಬಸ್​​ಗೆ ಮನಸ್ಕರಿಸಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸಿದ್ದರಾಮಯ್ಯನವರು ಸಹ ಟ್ವೀಟ್ ಮಾಡಿ ಈ ಯೋಜನೆ ತಂದಿದ್ದಕ್ಕೆ ಸಾರ್ಥಕವಾಯ್ತು ಎಂದಿದ್ದರು.