Viral Video: ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ನೋಡಿ ಬೇಸರಿಸಿಕೊಂಡಿದ್ದಾರೆ

Mobile : ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಮೊಬೈಲ್​ ಬಳಕೆಯನ್ನು ನಿಷೇಧಿಸಿದಂತೆ ಎಲ್ಲಾ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿಯೂ ಇದನ್ನು ಅನುಸರಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ನೋಡಿ ಬೇಸರಿಸಿಕೊಂಡಿದ್ದಾರೆ
ಆನೆ ಮತ್ತು ಹುಲಿ ನೀರು ಕುಡಿಯಲು ಬಂದಿರುವ ದೃಶ್ಯ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 14, 2023 | 11:59 AM

Elephant: ಕರ್ನಾಟಕದಲ್ಲಿರುವ ಕಾಡಿನ ದೃಶ್ಯವಿದು. ಆನೆಯೊಂದು ನೀರು ಕುಡಿಯಲು ಬಂದಿದೆ. ಆ ಸಮಯಕ್ಕೆ ಹುಲಿಯೂ ಅಲ್ಲಿಗೆ ಬಂದಿದೆ. ಮುದೇನಾಗಬಹುದು ಎಂಬ ಕುತೂಹಲಕ್ಕಿಲ್ಲಿ ತೆರೆ ಬಿದ್ದಿದೆ. ಪರಸ್ಪರ ಸಮಾಧಾನವಾಗಿ ತಮ್ಮ ತಮ್ಮ ಹಾದಿ ಹಿಡಿದಿವೆ. ಈ ಅಪರೂಪದ ದೃಶ್ಯವನ್ನು ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ. ಸಂರಕ್ಷಿತ ಪ್ರದೇಶಗಳಲ್ಲಿ ಮೊಬೈಲ್ ಬಳಕೆ ಅತ್ಯಂತ ಅಸಹ್ಯಕರ, ಮೊಬೈಲ್​ ನಿಷೇಧಿಸಬೇಕೇ? ಎಂದು ಕೇಳಿದ್ದಾರೆ. ಯಾಕೆ ಎನ್ನುವುದು ಈ ವಿಡಿಯೋ ನೋಡಿದ ಮೇಲೆ ನಿಮಗರ್ಥವಾಗುತ್ತದೆ.

ಮೊಬೈಲ್​ ಶಬ್ದ ಕಿರಿಕಿರಿ ಮಾಡಿದ್ದು ಹೌದು. ಆದರೆ ಜೀಪ್​ ಎಂಜಿನ್​ ಶಬ್ದ? ಎಲೆಕ್ಟ್ರಿಕ್​ ಜೀಪ್​ ಆಗಬಹುದಲ್ಲ ಎಂದಿದ್ಧಾರೆ ಒಬ್ಬರು. ತಡೋಬಾ ಟೈಗರ್ ರಿಸರ್ವ್ ಕೋರ್ ಹಾಗೂ ಬಫರ್ ಝೋನ್​ನಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇತರೇ ಅರಣ್ಯ ಪ್ರದೇಶಗಳೂ ಇದನ್ನು ಅನುಸರಿಸಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ. ಇದನ್ನು ಅನೇಕರು ಅನುಮೋದಿಸಿದ್ದಾರೆ.

ಇದನ್ನೂ ಓದಿ : Viral Video: ಆಸ್ಟ್ರೇಲಿಯಾದ ಮನೆಯೊಂದರಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆ

ಫಾರೆಸ್ಟ್​ ಗಾರ್ಡ್​ ಮಾತ್ರ ಉಪಯೋಗಿಸುವಂತಿರಲಿ ಎಂದು ಅನೇಕರು ಹೇಳಿದ್ದಾರೆ. ಮನಾನು ಸಾಕಷ್ಟು ಸಲ ಕಬಿನಿಗೆ ಪ್ರಯಾಣಿಸಿದ್ದೇನೆ. ಹುಲಿ, ಚಿರತೆ ಕಂಡತಕ್ಷಣ ಡ್ರೈವರ್​​ಗಳು ಮೊಬೈಲ್​ ಬಳಸಲು ಶುರು ಮಾಡುತ್ತಾರೆ ಎಂದಿದ್ದಾರೆ ಇನ್ನೂ ಒಬ್ಬರು. ಪ್ರವಾಸಿಗರ ಭೇಟಿ, ಪ್ರಾಣಿಗಳ ನಡುವಿನ ಅಂತರ ಇತ್ಯಾದಿಯೆಡೆ ವಿಶೇಷ ಗಮನ ಹರಿಸಬೇಕು ಎಂದು ಕೆಲವರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:57 am, Wed, 14 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್