AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Brain Teaser: ಚಿತ್ರದಲ್ಲಿ ತನ್ನ ಮಾಲೀಕರಿಂದ ಬೇರ್ಪಟ್ಟ ಎರಡು ನಾಯಿಗಳನ್ನು ಕಂಡುಹಿಡಿಯಿರಿ ನೋಡಾ

ಸಾಮಾಜಿಕ ಜಾಲತಾಣದಲ್ಲಿ ಮೆದುಳಿಗೆ ಕೆಲಸ ನೀಡುವ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ ಸುಂದರವಾದ ಉದ್ಯಾನವನದಲ್ಲಿ ಒಂದಷ್ಟು ಜನರು ತಮ್ಮ ನಾಯಿಗಳ ಜೊತೆಗೆ ಆಟವಾಡುತ್ತಿರುವುದನ್ನು ಕಾಣಬಹುದು. ಈ ಪೈಕಿ ಎರಡು ನಾಯಿಗಳು ತಮ್ಮ ಮಾಲೀಕರಿಂದ ತಪ್ಪಿಸಿಕೊಂಡಿವೆ. ಆ ಕಳೆದುಹೋದ ನಾಯಿಗಳನ್ನು 43 ಸೆಕೆಂಡುಗಳ ಒಳಗೆ ಹುಡುಕಲು ವೀಕ್ಷಕರಿಗೆ ಸವಾಲು ನೀಡಲಾಗಿದೆ.

Viral Brain Teaser: ಚಿತ್ರದಲ್ಲಿ ತನ್ನ ಮಾಲೀಕರಿಂದ ಬೇರ್ಪಟ್ಟ ಎರಡು ನಾಯಿಗಳನ್ನು ಕಂಡುಹಿಡಿಯಿರಿ ನೋಡಾ
ವೈರಲ್​ ಫೋಸ್ಟ್​
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Jun 16, 2023 | 3:01 PM

Share

ಸಾಮಾಜಿಕ ಮಾಧ್ಯಮಗಳನ್ನು ವೀಕ್ಷಿಸುವುದರಿಂದ ಸಮಯ ವ್ಯರ್ಥ ಎಂದು ಹಲವರು ಹೇಳುತ್ತಾರೆ. ಇದರ ಹೊರತಾಗಿಯೂ ಸಾಮಾಜಿಕ ಮಾಧ್ಯಮವನ್ನು ಸರಿಯಾಗಿ ಬಳಸಿಕೊಂಡರೆ ನಮ್ಮ ಜ್ಞಾನವನ್ನು ಹೆಚ್ಚಿಸಬಹುದು. ಮನರಂಜನೆಯಿಂದ ಹಿಡಿದು ನಮ್ಮ ಜ್ಞಾನವನ್ನು ಹೆಚ್ಚಿಸುವವರೆಗೆ ಹಲವಾರು ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ಇದರಲ್ಲಿ ಒಗಟಿನ ಆಟಗಳು ಕೂಡಾ ಒಂದು. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಮೆದುಳಿಗೆ ಕೆಲಸ ನೀಡುವ ಆಟಗಳು ಹೆಚ್ಚಾಗಿ ವೈರಲ್ ಆಗುತ್ತಿವೆ. ಇಂತಹ ಆಟಗಳು ಮೆದುಳಿನ ಚುರುಕುತನವನ್ನು ಹೆಚ್ಚಿಸುವುದರ ಜೊತೆಗೆ ಸಮಸ್ಯೆಯನ್ನು ಪರಿಹರಿಸುವಂತಹ ಈ ಆಟಗಳು ವಿನೋದಮಯವಾಗಿರುತ್ತದೆ. ಇದೇ ರೀತಿಯ ಒಗಟಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿತ್ರದಲ್ಲಿ ತಮ್ಮ ಮಾಲೀಕರಿಂದ ತಪ್ಪಿಸಿಕೊಂಡಂತಹ ಎರಡು ನಾಯಿಗಳನ್ನು ಹುಡುಕಲು ವೀಕ್ಷಕರಿಗೆ ಸವಾಲು ನೀಡಲಾಗಿದೆ.

ಈ ಚಿತ್ರವನ್ನು ಬ್ರಿಟನ್​​​ನ ಲಾರ್ಡ್ಸ್ ಆಂಡ್ ಲ್ಯಾಬ್ರಡಾರ್ಸ್ ಎಂಬ ಸಾಕುಪ್ರಾಣಿಗಳ ಉತ್ಪನ್ನಗಳ ಐಷಾರಾಮಿ ಬ್ರ್ಯಾಂಡ್ ರಚಿಸಿದೆ. ಇವರ ಪ್ರಕಾರ ನಿಗದಿತ 43 ಸೆಕೆಂಡುಗಳಲ್ಲಿ ಐದು ಜನರಲ್ಲಿ ಒಬ್ಬರು ಮಾತ್ರ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುತೂಹಲಕಾರಿ ಸವಾಲನ್ನು ಪೂರ್ಣಗೊಳಿಸಲು ಒಬ್ಬ ವ್ಯಕ್ತಿಯು ತೆಗೆದುಕೊಳ್ಳುವ ಸರಾಸರಿ ಸಮಯ 58 ಸೆಕೆಂಡುಗಳು ಎಂದು ಹೇಳಿದೆ.

ಇದನ್ನೂ ಓದಿ: Viral Brain Teaser: ಡ್ರ್ಯಾಗನ್​​​ಗಳ ನಡುವೆ ಅಡಗಿ ಕುಳಿತಿರುವ ಮೂರು ಮೊಸಳೆಗಳನ್ನು ಕಂಡುಹಿಡಿಯಿರಿ ನೋಡಾ

ಈ ಒಗಟಿನಲ್ಲಿ ಮರಗಳು ಮತ್ತು ಗಿಡಗಳಿಂದ ಕೂಡಿದ ಒಂದು ಸುಂದರವಾದ ಉದ್ಯಾನವನದ ಚಿತ್ರವಿದೆ. ಉದ್ಯಾನವನದಲ್ಲಿ ಕೆಲವು ಜನರು ತಮ್ಮ ನಾಯಿಗಳನ್ನು ವಾಕಿಂಗ್​​​ಗೆ ಕರೆದುಕೊಂಡು ಬಂದಿರುವುದನ್ನು, ಹಾಗೂ ಇನ್ನೂ ಕೆಲವರು ನಾಯಿಗಳೊಂದಿಗೆ ಆಟವಾಡುವುದನ್ನು ಕಾಣಬಹುದು. ಈ ಪೈಕಿ ಎರಡು ನಾಯಿಗಳು ತಮ್ಮ ಮಾಲೀಕರ ಕೈಯಿಂದ ತಪ್ಪಿಸಿಕೊಂಡಿದೆ. ನಿಮ್ಮ ಹದ್ದಿನ ಕಣ್ಣಿನ ಮೂಲಕ ಕೇವಲ 43 ಸೆಕೆಂಡುಗಳಲ್ಲಿ ತಪ್ಪಿಸಿಕೊಂಡಿರುವ ನಾಯಿಗಳನ್ನು ಹುಡುಕಲು ಸಾಧ್ಯವಿದೆಯೇ?

ಈ ಒಗಟಿನ ಸವಾಲನ್ನು ನಿಮಗೆ ಸಮಯದ ಮಿತಿಯೊಳಗೆ ಬೇಧಿಸಲು ಸಾಧ್ಯವಾಗಲಿಲ್ಲವೇ? ಇನ್ನೂ ಕೂಡಾ ಕಳೆದು ಹೋದ ನಾಯಿಗಳನ್ನು ಚಿತ್ರದಲ್ಲಿ ಹುಡುಕುತ್ತಿದ್ದೀರಾ, ಈ ಕೆಳಗಿನ ಚಿತ್ರದಲ್ಲಿ ಸರಿಯಾದ ಉತ್ತರವನ್ನು ನೀಡಲಾಗಿದೆ. ಈ ಚಿತ್ರದಲ್ಲಿ ಕಳೆದುಹೋದ ಎರಡು ನಾಯಿಗಳನ್ನು ಗುರುತಿಸಲಾಗಿದೆ, ನೋಡಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:39 am, Fri, 16 June 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ