Viral Video: ಸೋರುತಿಹುದು ರೈಲುಮಾಳಿಗೀ; ‘ವಂದೇಭಾರತ್’ನ ಪ್ರಯಾಣಿಕರಿಗೆ ಉಚಿತ ಶವರ್
Vande Bharat Express: ಲಿರಿಲ್ ಸಾಬೂನಿನ ಮುಂದಿನ ಜಾಹೀರಾತನ್ನು ಚಿತ್ರೀಕರಿಸಲು ಇದು ಸುಂದರವಾದ ಸ್ಥಳ. ಈ ರೈಲಿನಲ್ಲಿ ಪ್ರಯಾಣಿಸಲು ಆಧಾರ್, ಪ್ಯಾನ್ ಲಿಂಕ್ ಮಾಡಿದರೆ ಸಾಕೇ? ಅಂತೆಲ್ಲ ಪಟ್ಟಾಂಗ ಹೊಡೆಯುತ್ತಿದ್ದಾರೆ ನೆಟ್ಟಿಗರು.
Indian Railways : ”ಕೇಳಿರಿ ಕೇಳಿರಿ! ಭಾರತೀಯ ರೈಲುಪ್ರಯಾಣಿಕರಿಗೆ ಶುಭ ಸುದ್ದಿ, ಬೆಳಗ್ಗೆ 6ಕ್ಕೆ ಶುರುವಾಗುವ ವಂದೇಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುವವರಿಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶವರ್ ಸೌಲಭ್ಯ. ಮೋದಿಯವರ ನಾಯಕತ್ವದಲ್ಲಿ ಆರಂಭಗೊಂಡ ಈ ದೂರದೃಷ್ಟಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂಥವರಾಗಿ”; ವಿಡಿಯೋ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ಇದಕ್ಕೆ ಪ್ರತ್ಯೇಕ ಭತ್ಯೆ ಭರಿಸಬೇಕೇ ಅಥವಾ ಪ್ಯಾನ್, ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಸಾಕೇ? ಎಂದು ನೆಟ್ಟಿಗರು ಒಕ್ಕೊರಲಿನಿಂದ ಕೇಳುತ್ತಿದ್ದಾರೆ.
Since most of the #VandeBharat trains are scheduled to start running as early as 6 in the morning, the Indian Railways under the visionary leadership of PM Modi has started another noble initiative to provide free mandatory shower facility for all passengers that too on their… pic.twitter.com/jXZQbvcFgc
ಇದನ್ನೂ ಓದಿ
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
National Wine Day: ಒಡೆದ ವೈನ್ ಬಾಟಲಿ ಮತ್ತು ‘ಕೂಲ್ ರನ್ನಿಂಗ್’ನೊಂದಿಗೆ ಮಮತಾ ಸಾಗರ್
ಅಯ್ಯೋ ಮೋದಿಯವರಿಗೆ ಇಂಥಾ ಐಡಿಯಾಗಳನ್ನು ಕೊಡಬೇಡಿ. ಮೊದಲೇ ಅವರು ಅತ್ಯುತ್ತಮ ದಾರ್ಶನಿಕರು, ಈ ಯೋಜನೆಯನ್ನು ಜಾರಿ ತಂದಲ್ಲಿ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಫಸ್ಟ್ ಕ್ಲಾಸ್ ಬೋಗಿಗಳನ್ನು ಬುಕ್ ಮಾಡಿನೋಡಿ, ಅಲ್ಲಿ ಟಬ್ಗಳನ್ನೇ ಅಳವಡಿಸಲಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಹೌದು ಕಳೆದ ತಿಂಗಳು ನಾವು ವಂದೇಭಾರತ್ ರೈಲಿನಲ್ಲಿ ಪ್ರಯಾಣಿಸಿದಾಗ ಎಸಿಯಿಂದ ನೀರು ಸೋರುತ್ತಿದೆ ಎಂದು ಎಕ್ಸಿಕ್ಯೂಟಿವ್ ಕ್ಲಾಸ್ನಿಂದ ಯಾರೋ ಸ್ಪೀಕರ್ನಲ್ಲಿ ಕೂಗುತ್ತಿರುವುದು ಕೇಳಿಸಿತ್ತು ಎಂದಿದ್ದಾರೆ ಮತ್ತೊಬ್ಬರು.
ವೈಫಲ್ಯಗಳು ಸಂಭವಿಸುತ್ತವೆ ನಿಜ. ಹಾಗಂತ ದೇಶ ಪಕ್ಷ ರಾಷ್ಟ್ರವನ್ನು ಲೆಕ್ಕಿಸದೇ ಇಂತಹ ವಿಷಯಗಳಿಗಾಗಿ ಪ್ರಧಾನಿಯನ್ನು ಅಪಹಾಸ್ಯ ಮಾಡುವ ಅಗತ್ಯವಿಲ್ಲ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ ಎಂದು ಟೀಕಾಕಾರರಿಗೆ ಮೋದಿ ಅಭಿಮಾನಿಗಳು ಬುದ್ಧಿವಾದ ಹೇಳಿದ್ದಾರೆ. ಆದರೂ ನೆಟ್ಟಿಗರು ಸುಮ್ಮನಿರದೆ; ಲಿರಿಲ್ ಸಾಬೂನಿನ ಮುಂದಿನ ಜಾಹೀರಾತನ್ನು ಚಿತ್ರೀಕರಿಸಲು ಇದು ಸುಂದರವಾದ ಸ್ಥಳ ಎಂದು ಹಾಸ್ಯವಾಡಿದ್ದಾರೆ. ಪ್ರಯಾಣಿಕರು ಭಾರೀ ಹಣ ತೆತ್ತು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಆಹಾರದಿಂದ ಹಿಡಿದು ಇನ್ನಿತರೇ ಸೌಲಭ್ಯಗಳ ಬಗ್ಗೆ ಮೋದಿ ಸರ್ಕಾರ ಗಮನಹರಿಸಬೇಕು ಎಂದಿದ್ದಾರೆ.
ಶವರ್ ಯೋಜನೆ ಮುಕ್ತಾಯಗೊಳ್ಳುವ ಮೊದಲೇ ವಂದೇಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುವ ಆಸೆಯುಂಟಾಗುತ್ತಿದೆಯೇ?