AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಗ್ನಿಶಾಮಕ ಸಿಬ್ಬಂದಿ ಇವರನ್ನೆಲ್ಲ ಒದ್ದು ಬೀಳಿಸುತ್ತಿರುವುದು ಈ ಕಾರಣಕ್ಕೆ

Firefighters : ಆಲೋಚನೆಯ ಮೇಲೆ ಬದುಕು ನಿಂತಿದೆ, ಎಂಥ ಸಂದರ್ಭದಲ್ಲಿಯೂ ಕೆಲ ಕ್ಷಣಗಳ ಕಾಲ ಯೋಚಿಸಿದರೆ ಖಂಡಿತ ನಿಮ್ಮ ಬದುಕು ನಿಮ್ಮದಾಗುತ್ತದೆ. ಈ ವಿಡಿಯೋ ಬೆಳಗನ್ನು ಅಮೂಲ್ಯವಾಗಿಸಿದೆ ಧನ್ಯವಾದ ಎನ್ನುತ್ತಿದ್ದಾರೆ ನೆಟ್ಟಿಗರು. 

Viral Video: ಅಗ್ನಿಶಾಮಕ ಸಿಬ್ಬಂದಿ ಇವರನ್ನೆಲ್ಲ ಒದ್ದು ಬೀಳಿಸುತ್ತಿರುವುದು ಈ ಕಾರಣಕ್ಕೆ
ಆತ್ಮಹತ್ಯೆಗೆ ಮುಂದಾಗಿರುವವರನ್ನು ರಕ್ಷಿಸುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 15, 2023 | 12:02 PM

Suicide : ಬದುಕಿನ ದಾರಿ ಬಹಳ ದೊಡ್ಡದು. ಒಂದೊಂದೇ ಹಂತಗಳನ್ನು ದಾಟುವಾಗ ಎಡರು ತೊಡರು ಖಂಡಿತ ಇರುತ್ತವೆ. ಆಗ ಉಂಟಾಗುವ ಆಘಾತಗಳಿಂದ ಮನಸ್ಸನ್ನು ಸಂಭಾಳಿಸಿಕೊಳ್ಳುವುದು ಬಹಳೇ ಮುಖ್ಯ. ಇದು ಕೆಲವರಿಗೆ ಸಾಧ್ಯವಾಗುತ್ತದೆ, ಹಲವರಿಗೆ ಸಹಾಯ ಬೇಕಾಗುತ್ತದೆ. ಇನ್ನೂ ಕೆಲವರು ಬದುಕಿನ ದಾರಿಯನ್ನು ತಾವಾಗಿಯೇ ಕೊನೆಗೊಳಿಸಿಕೊಳ್ಳಲು ನಿರ್ಧರಿಸಿಬಿಡುತ್ತಾರೆ. ಹಾಗಾದಾಗ ಕೂಡ ಕೊನೇ ಕ್ಷಣದಲ್ಲಿ ಅವರು ಬದುಕುಳಿಯುವಂತೆ ಮಾಡಬಹುದಾಗಿದೆ. ಆದರೆ ಅವರು ಇತರರ ಕಣ್ಣಿಗೆ ಬಿದ್ದಲ್ಲಿ ಮಾತ್ರ! ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.

ಬೇರೆ ಬೇರೆ ವಸತಿ ಸಮುಚ್ಚಯಗಳಲ್ಲಿ ಬೇರೆ ಬೇರೆ ದಿನ, ಸಮಯದಲ್ಲಿ ಇನ್ನೇನು ಆತ್ಮಹತ್ಯೆಗೆ ಶರಣಾಗಬೇಕು ಎಂದು ನಿಂತಿರುವ ಈ ಮಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೀಗೆ ರಕ್ಷಿಸಿದ ವಿಡಿಯೋದ ತುಣುಕುಗಳು ಇವು. ಬದುಕಿನ ಘೋರ ಹೊಡೆತಗಳಿಗೆ ಬೇಸತ್ತು ತನಗಿನ್ನು ಲೋಕದ ನಂಟು ಸಾಕು ಎಂದು ಆತ್ಮಹತ್ಯೆಗೆ ಶರಣಾಗುವ ವ್ಯಕ್ತಿಯನ್ನು ಮಾತನಾಡಿಸಿದಾಗ, ತಡವಿದಾಗ ಕ್ಷಣಮಾತ್ರದಲ್ಲಿ ಆತನ ಆಲೋಚನೆ ಮತ್ತು ನಿರ್ಧಾರವನ್ನು ಬದಲಿಸಲು ಸಾಧ್ಯವಿದೆ ಎನ್ನುವುದಕ್ಕೆ ಈ ವಿಡಿಯೋ ಉದಾರಹರಣೆ.

ಇದನ್ನೂ ಓದಿ : Viral: ದುಬೈನ್​ ಅತೀ ದುಬಾರಿ ಮನೆ ರೂ. 1,675 ಕೋಟಿಗೆ ಮಾರಾಟಕ್ಕಿದೆ ; ಏನಿದರ ವೈಶಿಷ್ಟ್ಯ? 

ಆಲೋಚನೆಯ ಮೇಲೆ ಬದುಕು ನಿಂತಿದೆ, ಎಂಥ ಸಂದರ್ಭದಲ್ಲಿಯೂ ಕೆಲ ಕ್ಷಣಗಳ ಕಾಲ ನಿಂತು ಯೋಚಿಸಿದರೆ ಖಂಡಿತ ನಿಮ್ಮ ಬದುಕು ನಿಮ್ಮದಾಗುತ್ತದೆ. ಈ ವಿಡಿಯೋ ನನ್ನ ಬೆಳಗನ್ನು ಅಮೂಲ್ಯವಾಗಿಸಿದೆ ಧನ್ಯವಾದ.  ಕೆನಡಾದಲ್ಲಿ ವ್ಯಕ್ತಿಗಳನ್ನು ಒಳಗೆ ಬೀಳಿಸುವ ಬದಲು ಹೊರಗೆ ಬೀಳಿಸಲಾಗುತ್ತದೆ ಎಂದು ಕೇಳಿದ್ದೇನೆ. ಜೀವ ಉಳಿಸುವ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ.. ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ನೆಟ್ಟಿಗರು.

ಎಂಥ ಕೆಟ್ಟ ಘಳಿಗೆಯಲ್ಲಿಯೂ ಒಂದು ಕ್ಷಣ ಯೋಚಿಸುವುದು ಮತ್ತು ಆಪ್ತರೊಂದಿಗೆ ಮಾತನಾಡುವುದು ಬದುಕನ್ನೇ ಬದಲಿಸಬಲ್ಲುದು. ಅಲ್ಲವೆ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ