Translation : ‘ಅನುವಾದವೆಂದರೆ ಯಾವುದೇ ಇತರ ಭಾಷೆಯ ಕವಿತೆಗಳನ್ನು ಓದಿದಾಗ ಅವು ನಮ್ಮೊಳಗಿನ ಅಂತಃಕರಣವನ್ನು ಸ್ಪರ್ಶಿಸಬೇಕು, ನೋವು ಆರ್ದ್ರತೆಗಳನ್ನು ಮೀಟುವ ಯಾವುದೇ ಭಾಷೆಯ ಕವಿತೆಗಳನ್ನು ಅನುವಾದಿಸದೇ ಇನ್ನು ಸಾಧ್ಯವಿಲ್ಲ ಎನಿಸುವಷ್ಟು ಅವು ನಮ್ಮೊಳಗಿಳಿದಾಗ ತಾವಾಗಿಯೇ ...
Kannada Literature : ‘ಕವಿತೆ ಎಂದರೆ ಏನು? ಗೊತ್ತಿಲ್ಲ. ನಾನು ಬರೆಯುವ ಪ್ರತಿಯೊಂದು ಕವಿತೆಯೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳು. ಮೃತ್ಯುವಿನ ಆಗರವಾಗಿರುವ ಈ ಜಗತ್ತಿನಲ್ಲಿ ಕವಿತೆ ಒಂದು ಸಂಜೀವಿನಿಯಾಗಿ ಸಮಸ್ತ ಲೋಕಕ್ಕೊದಗಿ ...
Malayalam to Kannada : ‘ನಾನು ನನ್ನ ಅಭಿವ್ಯಕ್ತಿಗಾಗಿ ಗುರುತಿಸಿಕೊಂಡ ಒಂದು ಮಾರ್ಗ ಕಾವ್ಯ ಮತ್ತು ಅನುವಾದದ ಪ್ರಯತ್ನ. ಇವೆಲ್ಲ ನನ್ನ ಖಾಲೀತನವನ್ನು ತುಂಬುತ್ತವೆ ಎಂಬುದು ನನ್ನ ನಂಬಿಕೆ. ಮಾಸ್ತಿ, ಬೇಂದ್ರೆ, ಗಿರೀಶ ಕಾರ್ನಾಡ್, ...
Kannada Literature : ‘ಕಂಡದ್ದನ್ನು ನೇರ ಹೇಳಲಾಗದ ಹತಾಶೆ. ದುಃಖ. ಹೇವರಿಕೆ. ಅತಿಯಾದ ಕೋಪ, ಭಾವುಕತೆ, ಖಿನ್ನತೆಯ ಹಂತದವರೆಗೂ ಕೊಂಡೊಯ್ಯುವ ನಿರ್ಲಿಪ್ತತೆ. ವಿಪರೀತ ಎನ್ನುವಷ್ಟು ಸೋಮಾರಿತನ ಅದರ ನಡುವೆಯೇ ಅಂದುಕೊಂಡ ಬದುಕು ಇದಲ್ಲ ಎನ್ನುವ ...
‘ಆ ಕ್ಷಣವು ಇನ್ನೊಂದಾಗಿ ಮುಂದುವರೆದು ಇಲ್ಲವಾದಾಗ- ಪದ್ಯವೂ ಇಲ್ಲವಾಗಬಹುದು. ಇಂದು ನನ್ನೊಳಗೆ ಮೂಡಿ ಬರೆಬರೆಯೆಂದು ಒತ್ತಾಯಿಸಿ ಉಂಟಾದ್ದು- ಮುಂದೊಮ್ಮೆ ನನಗೇ ‘ಗಡುವು’ ತೀರಿದ ಔಷಧದ ಹಾಗನ್ನಿಸಬಹುದು. ಅನಿಸಿದ್ದೂ ಇದೆ. ಯಾವ ಕಾಲಕ್ಕೂ ತೀರದೆ ಇದ್ದು- ...
’ಇಂತಹ ಕಾಲದಲ್ಲೂ ಕವಿತೆಯ ಮೊರೆಹೊಗುವುದು ಪಲಾಯನವಾಗುವುದಿಲ್ಲವೇ? ಎಂಬ ಪ್ರಶ್ನೆ ಅನೇಕ ಬಾರಿ ನನ್ನನ್ನು ಕಾಡಿದೆ. ಆದರೆ ಪ್ರತಿಬಾರಿಯೂ ಅತ್ಯಂತ ಸಂಕಟದ ಗಳಿಗೆಯಲ್ಲಿ ‘ಇನ್ನು ಸಾಧ್ಯವಿಲ್ಲʼ ಅನಿಸಿದಾಗ ಕವಿತೆ ನನ್ನನ್ನು ನಡೆಸಿದೆ. ಅದು ನಾನು ಕವಿತೆಗಳನ್ನು ...
‘ನನಗೋ ಎರಡು ಜೊತೆ ಮೊಲೆವಾಲು; ಕೊಂಕಣಿ ಮತ್ತು ಕನ್ನಡ. ಕುಡಿದು ಬೆಳೆವ ಭಾಗ್ಯ. ಅಂತಃಕರಣ ನೀಡಿದ ಕೊಂಕಣಿ, ಲೋಕದೃಷ್ಟಿ ದಯಪಾಲಿಸಿದ ಕನ್ನಡ. ಕವಿತೆ ನಿಷ್ಕಪಟಿ, ಕಳಂಕರಹಿತ, ಕೇಡಿಲ್ಲದ್ದು. ಅನ್ನದಷ್ಟೇ ಅಮೂಲ್ಯ. ನನ್ನ ಪಾಲಿನ ವ್ರತ, ...
‘ನನ್ನೊಂದಿಗೆ ನಾನೇ ಮಾತು ಬಿಟ್ಟಿದ್ದೇನೆ. ಕ್ಷಣಕ್ಷಣವೂ ತಿರುಗುವ ಕಾಲದ ಮುಳ್ಳಿನ ಜೊತೆಗೆ ಮಾತನಾಡುವ ಹಂಬಲ ಮೂಡಿ ಸೋತಿದ್ದೇನೆ. ಒಂದು ಸೋಲು ಮರೆಯಲು ಇನ್ನೊಂದು ಸೋಲಿಗೆ ಸಿದ್ಧನಾಗಿದ್ದೇನೆ. ನನಗೆ ಗೊತ್ತಾಗಿ ಹೋಗಿದೆ ಕಾವ್ಯ ಭಾಷೆಯ ಹೊರತಾಗಿ ...
‘ಕವಿತೆಗಳಿಗೂ ನನಗೂ ಜನ್ಮಾಂತರದ ಸಂಬಂಧವಿರಬೇಕು. ಈ ಕವಿತೆಯ ಉಸಾಬರಿ ಬೇಡ ಎಂದು ಹದಿನಾರು ಹದಿನೇಳು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ವಿಚಿತ್ರ ಸನ್ನಿವೇಶದಲ್ಲಿ ವಿಮುಖಳಾಗಿ ಬಿಟ್ಟಿದ್ದೆ. ಬರೆಯುವುದಲ್ಲ, ಓದುವುದು ಬೇಡ ಈ ಕವಿತೆಯನ್ನು ಅಂತನ್ನಿಸಿತ್ತು. ಆದರೆ ...
‘ರೈಲಿನ ಹಳಿಯಲ್ಲಿ ಕಾಲು ಸಿಲುಕಿದಾಗ ಎಲ್ಲೋ ಮೈಲಿನಾಚೆ ಬರುತ್ತಿರುವ ರೈಲಿನ ಗಾಲಿಯ ಪ್ರತಿ ಉರುಳೂ ಒಳಗೆ ಜೀವನ್ಮರಣದ ಗರಗಸವನ್ನು ಮಸೆಯಲಾರಂಭಿಸುತ್ತದೆ. ರೈಲು ಹತ್ತಿರವಾಗುತ್ತಿರುವಂತೆ ಕಾಲನ್ನು ಕಡಿದೊಗೆದಾದರೂ ಎಗರಿ ಬದುಕಬೇಕೆಂಬುವ ಜೀವಪ್ರೀತಿಗೆ ಹೆಣ್ಣು ಗಂಡೆಂಬುದು ಇರುವುದೇ? ...