AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ; ಹಿರಿಯರೆಲ್ಲ ಕಿರಿಯರೆದುರು ಹೀಗೆ ಸುಮ್ಮನಿದ್ದರದೇ ಸ್ವರ್ಗ

Friendship : 'ಮಾಧ್ಯಮಗಳು ಮತ್ತು ರಾಜಕಾರಣಿಗಳು ನೀವಿಬ್ಬರು ಭಿನ್ನಜಾತಿಯವರು, ಪರಸ್ಪರ ದ್ವೇಷಿಸಬೇಕು ಎಂದು ಹೇಳುವ ತನಕವಂತೂ ಇವು ಹೀಗೇ ಇರುತ್ತವೆ.'

Viral Video: ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ; ಹಿರಿಯರೆಲ್ಲ ಕಿರಿಯರೆದುರು ಹೀಗೆ ಸುಮ್ಮನಿದ್ದರದೇ ಸ್ವರ್ಗ
ಕೋಳಿಮರಿಯೊಂದಿಗೆ ಆಡುತ್ತಿರುವ ನಾಯಿಮರಿ
Follow us
ಶ್ರೀದೇವಿ ಕಳಸದ
|

Updated on:Jun 15, 2023 | 1:20 PM

Innocence : ಮಗುವಾಗಲಿ, ಯಾವುದೇ ಪ್ರಾಣಿ ಪಕ್ಷಿಗಳ ಮರಿಗಳಾಗಲಿ ಸಂಧಿಸುವ ಕಣ್ಣುಗಳಿಗೆ, ಸ್ಪರ್ಶಕ್ಕಷ್ಟೇ ಯಾಕೆ, ತಾಕುವ ನಿರ್ಜೀವಿಗಳಿಗೂ ಸ್ಪಂದಿಸಲು ಹವಣಿಸುತ್ತಿರುತ್ತವೆ. ಕುತೂಹಲ ಮತ್ತು ಪ್ರೀತಿಯೊಂದೇ ಅವುಗಳ ಭಾಷೆ. ತಾನು ಬೇರೆ ಅವರು ಬೇರೆ ಎಂಬ ವ್ಯತ್ಯಾಸ ಗುಲಗಂಜಿಯಷ್ಟೂ ಅವುಗಳಿಗೆ ಸೋಕದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ತಾಯಿನಾಯಿ ತನ್ನ ಪಾಡಿಗೆ ತಾನು ಅಂಗಳದಲ್ಲಿ ಮಲಗಿದೆ. ಅಲ್ಲಿಗೆ ಬಂದ ಕೋಳಿಮರಿಯೊಂದಿಗೆ ಮರಿನಾಯಿ ಮನಸಾ ಆಟಕ್ಕಿಳಿದಿದೆ.

ಅಕಸ್ಮಾತ್ ತಾಯಿನಾಯಿಗೆ ಮನುಷ್ಯರ ಹಾಗೆ ಬಾಯಿ ಇದ್ದಿದ್ದರೆ ಏನಾಗುತ್ತಿತ್ತು? ದರದರನೆ ಮರಿನಾಯಿಯ ರಟ್ಟೆ ಎಳೆದುಕೊಂಡು ಮನೆಮಂದಿಯನ್ನೆಲ್ಲ ಸೇರಿಸಿ ಮನೆಯೊಳಗೆ ಕೂಡಿಹಾಕಿ ನೀತಿಪಾಠ ಹೇಳಲು ತೊಡಗುತ್ತಿತ್ತೇನೋ. ಅತ್ತ ಬಡಪಾಯಿ ಕೋಳಿಮರಿ ಪರಿತ್ಯಕ್ತ ಭಾವದಿಂದ ಹೊರಟು ಹೋಗುತ್ತಿತ್ತೇನೋ. ಸದ್ಯ ಇಲ್ಲಿ ಹಾಗಾಗಿಲ್ಲ. ತನ್ನ ಪಾಡಿಗೆ ತಾನು ತಾಯಿನಾಯಿ ಅಂಗಳದಲ್ಲಿ ವಿಶ್ರಮಿಸುತ್ತಿದೆ. ಈ ಎಳೇಜೀವಗಳೆರಡು ತಮ್ಮದೇ ಲೋಕದಲ್ಲಿ ಮೈಮರೆತಿವೆ.

ಇದನ್ನೂ ಓದಿ : Viral Video: ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ನೋಡಿ ಬೇಸರಿಸಿಕೊಂಡಿದ್ದಾರೆ

ಈ ವಿಡಿಯೋ ಅನ್ನು ಈತನಕ 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸದ್ಯ ಇವು ನಮ್ಮ ಹಾಗಿಲ್ಲ. ಈ ಸ್ನೇಹ ಹೀಗೇ ಮುಂದುವರಿಯಲಿ ಎಂದು ಹಾರೈಸಿದ್ದಾರೆ. ಅಯ್ಯೋ ಈ ಕೋಳಿಮರಿಗೆ ಅಪ್ಪ ಅಮ್ಮ ಇಲ್ಲವೆ? ಮುಂದೊಂದು ದಿನ ಆ ತಾಯಿನಾಯಿ, ನಿನ್ನ ಸ್ನೇಹಿತ ನಮಗೆ ಒಳ್ಳೆಯ ಆಹಾರ ಗೊತ್ತಾ, ಎಂದು ಹೇಳಿಬಿಟ್ಟರೆ? ಮಾಧ್ಯಮಗಳು ಮತ್ತು ರಾಜಕಾರಣಿಗಳು ನೀವಿಬ್ಬರು ಭಿನ್ನಜಾತಿಯವರು, ಪರಸ್ಪರ ದ್ವೇಷಿಸಬೇಕು ಎಂದು ಹೇಳುವ ತನಕವಂತೂ ಇವು ಹೀಗೇ ಇರುತ್ತವೆ. ಈ ನಾಯಿ ಸೋಮಾರಿಯೇ, ಯಾಕೆ ಇದು ಸುಮ್ಮನೇ ಕುಳಿತಿದೆ? ಅಂತೆಲ್ಲ ಕೇಳಿದ್ದಾರೆ, ಹೇಳಿದ್ದಾರೆ, ತಿವಿದಿದ್ದಾರೆ ನೆಟ್ಟಿಗರು.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:04 pm, Thu, 15 June 23