Viral: ಗುಳೇದಗುಡ್ಡದ ಖಣ ತೊಟ್ಟುಬಂದ ಜವಾರೀ ನೋಟ್ಬುಕ್ಗಳು
Notebooks : ಕೆಲ ಪ್ರಜ್ಞಾವಂತರಾದರೂ ಈ ಉತ್ಪನ್ನಗಳಿಗೆ ಹೊಸ ಆಯಾಮದಲ್ಲಿ ಮಾರುಕಟ್ಟೆ ಸೃಷ್ಟಿಸುತ್ತಿದ್ದಾರೆ, ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ಸಮಾಧಾನವೆನ್ನಿಸಿದರೂ ನೇಕಾರಿಕೆಯ ಕುಟುಂಬಗಳಿಗೆ ನಿರೀಕ್ಷಿತ ಆದಾಯ ತರಬಲ್ಲುದೇ?
Weavers : ಸಭೆ ಸಮಾರಂಭಗಳಲ್ಲಿ ಅತಿಥಿಗಳನ್ನು ಆದರಿಸಲು ಸಾವಿರಾರು ರೂಪಾಯಿಗಳನ್ನು ಹೂಗುಚ್ಛಗಳ ಖರೀದಿಗೆ ವ್ಯಯಿಸುತ್ತೇವೆ. ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ಸ್ನೇಹಿತರಿಗೆ ಸಂಬಂಧಿಕರಿಗೆ ಉಡುಗೊರೆ ಕೊಡಲು ಅನವಶ್ಯಕವಾಗಿ ಹಣ ಪೋಲು ಮಾಡುತ್ತೇವೆ. ಅದರ ಬದಲಾಗಿ ನೆನಪಿನಲ್ಲಿ ಉಳಿಯುವಂಥ, ಉಪಯುಕ್ತ ಮತ್ತು ಅರ್ಥಪೂರ್ಣ ಉಡುಗೊರೆಗಳನ್ನು ಕೊಡುವುದು ಬಹಳಷ್ಟು ಆಯಾಮಗಳಿಂದ ಸೂಕ್ತ ಎನ್ನಿಸುತ್ತದೆ. ಇದೀಗ ವೈರಲ್ ಆಗಿರುವ ಈ ಟ್ವೀಟ್ ಗಮನಿಸಿ. ಗದುಗಿನಲ್ಲಿರುವ ಐಎಫ್ಎಸ್ ಅಧಿಕಾರಿ ದೀಪಿಕಾ ಬಾಜಪೇಯಿ (Dipika Bajpai) ಗುಳೇದಗುಡ್ಡ ಖಣಗಳ (Guledagudda Khana) ಹೊದಿಕೆಯನ್ನು ಉಳ್ಳ ನೋಟ್ಬುಕ್/ಡೈರಿಗಳನ್ನು ಟ್ವೀಟ್ ಮಾಡಿದ್ದಾರೆ.
Ever since I was put in touch with the weavers of Guledgudda making these notebooks covered with Guledgudda khana cloth, these are the ‘go-to’ gifts in personal and professional functions. Better than that 300-400 rs. bouquet. A win-win situation for weavers and us. pic.twitter.com/6sr72enaG5
ಇದನ್ನೂ ಓದಿ— Dipika (Goyal) Bajpai (@dipika_bajpai) June 14, 2023
ಇಳಕಲ್ ಸೀರೆ ಮತ್ತು ಗುಳೇದಗುಡ್ಡ ಖಣದ ಮೆರುಗು, ಜವಾರೀತನ ಮತ್ತು ಆಪ್ತತೆಗಾಗಿ ಹೆಣ್ಣುಮಕ್ಕಳು ಹಂಬಲಿಸುತ್ತಾರೆ. ಇನ್ನು ಕೆಲ ಗಂಡಸರು ತನ್ನ ಅಕ್ಕ ತಂಗಿಯನ್ನೋ, ಗೆಳತಿಯನ್ನೋ, ಅಮ್ಮನನ್ನೋ, ಹೆಂಡತಿಯನ್ನೋ ಅಥವಾ ಪ್ರೀತಿಪಾತ್ರರನ್ನೋ ಇಂಥದೊಂದು ಸೀರೆ, ರವಿಕೆಯಲ್ಲಿ ನೋಡಬೇಕು ಎಂದು ಆಶಿಸುತ್ತಾರೆ. ಆದರೂ ಈ ಸೀರೆ ರವಿಕೆಗಳ ವಹಿವಾಟಿನ ಅಂಕಿ ಸಂಖ್ಯೆ ನೋಡಿದಾಗ ಆರಕ್ಕೆ ಏರದು ಮೂರಕ್ಕೆ ಇಳಿಯದು.
ಇದನ್ನೂ ಓದಿ : Viral Video: ಸೋರುತಿಹುದು ರೈಲುಮಾಳಿಗೀ; ವಂದೇಭಾರತ್ ಪ್ರಯಾಣಿಕರಿಗೆ ಉಚಿತ ಶವರ್
ಇದೀಗ ದೀಪಿಕಾ ಅವರ ಟ್ವೀಟ್ ಅನ್ನು ಸುಮಾರು 60,000 ಜನರು ನೋಡಿದ್ದಾರೆ. ನೂರಾರು ಜನರು ಈ ಖಣ ನೋಟ್ಬುಕ್/ಡೈರಿ ತಯಾರಕರನ್ನು ಸಂಪರ್ಕಿಸುವುದು ಹೇಗೆ ಎಂದು ಕೇಳಿದ್ದಾರೆ. ಕೆಲ ಪ್ರಜ್ಞಾವಂತರಾದರೂ ಈ ಉತ್ಪನ್ನಗಳಿಗೆ ಹೊಸ ಆಯಾಮದಲ್ಲಿ ಮಾರುಕಟ್ಟೆ ಸೃಷ್ಟಿಸುತ್ತಿದ್ದಾರೆ ಮತ್ತು ಮಾರಾಟಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವುದು ಒಂದೆಡೆ ಸಮಾಧಾನವೆನ್ನಿಸಿದರೂ ಇದು ನೇಕಾರಿಕೆಯ ಕುಟುಂಬಗಳಿಗೆ ನಿರೀಕ್ಷಿತ ಆದಾಯ ತರಬಲ್ಲುದೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ. ಇಂಥ ಕೆಲಸಗಳಿಗೆ ಒಟ್ಟಾಗಿ ಕೈಜೋಡಿಸಬೇಕಲ್ಲವೆ? ವಿವಿಧ ಬಣ್ಣ, ವಿನ್ಯಾಸದ ಡೈರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:01 am, Fri, 16 June 23