AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಓಡು ರಾಖೀ ಓಡು; ಫೋಟೋಗ್ರಾಫರ್​ಗಳಿಂದ ತಪ್ಪಿಸಿಕೊಳ್ಳಲು ಈ ಮ್ಯಾರಾಥಾನ್

Rakhi Sawant : ರಾಖಿ ಹೀಗೆ ಓಡಿದ್ದೇ ಅಂತರ್ಜಾಲದಲ್ಲಿ ಮೀಮ್​ಗಳ ಹೊಳೆ ಹರಿಯುತ್ತಿದೆ; ಇನ್ನೇನು ಇದ್ದ ಒಂದೇ ಒಂದು ಅಂಗಡಿ ಮುಚ್ಚುತ್ತದೆ ಎನ್ನುವಾಗ ನಾನು ಸಿಗರೇಟಿಗಾಗಿ ಹೀಗೇ ಓಡುತ್ತೇನೆ...

Viral Video: ಓಡು ರಾಖೀ ಓಡು; ಫೋಟೋಗ್ರಾಫರ್​ಗಳಿಂದ ತಪ್ಪಿಸಿಕೊಳ್ಳಲು ಈ ಮ್ಯಾರಾಥಾನ್
ಫೋಟೋಗ್ರಾಫರ್​ಗಳಿಂದ ತಪ್ಪಿಸಿಕೊಂಡು ಓಡುತ್ತಿರುವ ರಾಖಿ ಸಾವಂತ
TV9 Web
| Updated By: ಶ್ರೀದೇವಿ ಕಳಸದ|

Updated on:Jun 16, 2023 | 4:02 PM

Share

Paparazzi: ನಟನಟಿಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕೆಂದರೆ  ಹರಸಾಹಸ ಮಾಡಬೇಕು. ಏಕೆಂದರೆ ಫೋಟೋಗ್ರಾಫರ್​ಗಳು ಅದು ಹೇಗೋ ಒಟ್ಟಿನಲ್ಲಿ ಅವರನ್ನು ಸೆರೆಹಿಡಿದೇ ಬಿಟ್ಟಿರುತ್ತಾರೆ. ಹೀಗೆ ಸೆರೆಹಿಡಿಯಲು ಬಂದಾಗ ಪ್ರಭಾವಿ ವ್ಯಕ್ತಿಗಳು ಮುಖಕ್ಕೆ ಕೈಗಳನ್ನು ಅಡ್ಡಹಿಡಿದು ಫೋಟೋ ಬೇಡವೆಂದು ಹೇಳುವುದು ರೂಢಿಗತ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ನಟಿ ರಾಖಿ ಸಾವಂತ ಅಕ್ಷರಶಃ ರನ್ನಿಂಗ್​ ರೇಸಿಗೆ ಇಳಿದಿದ್ದಾರೆ. ಟ್ವಿಟರ್​ನಲ್ಲಿ ಈ ವಿಡಿಯೋ ಸುತ್ತ ಅನೇಕ ಮೀಮ್​ಗಳು ಹುಟ್ಟಿಕೊಳ್ಳುತ್ತಿವೆ.

ನನ್ನನ್ನು ಬಿಡಿ ಬಿಡಿ ಎಂದು ಕಿರುಚಿಕೊಳ್ಳುತ್ತ ಒಂದೇ ಸಮ ಈಕೆ ಪ್ಲ್ಯಾಟ್​ಫಾರ್ಮ್​ ಮೇಲೆ ಶರವೇಗದಲ್ಲಿ ಓಡುತ್ತಿದ್ದಾರೆ. “ಅರೇ ಛೋಡ್ ದೋ, ಪಡೋಸಿ ಕೇ ಲಿಯೇ ಛೋಡ್ ದೋ ಮುಝೆ, ಭಗವಾನ್ ಕೇ ಲಿಯೇ ಛೋಡ್ ದೋ,” ಎನ್ನುತ್ತ ಛಾಯಾಗ್ರಾಹಕರನ್ನು ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾರೋ ಎದುರಿನಿಂದಲೇ ಈಕೆಯ ವಿಡಿಯೋ ಶೂಟ್ ಮಾಡಿದ್ದಾರೆ. ಹಿಂದೆ ಮತ್ತು ಪಕ್ಕದಲ್ಲಿ ಕೆಲವರು ಬೆನ್ನಟ್ಟಿದ್ದಾರೆ.

ಇದನ್ನೂ ಓದಿ : Viral: ಈ ದೇಶ ಬಿಟ್ಟು ಇನ್ನೊಂದೆಡೆ ಹೋಗುತ್ತೀರಾ? ಹಾಗಿದ್ದರೆ ರೂ 70 ಲಕ್ಷ ಕೊಡುತ್ತೇವೆ

ಅಪ್​ರೇಸಲ್ ರಿವ್ಯೂ ಸಮಯದಲ್ಲಿ ಅಷ್ಟೊಂದು ಸಹೋದ್ಯೋಗಿಗಳ, 365 ದಿನಗಳ ಡೇಟಾ ನೋಡಿ ಸ್ಯಾಲರಿ ಹೈಕ್ ಮಾಡಬೇಕಿರುವ ಹಿಂದಿನ ರಾತ್ರಿ ಎಚ್.ಆರ್​. ಹೀಗೇ ಓಡುತ್ತಿರುತ್ತಾರೆ ಎಂದು ಒಬ್ಬರು ಮೀಮ್​ ಸೃಷ್ಟಿಸಿದ್ದಾರೆ. ಇನ್ನೇನು ಇದ್ದ ಒಂದೇ ಒಂದು ಅಂಗಡಿ ಮುಚ್ಚುತ್ತದೆ ಎನ್ನುವಾಗ ನಾನು ಸಿಗರೇಟಿಗಾಗಿ ಹೀಗೇ ಓಡುತ್ತೇನೆ ಎಂದು ಮತ್ತೊಬ್ಬರು ರೀಟ್ವೀಟ್ ಮಾಡಿದ್ದಾರೆ.

ಎಂದಾದರೂ ನೀವು ಹೀಗೆ ಓಡಿದ್ದಿದೆಯೇ? ಯಾಕಾಗಿ ಓಡಿದ್ದೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:00 pm, Fri, 16 June 23