AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ

Writing : ಇವತ್ತು ಬರೆದಿದ್ದನ್ನು ಇನ್ನೊಂದು ವಾರ, ತಿಂಗಳು, ವರ್ಷ ಬಿಟ್ಟು ಓದಿದರೆ ಪ್ರತಿ ಬಾರಿಯೂ ಓದುವಾಗಿನ ಭಾವನೆಗಳು ಬದಲಾಗಿರುವ ಸಾಧ್ಯತೆಗಳಿವೆ. ಬರೆಯುವಾಗಿದ್ದ ಭಾವನೆಗಳಿಗಿಂತ ಭಿನ್ನವಾಗಿರಬಹುದಾದ ಎಲ್ಲ ಸಾಧ್ಯತೆಗಳೂ ಇವೆ. ಇದು ಇನ್ಯಾವುದೇ ಪ್ರಕಾರಗಳಲ್ಲೂ ಅಷ್ಟು ಸುಲಭಕ್ಕೆ ದಕ್ಕುವ ಅಂಶವಲ್ಲ.

Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Follow us
ಶ್ರೀದೇವಿ ಕಳಸದ
|

Updated on:May 08, 2022 | 6:36 AM

ಅವಿತಕವಿತೆ | AvithaKavithe : ನನ್ನ ಮಟ್ಟಿಗೆ ಕವನಗಳು ಭಾವನೆಗಳಿಗೆ ಕಟ್ಟಿಬಿಟ್ಟ ಆಕಾಶಬುಟ್ಟಿಯಂತೆ.  ಗದ್ಯದಲ್ಲಿ ಬೆತ್ತಲಾಗದ ಭಾವನೆಗಳಿಗೆ ಹೊದಿಸಿ ಕಳಿಸಿದ ಕೌದಿಯಂತೆ ಸೂಕ್ಷ್ಮಗಳನ್ನು ಪದರಪದರವಾಗಿ ಬಿಚ್ಚಿಡುವ, ಏನೂ ಇಲ್ಲವೆಂದುಕೊಳ್ಳುವಾಗಲೇ ಎಲ್ಲವೂ ಇದೆಯೆಂದು ಮನವರಿಕೆ ಮಾಡಿಸುವ ಕಣ್ಣುಕಟ್ಟಿನಂತೆ. ಹತ್ತೂರು ಸುತ್ತಿ ಬಂದರೂ ಮನೆಯ ಹಿತ್ತಲಿನಲ್ಲೇ ಸಿಗುವ ನೆಮ್ಮದಿಯಂತೆ. ನನ್ನ ಸುತ್ತಮುತ್ತಲೇ ಎಲ್ಲಕ್ಕೂ ಸಾಕ್ಷಿಯಾಗಿ ನಿಂತ ನಮ್ಮ ನಿಮ್ಮೆಲ್ಲರ ಧ್ರುವೀಕೃತ ಸಮಾಜ, ಅದರ ಜೊತೆಜೊತೆಯಾಗಿಯೇ ಬದುಕುತ್ತಿರುವ ನಾವೆಲ್ಲರೂ, ನಮ್ಮ ದೈನಂದಿನ ಬದುಕು, ಏಕತಾನತೆ, ಮಾನವ ಸಂಬಂಧಗಳ ಭಾವತೀವ್ರತೆ ಇದೆಲ್ಲವೂ ಬರೆಯುವಂತೆ ಪ್ರೇರೇಪಿಸುತ್ತದೆ. ವೈಯಕ್ತಿಕವಾಗಿ ಡಾಕ್ಯುಮೆಂಟೇಷನ್ನಿನಲ್ಲಿ ನಂಬಿಕೆ ಇಟ್ಟ ನಾನು, ಪ್ರತಿಯೊಂದು, ಪ್ರತಿಯೊಬ್ಬರ ಅನುಭವವೂ ಬರೆವಣಿಗೆಯೊಳಗೆ ಅಡಕವಾಗಿಸಿಡಬೇಕೆಂದು ನಂಬುವವನು, Text dont carry emotions ಅಂತಾರಲ್ಲ ಹಾಗೆ. ಇವತ್ತು ಬರೆದಿದ್ದನ್ನು ಇನ್ನೊಂದು ವಾರ, ತಿಂಗಳು, ವರ್ಷ ಬಿಟ್ಟು ಓದಿದರೆ ಪ್ರತಿ ಬಾರಿಯೂ ಓದುವಾಗಿನ ಭಾವನೆಗಳು ಬದಲಾಗಿರುವ ಸಾಧ್ಯತೆಗಳಿವೆ. ಬರೆಯುವಾಗಿದ್ದ ಭಾವನೆಗಳಿಗಿಂತ ಭಿನ್ನವಾಗಿರಬಹುದಾದ ಎಲ್ಲ ಸಾಧ್ಯತೆಗಳೂ ಇವೆ. ಇದು ಇನ್ಯಾವುದೇ ಪ್ರಕಾರಗಳಲ್ಲೂ ಅಷ್ಟು ಸುಲಭಕ್ಕೆ ದಕ್ಕುವ ಅಂಶವಲ್ಲ. ಸುಶೀಲ್ ಸಂದೀಪ್, ಎಂ. ಕವಿ, ಲೇಖಕ

ಪ್ಲೀಸ್ ಮೈಂಡ್ ದ ಗ್ಯಾಪ್

ಹಸಿದ ಜಾಂಬವಂತನ ಕೈಗೆ ಸಿಕ್ಕ ಹಣ್ಣಾದ ಹೆಬ್ಬಲಸಿನಂತೆ
ಬೆಂಗಳೂರೆಂಬೋ ಬೆಂಗಳೂರನ್ನೇ
ಬೆನ್ನು ಹುರಿಯ ನೇರಕೆ ಉದ್ದುದ್ದ ಅಡ್ಡಡ್ಡ
ಅಗೆದು, ಬಗೆದು, ಸಿಗಿದು ಅಂಗಾತ ಮಲಗಿಸಿ

‘ಮೆಟ್ಟಿದರೆ ಕನ್ನಡ ಮಣ್ಣನು ಮೆಟ್ಟಬೇಕು’
ಅನ್ನೋ ಹಂಸವಾಣಿಯಾಣತಿಯಂತೇ
ಜನಮಾನಸದ ಒಕ್ಕೊರಲಿನ ಕೂಗು
"ಬನ್ರೋ.. ಇದು ನಮ್ಮದೇ...ಮೆಟ್ರೋ..."
-ಯಾವುದೇ ಮೇಡಂ - ಸರ್​ನೇಮುಗಳ ಹಂಗಿಲ್ಲದೆ!

ಯಲಚೇನಹಳ್ಳಿ ಟು ಕೃ.ರಾ.ಮಾರುಕಟ್ಟೆ ಗ್ರೀನ್ಲೈನು;
ಎಲ್ಲೆಲ್ಲೂ ಹಸಿರೋ ಹಸಿರು - ಅನ್ವರ್ಥಕ ಬಿಡಿ
ಈಚೀಚೆಗೆ ಬಸವನಗುಡಿಯುದ್ದಕೂ ಕೇಸರೀಕರಣ
-ಅಲ್ಲಿ ಗುಲ್ಮೊಹರ್ ಕ್ಯಾನಾಪೀ ನೋಡಿ

ಕಣ್ಣು ಹಾಯಿಸಿದಷ್ಟೂ ಮುಗಿಯದ ಹಳದಿ-ಕಪ್ಪು ಓವರೆಡ್ ಟ್ಯಾಂಕು,
ಟಾಟಾಸ್ಕೈಸನ್​ ಏರ್ಟೆಲ್ಲಿನವರ ಬಾಣಲೆಗಳಲಂಕಾರ,
ಸೀರೆ-ಪಂಚೆ ಮೇಲಿನ ಸಂಡಿಗೆ, ತಂತಿ ಮೇಲೆ ಒಣಗಿ ರಟ್ಟಾದ
ಹೊರ-ಒಳ ಉಡುಪುಗಳು ಬಿಚ್ಚಿಟ್ಟ ಸಂಸಾರದ ಗುಟ್ಟುಗಳು

ಮನೆ ತಾರಸಿಗಳೆಲ್ಲದರವೂ ಏಕರೂಪ ವ್ಯಕ್ತಿತ್ವವಲ್ಲ

ಕ್ಯಾಸ್ಟ್ರಾಲ್ ಟೂಟಿ ಪವರಿನ ಟಾಯ್ಲೆಟ್ ಮಗ್ಗು
-ಲಿನಲ್ಲೇ ಒಡಲಲಿ ನೀರು ತುಂಬಿದ ನೀಲಿ ಡ್ರಮ್ಮುಗಳೊಡನೆ
ವಾಚ್‌ಮನ್ ಮುದುಕ, ಗೋಲ್ಗಪ್ಪ ಯುವಕರ
‘ಲೈಫ್‌ಬಾಯ್ ಎಲ್ಲಿದೆಯೋ ಅಲ್ಲಿದೇ ಆರೋಗ್ಯ’

ಸೋಲಾರ್ ಹೆಕ್ಟೇರು, ಚಾರ್ಮಿನಾರ್ ಶೀಟುಗಳು
ಕೈಯಾಡದ ಹೆಂಚುಗಳು, ಪಾಚಿಗಟ್ಟಿದ ಸಜ್ಜ
-ಪ್ಯಾರಾಪಟ್ ವಾಲುಗಳು, ಉದುರಿದ ಎಲೆಗಳು,
ಹಾಡುಹಗಲೇ ಆರಿಸಿರದ ಲೈಟುಗಳು,
ಪೊದೆ ಬೆಳೆದ ಲಿಟಿಗೇಶನ್ ಸೈಟುಗಳು

ದೂರ ದಿಗಂತದಲ್ಲಿ ಶೋಭಾ, ಮಂತ್ರಿ ಬ್ರಿಗೇಡು
ತಂತಮ್ಮ ಪ್ರೆಸ್ಟೀಜಿಗಂತಲೇ ಕಟ್ಟಿರೋ ಗಗನಚುಂಬಿ ಟವರು
ಇಸ್ಕಾನೂ ಒರಾಯನೂ ಮಾಲುಗಳು
ತಾಂಬೂಲದಂತ ವಾಸನೆ ತುಂಬಿದ ಎಸಿ ಬೋಗಿಗಳಿಂದಲೇ
ಪಕ್ಷಿನೋಟ

ತಳಸ್ಪರ್ಶಿ ಸಂವೇದನೆ ಕಳೆದುಕೊಂಡು ಎಲ್ಲವನೂ ಮೇಲ್
-ಮೇಲಿನಿಂದಲೇ ಕಾಣುವ/ನೋಡುವ
ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ
ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
ಎಂಬ ಎಡ-ಬಲಗಳ ತಿಕ್ಕಾಟಗಳ ಮಧ್ಯೆಯೇ
“ಮುಂದಿನ ನಿಲ್ದಾಣ - ರಾಷ್ಟ್ರಕವಿ ಕುವೆಂಪು ರಸ್ತೆ!
Please mind the gap”


AvithaKavithe Poetry Column by Kannada Writer Susheel Sandeep

ಸುಶೀಲ್ ಕೈಬಹ 

ಕವಿತೆ ಅವರದು ನೋಟ ನಿಮ್ಮದು

ಬೆಂಗಳೂರೆಂಬ ಹೆಬ್ಬಲಸನ್ನು ಅಡ್ಡಡ್ಡ ಉದ್ದುದ್ದ ಸಿಗಿದು ಮಾಡಿದ ‘ನಮ್ಮ ಮೆಟ್ರೋ’ ಲೈನುಗಳು. ಗ್ರೀನ್ ಲೈನಿನ ಹಸಿರಿನ ನಡುವೇ ಬಸವನಗುಡಿಯಲ್ಲಿ ಕೇಸರೀಕರಣ ಅಂತ ನೇರವಾಗಿ ರಾಜಕೀಯದ ಹೃದಯಕ್ಕೆ ಕೈಹಾಕಿದರು ಎಂದುಕೊಳ್ಳುವಷ್ಟರಲ್ಲಿ ಮುಂದಿನ ಸಾಲಿನಲ್ಲಿಯೇ ಅದರ ಜವಾಬ್ದಾರಿಯನ್ನು ಗುಲ್ಮೊಹರ್ ಸಾಲುಗಳ ಮೇಲೆ ಹೊರಿಸಿರುವ ಚುರುಕುತನ. ಶಬ್ದಗಳನ್ನು ತುಂಡುಮಾಡಿ ಹೊಸ ಅರ್ಥ ಕಟ್ಟಿದ್ದು… ಹಾಗೇ ಮೆಟ್ರೋದಲ್ಲಿ ಹೋಗಬೇಕಾದರೆ ಕಾಣುವ ದಿನನಿತ್ಯದ ಕೆಳ ಹಾಗೂ ಮಧ್ಯಮವರ್ಗದವರ ದೃಶ್ಯಗಳ ಜತೆಜತೆಗೆ ಉಳ್ಳವರ ಅಪಾರ್ಟ್​ಮೆಂಟುಗಳು ಪಕ್ಷಿನೋಟಗಳಾಗುತ್ತವೆ. ಇಡಿಯ ಪದ್ಯದಲ್ಲಿ ಒಂದು ಮೆಟ್ರೋ ಪ್ರಯಾಣದ ಜತೆಗೆ ರಾಜಧಾನಿಯ ಜೀವನಚಿತ್ರಣ ಮತ್ತೆ ರಾಜಕೀಯ ಕೂಡ ಸಿನಿಮಾ ದೃಶ್ಯಗಳ ತರಹ ಕಣ್ಣೆದುರು ಬರುತ್ತದೆ.

ಇವೆಲ್ಲದರ ನಡುವೆ ಆಹಾ ಅನಿಸಿದ ಸಿಕ್ಕಾಪಟ್ಟೆ ಜಾಣತನದ ಸಾಲುಗಳು – “ಇಸ್ಕಾನೂ ಒರಾಯನೂ ಮಾಲುಗಳು” – ಮಾಲು ಅಂದರೆ ಸರಕು ಮತ್ತೆ ಇಂಗ್ಲಿಷಿನ mall. ಒರಾಯನಲ್ಲಿ ಹತ್ತುಹಲ ತರಹದ ಮಾಲುಗಳಿರುವಂತೆ ಇಸ್ಕಾನ್​ನಲ್ಲಿಯೂ ವಿಭಿನ್ನ ರೀತಿಯ ಸರಕು ಮಾರಾಟಕ್ಕಿದೆ. ಅಲ್ಲಿಗೆ ಹೋದವರಾರೂ ಅದೊಂದು mall ಎಂದರೆ ಒಪ್ಪದಿರಲಾರರು – ಇಲ್ಲಿರುವ ಸೂಕ್ಷ್ಮ ಮತ್ತು ಜಾಣ wordplay ಮತ್ತು juxtaposition of ideas ತುಂಬಾ ಇಷ್ಟವಾಯ್ತು.

ಇವೆಲ್ಲ ಸುಮ್ಮನೆ ನೋಡುತ್ತ ನೋಡುತ್ತ “ತಳಸ್ಪರ್ಶಿ ಸಂವೇದನೆ” ಕಳೆದುಕೊಂಡ ಪಯಣಿಗರು ಎಡ-ಬಲಗಳ ನಡುವೆ ಸಿಕ್ಕಿಹಾಕಿಕೊಂಡಾಗ ದಿಕ್ಕುತೋರುವಂತೆ ಬರುತ್ತದೆ ಮಹಾಕವಿ ಕುವೆಂಪು ರಸ್ತೆ ನಿಲ್ದಾಣ. ಅಷ್ಟೊಂದು ನಿಲ್ದಾಣಗಳ ನಡುವೆ ಅದೇ ಬಂದಿದ್ದಕ್ಕೆ ಉದ್ದೇಶ ಸ್ಪಷ್ಟ. ಅಷ್ಟಾದಮೇಲೂ, ಮತ್ತೆ ಎಲ್ಲದರ ನಡುವೆ ಅಂತರವಿದೆ, ನೆನಪಿಟ್ಟುಕೊಳ್ಳಿ ಅಂತ ಹೇಳಹೊರಟ ಕವಿ ಸುಶೀಲ್ ಸಂದೀಪ್, ಆ ಸಾಲುಗಳನ್ನು ತಾವು ಹೇಳದೆ, ಮೆಟ್ರೋ ಮೇಡಂ ಬಾಯಲ್ಲಿ ಅವಳದೇ ಶಬ್ದಗಳಲ್ಲಿ ಹೇಳುತ್ತಾರೆ. ಈ ಕವಿತೆ ಓದಿಯಾದ ಮೇಲೆ ಮೆಟ್ರೋ ಹತ್ತಿ ಕುಳಿತಾಗ ನಿಮ್ಮ ದೃಷ್ಟಿ ಬದಲಾಗದಿದ್ದರೆ ಕೇಳಿ.

ಶ್ರೀ ಡಿ ಎನ್, ಲೇಖಕಿ, ಪತ್ರಕರ್ತೆ

*

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದಲ್ಲಿರುವ ವಿವಿಧ ಕವಿಗಳ ಕವಿತೆಗಳನ್ನು ಇಲ್ಲಿ ಓದಿ : https://tv9kannada.com/tag/avitha-kavithe

Published On - 6:29 am, Sun, 8 May 22

ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಗುರು ಸಂಚಾರ; ಧನು ರಾಶಿಯವರಿಗೆ ಅದೃಷ್ಟ,ಐಶ್ವರ್ಯ ಕೂಡಿ ಬರಲಿದೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಡಿಸ್​ಪ್ಲೇ ಬೋರ್ಡಲ್ಲಿ ಕನ್ನಡಿಗರನ್ನು ಅವಹೇಳನ ಮಾಡುವ ಪದ ಬಳಕೆ
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ