AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನನ್ನದೊಂದು ಅಳಿಲು ಸೇವೆ ಎಂದು ಮನೆ ಮಾಲೀಕನ ಜೊತೆಗೆ ಗೋವಿಗೆ ಹುಲ್ಲು ತಂದ ಶ್ವಾನ

ನಮ್ಮ ಸ್ವಂತದವರೇ ನಮ್ಮ ಸಹಾಯಕ್ಕೆ ಆಗದ ಈ ಕಾಲದಲ್ಲಿ ಇಲ್ಲೊಂದು ನಾಯಿ ತನ್ನ ಮನೆ ಮಾಲೀಕನಿಗೆ ಸಹಾಯವಾಗಲಿ ಎಂದು ಅವರ ಜೊತೆಗೂಡಿ ದನಗಳ ಮೇವಿಗಾಗಿ ತೋಟದಿಂದ ಹುಲ್ಲನ್ನು ತಂದಿದ್ದು, ಈ ಶ್ವಾನದ ನಿಸ್ವಾರ್ಥ ಮನೋಭಾವ ನೆಟ್ಟಿಗರ ಹೃದಯ ಗೆದ್ದಿದೆ.

Viral Video: ನನ್ನದೊಂದು ಅಳಿಲು ಸೇವೆ ಎಂದು ಮನೆ ಮಾಲೀಕನ ಜೊತೆಗೆ ಗೋವಿಗೆ ಹುಲ್ಲು ತಂದ ಶ್ವಾನ
ವೈರಲ್ ವೀಡಿಯೊ
ಮಾಲಾಶ್ರೀ ಅಂಚನ್​
| Edited By: |

Updated on:Jun 16, 2023 | 2:59 PM

Share

ಭೂಮಿಯ ಮೇಲಿನ ಅತ್ಯಂತ ನಿಷ್ಠಾವಂತ ಪ್ರಾಣಿ ನಾಯಿ. ಅದಕ್ಕಾಗಿಯೇ ಅನೇಕರು ನಾಯಿಯನ್ನು ಸಾಕಲು ಇಷ್ಟಪಡುತ್ತಾರೆ. ಕೆಲವರು ನಾಯಿಗಳನ್ನು ಮನೆ ಕಾವಲಿಗಾಗಿ ಸಾಕಿದರೆ, ಇನ್ನೂ ಕೆಲವರು ನಾಯಿಗಳನ್ನು ಮಕ್ಕಳಂತೆ ಸಾಕುತ್ತಾರೆ. ಏನೇ ಇರಲಿ ಅವುಗಳಿಗೆ ಒಂದು ತುತ್ತು ಅನ್ನ ನೀಡಿದರೆ ಸಾಕು ನಿಮ್ಮನ್ನು ಅದು ತನ್ನ ಜೀವಮಾನವಿಡಿ ಮರೆಯಲಾರದು. ಹಾಗೂ ಶ್ವಾನಗಳು ಅನ್ನ ನೀಡಿದ ಮನೆಯವರಿಗೆ ನಿಷ್ಠೆಯನ್ನು ತೋರುತ್ತಾ, ಜೀವಮಾನದಲ್ಲಿ ಅವರಿಗೆ ಋಣಿಯಾಗಿರುತ್ತದೆ. ಇನ್ನೂ ನಮ್ಮ ಸ್ವಂತದದವರೇ ನಮ್ಮ ಸಹಾಯಕ್ಕೆ ಆಗದ ಈ ಕಾಲದಲ್ಲಿ ಇಲ್ಲೊಂದು ರಾಕಿ ಎಂಬ ಹೆಸರಿನ ಶ್ವಾನ ತನ್ನ ಮನೆ ಮಾಲೀಕನಿಗೆ ತನ್ನದೊಂದು ಪುಟ್ಟ ಸೇವೆಯನ್ನು ಮಾಡುತ್ತಿದೆ. ಹೌದು ಮನೆ ಮಾಲೀಕರು ತಮ್ಮ ತೋಟದಿಂದ ದನಗಳ ಮೇವಿಗಾಗಿ ಹುಲ್ಲನ್ನು ತರುವಾಗ ಆ ಮನೆಯ ನಾಯಿಯು ಕೂಡಾ ಅವರ ಜೊತೆಗೆ ಹುಲ್ಲನ್ನು ಹೊತ್ತು ತರುತ್ತದೆ. ಸದ್ಯ ಈ ಹೃದಯಸ್ಪರ್ಶಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವೀಡಿಯೋವನ್ನು ಭಾಸ್ಕರ್ ವಿಲ್ಲಾಸ್ (@bhaskarvilla_s) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮನೆ ಮಾಲೀಕರ ಜೊತೆಯಾಗಿ ಮುದ್ದಾದ ಕಪ್ಪು ಬಣ್ಣದ ನಾಯಿಯೂ ಕೂಡಾ ದನದ ಮೇವಿಗಾಗಿ ಹುಲ್ಲನ್ನು ತರುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಮನೆಯ ಮಾಲೀಕರು ತೋಟದಿಂದ ದನಗಳ ಮೇವಿಗಾಗಿ ಹುಲ್ಲನ್ನು ತರುವಾಗ ರಾಕಿ ಎಂಬ ಹೆಸರಿನ ನಾಯಿ, ನಾನು ಕೂಡಾ ತನ್ನವರಿಗಾಗಿ ಸಹಾಯ ಮಾಡುತ್ತೇನೆ ಎನ್ನುತ್ತಾ ಮನೆಯ ಮಾಲೀಕರ ಜೊತೆಗೆ ತೋಟದಿಂದ ಹುಲ್ಲಿನ ಕಟ್ಟನ್ನು ಹಲ್ಲಿನಲ್ಲಿ ಕಚ್ಚಿಕೊಂಡು ತಂದು, ಅದನ್ನು ದನದ ಕೊಟ್ಟಿಗೆಯ ಮುಂದೆ ಹಾಕುತ್ತದೆ. ಕೊನೆಗೆ ತಮ್ಮ ಮುದ್ದಿನ ಶ್ವಾನಕ್ಕೆ ಮನೆ ಮಾಲೀಕ ಪ್ರೀತಿಯ ಮುತ್ತನ್ನು ನೀಡುವ ಭಾವನಾತ್ಮಕ ದೃಶ್ಯಾವಳಿಯನ್ನು ವೀಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Viral Video: ಮಂಚವನ್ನು ಉಪಯೋಗಿಸಿಕೊಂಡು ಮೋಟಾರು ಗಾಡಿ ತಯಾರಿಸಿದ ವ್ಯಕ್ತಿ

ಮೂರು ದಿನಗಳ ಹಿಂದೆ ಇನ್ಟಾಗ್ರಾಮ್ ನಲ್ಲಿ ಹರಿಬಿಡಲಾದ ಈ ವೀಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 305 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಾಗೂ ಅನೇಕ ಈ ವೀಡಿಯೊಗೆ ಕಮೆಂಟ್​​ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಇದು ಪರಿಶುದ್ಧ ಪ್ರೀತಿ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘14 ವರ್ಷಗಳವರೆಗೆ ಕಡ್ಡಾಯ ಶಿಕ್ಷಣವನ್ನು ಒದಗಿಸಿ ಮತ್ತು ಬಾಲಕಾರ್ಮಿಕತೆಯನ್ನು ತಪ್ಪಿಸಿ’ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನು ಅನೇಕರು ಶ್ವಾನ ಮತ್ತು ಮನೆ ಮಾಲೀಕನ ಪರಿಶುದ್ಧ ಬಾಂಧವ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:56 pm, Fri, 16 June 23

Follow Us
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ