Viral: ಕತ್ರೀನಾರನ್ನೇ ಸೋಲಿಸಿದಿರಿ ಮೇಡಮ್! ಸಲ್ಮಾನ್ ಭಾಯ್ ಈ ಕಡೆ ಸ್ವಲ್ಪ ನೋಡಿ ಎನ್ನುತ್ತಿರುವ ನೆಟ್ಟಿಗರು
Agneepath : ಈಕೆಯ ಚರ್ಮಕಾಂತಿ, ಮೈಕಟ್ಟು ಗಮನಿಸಿ. ಈಕೆ ಆಹಾರ ಮತ್ತು ವ್ಯಾಯಾಮದ ಬಗ್ಗೆ ಎಷ್ಟು ಕಟ್ಟುನಿಟ್ಟಾಗಿದ್ದಾಳೆ ಎಂಬುದು ಅರಿವಿಗೆ ಬರುತ್ತದೆ. ನಿಜಕ್ಕೂ ಈಕೆ ಶ್ರದ್ಧಾವಂತ ನಟಿ ಎಂದು ಕೆಲವರು ಶ್ಲಾಘಿಸಿದ್ದಾರೆ.

Katrina Kaif : 2011ರಲ್ಲಿ ಬಿಡುಗಡೆಯಾದ ಅಗ್ನೀಪಥ (Agneepath) ಸಿನೆಮಾದ ಚಿಕ್ನಿ ಚಮೇಲಿ (Chikni Chameli) ಹಾಡಿಗೆ ಹೃತಿಕ್ ರೋಷನ್ ಮತ್ತು ಕತ್ರೀನಾ ಕೈಫ್ ಅಭಿನಯಿಸಿದ್ದಾರೆ. ಶ್ರೇಯಾ ಘೋಷಾಲ್ (Shreya Ghoshal) ಸುಶ್ರಾವ್ಯವಾಗಿ ಹಾಡಿದ್ದಾರೆ. ಇದೀಗ ವೈರಲ್ ಆಗುತ್ತಿರುವ ಇದೇ ಹಾಡಿನ ರೀಲ್ಗೆ ನಟಿ ಕನಿಷ್ಕಾ ಶರ್ಮಾ ಅತ್ಯಾಕರ್ಷಕವಾಗಿ ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು, ಕತ್ರೀನಾಗಿಂತ ಮಸ್ತ್ ಡ್ಯಾನ್ಸ್ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈತನಕ ಈ ವಿಡಿಯೋ ಅನ್ನು ಮಿಲಿಯನ್ ಜನರು ನೋಡಿದ್ದಾರೆ. 3.6 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದಾರೆ. ಎಷ್ಟು ಸಲ ನೋಡಿದೆನೋ ಈ ರೀಲ್ ಅನ್ನು, ಲೆಕ್ಕವನ್ನೇ ಇಟ್ಟಿಲ್ಲ. ನಾನು 50ಕ್ಕೂ ಹೆಚ್ಚು ಬಾರಿ ನೋಡಿದ್ದೆನೆ. ಇದು ನನಗೆ ಪರಿಶುದ್ಧ ಪ್ರೀತಿಯ ತಂಗಾಳಿಯನ್ನು ಬೀಸುತ್ತಿದೆ. ಇದು ಸಕಾರಾತ್ಮಕವಾಗಿದೆ. ಈ ನರ್ತಕಿ ನಿಜಕ್ಕೂ ಅದ್ಭುತ ಮೋಡಿ ಮಾಡುತ್ತಿದ್ದಾರೆ. ಕನಿಷ್ಕಾ ನಿಮ್ಮ ಭವಿಷ್ಯ ಚೆನ್ನಾಗಿರಲಿ… ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral: ವಿಶ್ವದ ಮೊಟ್ಟಮೊದಲ ನೀರು ಚಹಾ ಕಾಫಿ ಬಿಸ್ಕೆಟ್ ಎಟಿಎಂ ಹೈದರಾಬಾದಿನಲ್ಲಿ ಆರಂಭ
ನೀವು ಕತ್ರೀನಾರನ್ನೂ ಸೋಲಿಸಿದಿರಿ ಮೇಡಮ್. ಸಲ್ಮಾನ್ ಭಾಯ್ ಸ್ವಲ್ಪ ಈ ಕಡೆ ನೋಡಿ. ಈ ನಟಿ ನನ್ನ ಹೃದಯವನ್ನೇ ಕದ್ದೊಯ್ದಳು. ಈಕೆಯ ಚರ್ಮಕಾಂತಿ, ಮೈಕಟ್ಟು ಗಮನಿಸಿ. ಈಕೆ ಆಹಾರ ಮತ್ತು ವ್ಯಾಯಾಮದ ಬಗ್ಗೆ ಎಷ್ಟು ಕಟ್ಟುನಿಟ್ಟಾಗಿದ್ದಾಳೆ ಎಂಬುದು ಅರಿವಿಗೆ ಬರುತ್ತದೆ. ನಿಜಕ್ಕೂ ಈಕೆ ಶ್ರದ್ಧಾವಂತ ನಟಿ ಎಂದು ಕೆಲವರು ಶ್ಲಾಘಿಸಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:11 pm, Fri, 16 June 23








