National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್

Sex Worker : ಆ ಪಬ್​ನಲ್ಲಿ Regen Music ಕೇಳಿಬರ್ತಾ ಇತ್ತು. ಲೈಂಗಿ ಕಾರ್ಯಕರ್ತೆಯೊಬ್ಬಳು ಡ್ಯಾನ್ಸ್ ಮಾಡುತ್ತಿದ್ದಳು. ನನಗೂ ಅವಳೊಂದಿಗೆ ಡ್ಯಾನ್ಸ್ ಮಾಡಬೇಕು ಎನ್ನಿಸಿತು. ಅವಳ ಕೆನ್ನೆ ಕಪ್ಪಾಗಿ ಗಾಯವಾಗಿತ್ತು. ನನಗೆ ಅಳು ಉಕ್ಕಿತು. ಆ ಗಾಯ ಯಾಕೆ ಹೇಗೆ ಆಯಿತು ಎಂದು ವಿವರಿಸದೆಯೂ ನಿಮಗರ್ಥವಾಗುತ್ತದೆ.

National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
ಲೆಡ್​ಬರಿ ಪೋಯೆಟ್ರಿ ಫೆಸ್ಟಿವಲ್​ನಲ್ಲಿ ಸಿಕ್ಕ ವೈಟ್ ವೈನ್​ ಉಡುಗೊರೆಯೊಂದಿಗೆ ಕವಿ ಮಮತಾ ಸಾಗರ್
ಶ್ರೀದೇವಿ ಕಳಸದ | Shridevi Kalasad

|

May 25, 2022 | 5:15 PM

National Wine Day : ಬೆಂಗಳೂರಿನ ಸೆಂಟ್ ಮಾರ್ಕ್ಸ್​ ರಸ್ತೆಯಲ್ಲಿರುವ ‘The Noon Wine’ ನನ್ನಿಷ್ಟದ ತಾಣ. ಇಲ್ಲಿ ಬೆಂಗಳೂರಿನ ಹೋಮ್​ ಮೇಡ್ ವೈನ್​ ಸಿಗುತ್ತೆ. ಕಾಲೇಜಿನ ದಿನಗಳಿಂದ ಈತನಕವೂ ನಾನಿಲ್ಲಿ ಆಗಾಗ ವೈಟ್ ವೈನ್​ಗಾಗಿ ಬರುತ್ತಿರುತ್ತೇನೆ. ವೈಟ್​ ವೈನ್​ ನನಗೆ ಬಹಳ ಇಷ್ಟ. ಇದು ನಿಮ್ಮನ್ನು ಅಷ್ಟಾಗಿ ಹ್ಯಾಂಗೋವರ್​ಗೆ ತಳ್ಳದು. ಮುಂದೆ Charles Wallace Fellowship ಪಡೆಯಲು ನಾನು ಇಂಗ್ಲೆಂಡ್​ಗೆ ಹೋದಾಗಿನ ಪ್ರಸಂಗವೊಂದು ನೆನಪಾಗುತ್ತಿದೆ. ಕನ್ನಡದ ಕೆಲಸಕ್ಕಾಗಿ ನನಗೊಬ್ಬಳಿಗೆ ಮೊಟ್ಟಮೊದಲ ಸಿಕ್ಕ ಫೆಲೋಶಿಪ್ ಅದು. ನಾರ್ವಿಚ್​ನ ಈಸ್ಟ್ ಆ್ಯಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಏರ್ಪಾಡಾಗಿತ್ತು. ಆ ಸಂದರ್ಭದಲ್ಲಿ ಮೆಲ್ಡಿಂಗ್ ವಾಯಿಸಸ್, ಪೊಯೆಟ್ರಿ ಟೂರ್​ನಲ್ಲಿದ್ದಾಗ ಕವಿತೆ ಓದಿದ ನಂತರ ಲೋಕಲ್ ವೈನ್ ಗಿಫ್ಟ್ ಕೊಟ್ಟರು. ಅದರಲ್ಲೂ ವೈಟ್​ ವೈನ್​. ನನಗೆ ರೆಡ್​ ವೈನ್ ಸ್ವೀಟ್ ಇರುತ್ತದೆಯಾದ್ದರಿಂದ ಅದು  ಇಷ್ಟವಿಲ್ಲ. ವೈಟ್ ವೈನ್ ಕಂಡು ಪುಳಕಿತಗೊಂಡೆ. ನಾನಿದ್ದ ಮನೆಗೆ ವಾಪಾಸ್ ಬಂದು ಒಂದಿಷ್ಟು ಸ್ನೇಹಿತರನ್ನು ಕರೆದು ಭಾರತೀಯ ಶೈಲಿಯ ಅಡುಗೆ ಮಾಡುವ ಮೊದಲು ವೈನ್ ಬಾಟಲಿ ಫ್ರಿಡ್ಜ್​ನಲ್ಲಿಟ್ಟೆ. ಸ್ನೇಹಿತರು ಬಂದರು. ಫ್ರಿಡ್ಜ್ ಡೋರ್ ತೆಗೆದರೆ ಬಾಟಲಿ ಒಡೆದು ಹೋಗಿತ್ತು! ನನ್ನ ಕಾವ್ಯಕ್ಕೆ ಕೊಟ್ಟ ಗಿಫ್ಟ್ ಅದು. ಒಂದು ಹನಿಯೂ ಕುಡಿಯಲಿಲ್ಲವಲ್ಲ ಅಂತ ಬಹಳ ಬೇಜಾರಾಯಿತು. ಯಾವುದಕ್ಕೂ ತಡ ಮಾಡಬಾರದಲ್ವಾ? ಮಮತಾ ಸಾಗರ, ಕವಿ, ಅನುವಾದಕಿ (Mamta Sagar) 

2005ರಲ್ಲಿ ಸೌತ್ ಆಫ್ರಿಕಾದ ಡರ್ಬನ್​ನಲ್ಲಿ ಪೋಯೆಟ್ರಿ ಫೆಸ್ಟಿವಲ್​ಗೆ ಭಾರತದ ಪ್ರತಿನಿಧಿಯಾಗಿ ಹೋಗಿದ್ದೆ. ಪ್ರತೀ ದಿನ ರಾತ್ರಿ ಒಂದು ತಾಸು ಬಾರ್​ನಲ್ಲಿ ಕುಳಿತುಕೊಳ್ಳಬೇಕು ಎನ್ನುವುದು ಅಲ್ಲಿಯ ನಿಯಮ. ಡ್ಯಾನ್ಸ್ ಹರಟೆ ಹೀಗೆ ಅವರವರ ಲೋಕದಲ್ಲಿ ಅವರವರಿದ್ದು ಯಾರು ಎಷ್ಟು ಬೇಕಾದರೂ ಕುಡೀಬಹುದು, ಬಿಡಬಹುದು. ಸುಮ್ಮನೇ ಕುಳಿತುಕೊಳ್ಳಲೂಬಹುದು. ನಾನಲ್ಲಿ ಡ್ರೈ ವೈಟ್​ ವೈನ್ ಕುಡಿದಿದ್ದೆ ಅದ್ಭುತವಾಗಿತ್ತು. ಇನ್ನೊಂದು ದಿನ ನನ್ನ ಸ್ನೇಹಿತ ಏರ್ಯನ್, ಸಿನೆಮಾ ನಿರ್ದೇಶಕ. ಒಂದು ಮಧ್ಯರಾತ್ರಿ ನಿಮ್ಮನ್ನು ಒಂದು ಪಬ್​ ಗೆ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ. ಆ ಪ್ರಕಾರ ಎರಡು ಗಂಟೆ ಸುಮಾರಿಗೆ ಅವನ ಕಾರ್​ನಲ್ಲಿ ಹೋದೆವು. ಒಂದು ಫ್ರೆಂಡ್ಲಿ ರೂಲ್ ಏನೆಂದರೆ, ಹಾಗೆ ಹೋದಾಗ ಎರಡು ತಾಸಾದರೂ ಜೊತೆಗಿರಬೇಕು ಅನ್ನೋದು. ನನ್ನೊಂದಿಗೆ ಬ್ರಿಟಿಷ್ ಬ್ಲ್ಯಾಕ್ ಪೋಯೆಟ್ ಒಬ್ಬನಿದ್ದ. ಅವ ಡರ್ಬನ್​ನ ಹೊರಪ್ರದೇಶದಲ್ಲಿದ್ದ ‘ಕೂಲ್ ರನ್ನಿಂಗ್’ ಅಂತೊಂದು ಪಬ್ ಇದೆ. ಅಲ್ಲಿಗೆ ಹೋಗೋಣ ಅಂದ. ಸುಮಾರು ಎರಡೂವರೆ ಗಂಟೆ. ಅದು ಅಂಥಾ ಸೊಫಿಸ್ಟಿಕೇಟೆಡ್ ಪಬ್ ಅಲ್ಲ. ಅಲ್ಲಿ ಯಾರೂ ಬರಬಹುದು. ನಾವೆಲ್ಲಾ ಗನ್​ ಹಿಡಿದುಕೊಂಡೇ ಹೋಗಬೇಕಾದಂಥ ಅನಿವಾರ್ಯ ಪರಿಸ್ಥಿತಿ.

ಇದನ್ನೂ ಓದಿ : Poetry: ಅವಿತಕವಿತೆ; ‘ಗೆದ್ದೆನೆಂಬ ಭಾವದಲ್ಲಿ ಬೀಗುವಾಗಲೇ ಮತ್ತೆಲ್ಲೋ ಹೊಲಿಗೆ ಬಿಚ್ಚಿರುತ್ತದೆ’

ಅಲ್ಲಿಗೆ ಹೋದ ಸ್ವಲ್ಪ ಹೊತ್ತಿಗೆ ಲೈಂಗಿಕ ಕಾರ್ಯಕರ್ತೆಯರ ಗುಂಪೊಂದು ಬಂದಿತು. ಅವರು ಹಾಗೆ ಪ್ರತೀದಿನವೂ ತಮ್ಮ ಕೆಲಸ ಮುಗಿಸಿ ಇಲ್ಲಿಗೆ ಬಂದು ದೇಹ-ಮನಸ್ಸು ಸಂತೈಸಿಕೊಳ್ಳಲು ವೈನ್​ ಕುಡಿಯುತ್ತಾ, ಡ್ಯಾನ್ಸ್​ ಮಾಡುತ್ತಾ ಹೋಗುವುದು ರೂಢಿ. ಪಬ್ ಓನರ್ ಅವರಿಗೆ ಆಪ್ತತೆಯಿಂದ ದಿನವೂ ಉಚಿತವಾಗಿ ವೈನ್ ಕೊಡುವುದು ವರ್ಷಗಳಿಂದ ನಡೆದುಕೊಂಡು ಬಂದ ಕ್ರಮ. ಅಲ್ಲಿ ಫೋಟೋ ತೆಗೆಯುವ ಹಾಗಿಲ್ಲ!

Regen Music ಕೇಳಿಬರ್ತಾ ಇತ್ತು. ಅಲ್ಲೊಬ್ಬಳು ಲೈಂಗಿ ಕಾರ್ಯಕರ್ತೆ ಡ್ಯಾನ್ಸ್ ಮಾಡುತ್ತಿದ್ದಳು. ನನಗೆ ಅವಳೊಂದಿಗೆ ಡ್ಯಾನ್ಸ್ ಮಾಡಬೇಕು ಎನ್ನಿಸಿತು. ಅವಳ ಕೆನ್ನೆ ಕಪ್ಪಾಗಿ ಗಾಯವಾಗಿತ್ತು. ಅದನ್ನು ನೋಡುತ್ತಲೇ ನಾನು ಅಳತೊಡಗಿದೆ. ಆ ಗಾಯ ಯಾಕೆ ಹೇಗೆ ಆಯಿತು ಎಂದು ವಿವರಿಸದೆಯೂ ನಿಮಗರ್ಥವಾಗುತ್ತದೆ. ಕೊನೆಗೆ ಆ ಪೋಯೆಟ್ರಿ ಫೆಸ್ಟಿವಲ್​ನ ಕೊನೇ ದಿನ ಡರ್ಬನ್​ ಬಗ್ಗೆ ಒಂದು ಕವಿತೆ ಬರೆಯಬೇಕು ಎಂದು ಹೇಳಿದರು. ಆಗ ನಾನು ಬರೆದ ಕವಿತೆ ‘ಕೂಲ್ ರನ್ನಿಂಗ್’.

A Poem for Durban

Cool cold air
from the ocean
slides into the insides...

I breathe Durban!
Hear the ocean!
Love, affection,
Our hearts, blend
beyond colour and region.
Oh my love...
I breathe Durban!

My soul.. my poems..
like transparent feathers
float in the air.
Tune, let go..
linger in your hearts.
Like love, pain, sadness
the separation

Foot prints of sins wait outside,
as lonely souls swing
to the tune of pain and sufferring
My song, like cool breeze,
touches the wounded souls
my heart aches!

Things are all running cool
Life is ... the 'cool running'1!
I breathe Durban!

Listen to the rain drops
kissing the waves of this ocean..
you hear my songs
in black and white,
and the coloured hearts.
Let me play tender tunes of love.

I sprinkle my words in the air
I sprinkle my love in the air
I sprinkle my soul in the air...
Durban, breathe my songs!

*

ಇದನ್ನೂ ಓದಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada