Viral: ದುಬೈನ್​ ಅತೀ ದುಬಾರಿ ಮನೆ ರೂ. 1,675 ಕೋಟಿಗೆ ಮಾರಾಟಕ್ಕಿದೆ ; ಏನಿದರ ವೈಶಿಷ್ಟ್ಯ?

Marble Palace : ಮಾರ್ಬಲ್ ಪ್ಯಾಲೇಸ್ ನಿರ್ಮಾಣಗೊಳ್ಳಲು 12 ವರ್ಷಗಳನ್ನು ತೆಗೆದುಕೊಂಡಿದೆ. 2018ರಿಂದ ಇದು ಮಾರಾಟಕ್ಕೆ ಮುಕ್ತವಾಗಿದೆ. ಇಡೀ ಜಗತ್ತಿನಲ್ಲಿ 5ರಿಂದ 10 ಮಂದಿಗೆ ಮಾತ್ರ ಇದನ್ನು ಖರೀದಿಸುವ ಸಾಮರ್ಥ್ಯವಿದೆ.

Viral: ದುಬೈನ್​ ಅತೀ ದುಬಾರಿ ಮನೆ ರೂ. 1,675 ಕೋಟಿಗೆ ಮಾರಾಟಕ್ಕಿದೆ ; ಏನಿದರ ವೈಶಿಷ್ಟ್ಯ?
ದುಬೈನಲ್ಲಿ ಮಾರಾಟಕ್ಕಿರುವ ಮಾರ್ಬೆಲ್ ಪ್ಯಾಲೇಸ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 15, 2023 | 10:47 AM

Dubai: ದುಬೈನ ಅತ್ಯಂತ ದುಬಾರಿ ಮನೆ ರೂ. 1,675 ಕೋಟಿಗೆ ಮಾರಾಟಕ್ಕಿದೆ. ಇಷ್ಟೊಂದು ಭಾರೀ ಬೆಲೆ ನಿಗದಿಯಾಗಿದೆ ಎಂದ ಮೇಲೆ ಈ ಮನೆಯು ಏನೆಲ್ಲ ವೈಶಿಷ್ಟ್ಯಗಳಿಂದ ಕೂಡಿರಬಹುದು ಎಂಬ ಕುತೂಹಲ ಸಹಜ ಅಲ್ಲವೆ? ಮಾರ್ಬಲ್​ ಪ್ಯಾಲೇಸ್ (Marble Palace) ಎಂದು ಕರೆಯುವ ಈ ಮನೆಗೆ ಇಟ್ಯಾಲಿಯನ್​ ಕಲ್ಲುಗಳು ಮತ್ತು ಸುಮಾರು 7,00,000 ಚಿನ್ನದ ರೇಕುಗಳನ್ನು ಬಳಸಿ ಅಲಂಕರಿಸಲಾಗಿದೆ. 5 ಬೆಡ್ರೂಮ್​, 19 ಬಾತ್ರೂಮ್​, 15 ಕಾರ್ ಗ್ಯಾರೇಜ್​, ಒಳಾಂಗಣ ಮತ್ತು ಹೊರಾಂಗಣದಲ್ಲಿ ಈಜುಕೊಳ, 70,00,000 ಲೀಟರ್ ಸಾಮರ್ಥ್ಯವುಳ್ಳ​ ಹವಳದ ಬಂಡೆಗಳಿಂದ ಕೂಡಿದ ಅಕ್ವೇರಿಯಂ, ಎಲೆಕ್ಟ್ರಿಕ್​ ಸಬ್​ಸ್ಟೇಷನ್​ಗಳನ್ನು ಇದು ಒಳಗೊಂಡಿದೆ.

ಇದನ್ನೂ ಓದಿ : Viral: ಇದು ಅತಿಯಾದ ಚೇಷ್ಟೆಯೋ? ಬೆಂಗಳೂರಿನ ಈ ಬಾಲಕಿ ಅಪಹರಣದ ನಾಟಕವಾಡಿದಳಾ?

ಈ ಮಾರ್ಬಲ್ ಪ್ಯಾಲೇಸ್ ನಿರ್ಮಾಣಗೊಳ್ಳಲು ಸುಮಾರು 12 ವರ್ಷಗಳನ್ನು ತೆಗೆದುಕೊಂಡಿದೆ. 2018 ರಿಂದ ಇದು ಪೂರ್ಣಗೊಂಡು ಮಾರಾಟಕ್ಕೆ ಮುಕ್ತವಾಗಿದೆ. ಇದರ ಮಾಲೀಕರು ಲೋಕಲ್ ಪ್ರಾಪರ್ಟಿ​ ಡೆವಲಪರ್ ಆಗಿದ್ದು, ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸಿಲ್ಲ. ಲುಕ್ಷಾಬಿಟಟ್​ಸೋರ್​ಬೈನ ದಲ್ಲಾಳಿಯ ಕುನಾಲ್​ ಸಿಂಗ್​, ‘ಇದು ಪ್ರತಿಯೊಬ್ಬರಿಗೂ ಇಷ್ಟವಾಗುವ ರೀತಿ ಮತ್ತು ಶೈಲಿಯಲ್ಲಿ ಕಟ್ಟಿದಂಥ ಮನೆಯಲ್ಲ. ಇದನ್ನು ಖರೀದಿಸಲು ಬಯಸುವವರು ಪ್ರೀತಿಸುತ್ತಾರೆ ಅಥವಾ ದ್ವೇಷಿಸುತ್ತಾರೆ ಎನ್ನುವುದರ ಬಗ್ಗೆ ನಮಗೆ ಅರಿವಿದೆ. ಇಡೀ ಜಗತ್ತಿನಲ್ಲಿ ಐದರಿಂದ ಹತ್ತು ಮಂದಿ ಮಾತ್ರ ಇದನ್ನು ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ’ ಎಂದಿದ್ದಾನೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಆಸ್ಟ್ರೇಲಿಯಾದ ಮನೆಯೊಂದರಲ್ಲಿ 8 ಅಡಿ ಉದ್ದದ ಹೆಬ್ಬಾವು ಪತ್ತೆ

ಎಮಿರೇಟ್ಸ್ ಹಿಲ್ಸ್ ಸುಮಾರು 20 ವರ್ಷಗಳ ಹಿಂದೆ ವಿನ್ಯಾಸಗೊಳಿಸಲಾದ ಗೇಟೆಡ್ ಸಮುದಾಯವಾಗಿದೆ. ಇದನ್ನು ದುಬೈನ ಬೆವರ್ಲಿ ಹಿಲ್ಸ್ ಎಂದೂ ಕರೆಯಲಾಗುತ್ತದೆ. ಇದು ಗಾಲ್ಫ್ ಕೋರ್ಸ್​ಗೆ ಅಂಟಿಕೊಂಡಿದೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ