Viral Video: ಜೀನಾ ಇಸೀ ಕಾ ನಾಮ್ ಹೈ; ಅಜ್ಜಿಯ ಡ್ಯಾನ್ಸ್​ ಮೂಡ್​ಗೆ ನೆಟ್ಟಿಗರೆಲ್ಲ ಫಿದಾ

Reunion : ಶಾಲಾ ವಾರ್ಷಿಕೋತ್ಸವದಲ್ಲಿ ನರ್ತಿಸಲು ಇವರಿಗೆ ಅವಕಾಶ ಸಿಕ್ಕಿರಲಿಲ್ಲವೇನೋ ಅದಕ್ಕೆ ಇಲ್ಲಿ ಹೀಗೆ ನರ್ತಿಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಹಗೂರವಾಗಿ ಮಾತನಾಡಿದ್ದಾರೆ.

Viral Video: ಜೀನಾ ಇಸೀ ಕಾ ನಾಮ್ ಹೈ; ಅಜ್ಜಿಯ ಡ್ಯಾನ್ಸ್​ ಮೂಡ್​ಗೆ ನೆಟ್ಟಿಗರೆಲ್ಲ ಫಿದಾ
ಶಾಲಾ ಸ್ನೇಹಿತರ ಪುನರ್ಮಿಲನ ಕಾರ್ಯಕ್ರಮದಲ್ಲಿ ಹಿರಿಯ ಮಹಿಳೆ ನರ್ತಿಸುತ್ತಿರುವುದು
Follow us
ಶ್ರೀದೇವಿ ಕಳಸದ
|

Updated on:Jun 14, 2023 | 12:55 PM

Dance : ಹೇಗೆ ನೋಡಬೇಕು, ಹೇಗೆ ನಡೆಯಬೇಕು, ಹೇಗೆ ಕುಳಿತುಕೊಳ್ಳಬೇಕು, ಹೇಗೆ ನಿಲ್ಲಬೇಕು, ಹೇಗೆ ಮಲಗಬೇಕು,  ಹೇಗೆ ಹೊರಳಬೇಕು, ಹೇಗೆ ಸೀನಬೇಕು, ಹೇಗೆ ಕೆಮ್ಮಬೇಕು, ಹೇಗೆ ಉಸಿರಾಡಬೇಕು, ಹೇಗೆ ಮಲಗಬೇಕು ಇನ್ನೂ ಏನೆಲ್ಲ ಬೇಕುಬೇಕುಗಳ ಅತೀ ಶಿಸ್ತಿನ ಚೌಕಟ್ಟಿನೊಳಗೆ ಮನುಷ್ಯ ಸಹಜತೆಯನ್ನೇ ಮರೆತುಬಿಡುತ್ತಾನೆ. ಯಾವಾಗ ಸಹಜತೆ ಮರೆಯಾಗುತ್ತದೆಯೋ ಅಲ್ಲಿ ಒತ್ತಡ ಶುರುವಾಗುತ್ತದೆ. ಅದು ಮನಸ್ಸು ಮತ್ತು ದೇಹದ ಮೇಲೆ ಪರಿಣಾಮ ಬೀರಲು ಹೆಚ್ಚು ಸಮಯ ತೆಗೆದುಕೊಳ್ಳಲಾರದು. ಆದರೂ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೈಚಳಿ ಬಿಟ್ಟು ಬದುಕಬೇಕು ಎಂದೇ ಕನಸುತ್ತಿರುತ್ತಾನೆ. ಇದೀಗ ವೈರಲ್ ಆಗಿರುತವ ಈ ವಿಡಿಯೋ ಇದಕ್ಕೆ ಸಾಕ್ಷಿ.

1954ರಲ್ಲಿ ಶಾಲೆಕಟ್ಟಿಯಿಂದ ಹೊರದಾಟಿದ ವಿದ್ಯಾರ್ಥಿ ವಿದ್ಯಾರ್ಥಿನಿಯರೆಲ್ಲ ಇದೀಗ ಇಲ್ಲಿ ಒಟ್ಟಾಗಿದ್ದಾರೆ. ಇಲ್ಲಿ ಎಲ್ಲರೂ ಹಾಡಿನೊಳಗೆ ಭಾಗಿಯಾಗಿದ್ದಾರೆ. ಆದರೆ ಕೆಲವರಷ್ಟೇ ನೃತ್ಯ ಮಾಡುತ್ತಿದ್ದಾರೆ. ಈ ಎಲ್ಲರೊಳಗೂ ಅತ್ಯುತ್ಸಾಹದಿಂದ ಮಿಂಚುತ್ತಿರುವ ಅಜ್ಜಿಯೇ ಈ ವಿಡಿಯೋದ ಕೇಂದ್ರಬಿಂದು. ಆಕೆಯ ಉತ್ಸಾಹ ಎಂಥವರಲ್ಲಿಯೂ ಸಂಚಲನ ಮೂಡಿಸುವಂತಿದೆ. ಗೆಳೆತನದ ಈ ನಶೆ ಯಾವತ್ತೂ ಬೇರೆಯೇ! ಎಂದಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral: ಟೈ ಕಟ್ಟಿಕೊಳ್ಳುವುದು ಹೀಗೆ; ಸಂದರ್ಶನಕ್ಕೆ ಹೊರಟಿದ್ದ ಯುವಕನಿಗೆ ಅಜ್ಜನ ಪಾಠ

ಇನ್ನೇನು ಈ ವಿಡಿಯೋ ನೋಡಿದವರ ಸಂಖ್ಯೆ 4 ಲಕ್ಷಕ್ಕೆ ತಲುಪುತ್ತದೆ. ಇವರೆಲ್ಲ ಹೀಗೆ ನರ್ತಿಸುವುದನ್ನು ನೋಡುತ್ತಿದ್ದರೆ, ಬಹುಶಃ ಇವರಿಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ನರ್ತಿಸಲು ಅವಕಾಶ ಸಿಕ್ಕಿಲ್ಲವೆಂದು ಕಾಣುತ್ತದೆ. ಹೀಗೆ ಇಡಿಯಾಗಿ ಬದುಕುವುದು ಕೂಡ ಒಂದು ಕಲೆ. ಸದ್ಯ! ಈ ಗುಂಪಿನಲ್ಲಿ ಮೋದಿ ಕಾಣುತ್ತಿಲ್ಲವಲ್ಲ ಎಂದು ಕಾಂಗ್ರೆಸ್ಸಿಗರು ತಕರಾರು ಎತ್ತಿಲ್ಲವೆನ್ನುವುದು ಖುಷಿ ತಂದಿದೆ. ಗುಜರಾತಿಗರು ಮಾತ್ರ ಹೀಗೆ ನರ್ತಿಸಲು ಸಾಧ್ಯ… ಅಂತೆಲ್ಲ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:49 pm, Wed, 14 June 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ