Viral Video: ಮಂಚವನ್ನು ಉಪಯೋಗಿಸಿಕೊಂಡು ಮೋಟಾರು ಗಾಡಿ ತಯಾರಿಸಿದ ವ್ಯಕ್ತಿ

ರಾಜಸ್ಥಾನದ ಯುವಕನೊಬ್ಬ ಮಂಚದಿಂದ ಎಲೆಕ್ಟ್ರಿಕ್ ಮೋಟಾರು ಗಾಡಿಯೊಂದನ್ನು ತಯಾರಿಸಿದ್ದು, ಈತನ ಈ ಪ್ರತಿಭೆಯ ವೀಡಿಯೋವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Video: ಮಂಚವನ್ನು ಉಪಯೋಗಿಸಿಕೊಂಡು ಮೋಟಾರು ಗಾಡಿ ತಯಾರಿಸಿದ ವ್ಯಕ್ತಿ
ವೈರಲ್​ ವೀಡಿಯೊ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 16, 2023 | 3:00 PM

ಎಲ್ಲರೂ ಸಾಮಾನ್ಯವಾಗಿ ಹೇಳುವ ಒಂದು ಮಾತಿದೆ. ಭಾರತದಲ್ಲಿ ಪ್ರತಿಭೆಗಳಿಗೆ ಯಾವುದೇ ರೀತಿಯ ಕೊರೆತೆಯಿಲ್ಲ ಎಂದು. ಹೌದು ಈ ಮಾತು ನಿಜ ಕೂಡಾ. ಭಾರತದಲ್ಲಿ ಹಲವಾರು ಸ್ಥಳೀಯ ಪ್ರತಿಭೆಗಳಿವೆ. ತಮ್ಮ ಕಲ್ಪನೆಗೆ ಹೊಸ ರೆಕ್ಕೆಯನ್ನು ಕಟ್ಟಿ ವಾಹನವನ್ನು ತಯಾರಿಸುವಂತಹದ್ದೋ ಅಥವಾ ಹೊಸ ಗೃಹಪಯೋಗಿ ಯಂತ್ರಗಳನ್ನು ಆವಿಷ್ಕರಿಸುವಂತಹದ್ದೋ ಮಾಡುತ್ತಿರುತ್ತಾರೆ. ಇಂತಹ ಹಲವು ಸುದ್ದಿಗಳನ್ನು ನಾವು ಕೇಳಿರುತ್ತೇವೆ. ಇದೇ ರೀತಿ ರಾಜಸ್ಥಾನದ ಯುವಕನೊಬ್ಬ ಮಂಚದಿಂದ ಮೋಟಾರು ವಾಹನವನ್ನು ತಯಾರಿಸಿದ್ದು, ಈ ವಿಡಿಯೋವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ವೀಡಿಯೋದಲ್ಲಿ ರಾಜಸ್ಥಾನದ ಯುವಕ ತನ್ನ ಕಲ್ಪನೆಗೆ ಮತ್ತು ಸೃಜನಶೀಲತೆಗೆ ಹೊಸ ರೆಕ್ಕೆಯನ್ನು ನೀಡಿ ಮಲಗುವ ಮಂಚವನ್ನು ವಾಹನವನ್ನಾಗಿ ಪರಿವರ್ತಿಸಿದ್ದಾನೆ. ಈ ವ್ಯಕ್ತಿಯ ಆವಿಷ್ಕರಿಸಿದ ಈ ಮೋಟಾರು ವಾಹನ ಸಾರಿಗೆ ನಿಯಮಗಳನ್ನು ಉಲ್ಲಂಘಿಸುವಂತಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ರೀತಿಯ ಅದ್ಭುತ ಭಾರತೀಯ ಜನರ ಪ್ರತಿಭೆ ಮತ್ತು ನಾವೀನ್ಯತೆಯನ್ನು ಶ್ಲಾಘಿಸಿದರು. ಅವರು ಟ್ವೀಟ್ ನಲ್ಲಿ “ನಾನು ಕನಿಷ್ಠ ಹತ್ತು ಸ್ನೇಹಿತರಿಂದ ಈ ವೀಡಿಯೋವನ್ನು ಸ್ವೀಕರಿಸಿರಬಹುದು. ಈ ಗಾಡಿ ಹೆಚ್ಚಿನ ಸಾರಿಗೆ ನಿಯಮಗಳನ್ನು ಉಲ್ಲಂಘಿಸುವಂತಿದೆ ಆದರೆ ಯಾರಿಗೆ ಗೊತ್ತು ಇದು ದೂರದ ಹಳ್ಳಿ ಪ್ರದೇಶಗಳಲ್ಲಿ ಕಠಿಣ ಸಂದರ್ಭಗಳು ಎದುರಾದಾಗ ಜೀವರಕ್ಷಕವಾಗಿ ಕಾರ್ಯನಿರ್ವಹಿಸಬಹುದು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Brain Teaser: ಚಿತ್ರದಲ್ಲಿ ತನ್ನ ಮಾಲೀಕರಿಂದ ಬೇರ್ಪಟ್ಟ ಎರಡು ನಾಯಿಗಳನ್ನು ಕಂಡುಹಿಡಿಯಿರಿ ನೋಡಾ

ಮೂಲತಃ ಈ ವೀಡಿಯೋವನ್ನು ಮಂಜರಿ ದಾಸ್ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದೇ ವೀಡಿಯೋವನ್ನು ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮರುಹಂಚಿಕೊಂಡಿದ್ದಾರೆ. ಮೂಲ ಪೋಸ್ಟ್ ನಲ್ಲಿ “ತುರ್ತು ಅಗತ್ಯತೆಗಳು ಅಥವಾ ವೈದ್ಯಕೀಯ ಪರಿಸ್ಥಿತಿಯನ್ನು ಪೂರೈಸಲು ಹಳ್ಳಿಗಳಲ್ಲಿ ನಿಜವಾಗಿಯೂ ಸಹಾಯಕವಾಗಬಲ್ಲ ವಾಹನ” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ.

ವೀಡಿಯೋದಲ್ಲಿ ವ್ಯಕ್ತಿ ನವೀಕರಿಸಿದ ತನ್ನ ವಾಹನವನ್ನು ಪೆಟ್ರೋಲ್ ಬಂಕ್ ನ ಆವರಣದ ಸುತ್ತಲೂ ಓಡಿಸುತ್ತಿರುವುದನ್ನು ಕಾಣಬಹುದು. ಮಂಚಕ್ಕೆ ನಾಲ್ಕು ಬದಿಯಲ್ಲೂ ಬೈಸಿಕಲ್ ಚಕ್ರಗಳು ಹಾಗೂ ಸ್ಟೀರಿಂಗ್ ವೀಲ್, ಬ್ಯಾಟರಿ ಮತ್ತು ಹಿಂಬದಿಯ ಚಕ್ರಗಳಿಗೆ ಎಲೆಕ್ಟ್ರಿಕ್ ಮೋಟಾರನ್ನು ಅಳವಡಿಸಿ ಗಾಡಿಯನ್ನು ತಯಾರಿಸಲಾಗಿದೆ.

ವೈರಲ್ ವೀಡಿಯೋ 449.6 ಸಾವಿರ ವೀಕ್ಷಣೆಗಳನ್ನು ಹಾಗೂ 597 ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವು ಕಮೆಂಟ್ಸ್ ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ‘ನಾವು ಸುದ್ದಿಗಳಲ್ಲಿ ಓದಿರಬಹುದು, ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸಲು ಮೈಲಿಗಳ ದೂರದವರೆಗೆ ಹಾಸಿಗೆಯಲ್ಲಿ ಹೊತ್ತುಕೊಂಡು ಹೋದ ಪತಿ. ಇಂತಹ ಕಠಿಣ ಸಮಯದಲ್ಲಿ ಈ ರೀತಿಯ ಗಾಡಿಗಳನ್ನು ಬಳಸಬಹುದು. ಇದು ಸಮಯ, ಶ್ರಮದ ಜೊತೆಗೆ ಒಂದು ಅಮೂಲ್ಯ ಜೀವವನ್ನೂ ಉಳಿಸುತ್ತದೆ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ರಸ್ತೆ ಸಾರಿಗೆ ಇಲಾಖೆಯು ಇಂತಹ ಅಸುರಕ್ಷಿತ ವಾಹನವನ್ನು ರಸ್ತೆಗಿಳಿಯಲು ಹೇಗೆ ಅನುಮತಿಸಬಹುದು? ನಾವು ಈ ವಿಷಯಗಳನ್ನು ಪ್ರಚಾರ ಮಾಡಬಾರದು. ತುರ್ತು ಸಮಯದಲ್ಲಿ ಆಂಬ್ಯುಲೆನ್ಸ್ ಬಳಸಬಹುದಲ್ಲವೇ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು “ ವೀಡಿಯೋದಲ್ಲಿ ಮೊದಲಿಗೆ ತಮಾಷೆಯಂತೆ ತೋರುತ್ತಿದ್ದರೂ, ದೂರದ ಪ್ರದೇಶಗಳಲ್ಲಿ ತುರ್ತು ಸಮಯದಲ್ಲಿ ಇಂತಹ ಗಾಡಿಗಳು ಜೀವರಕ್ಷಕರಾಗಿ ಕೆಲಸ ಮಾಡಬಹುದು’ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:24 pm, Fri, 16 June 23