Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇದು ಅತಿಯಾದ ಚೇಷ್ಟೆಯೋ? ಬೆಂಗಳೂರಿನ ಈ ಬಾಲಕಿ ಅಪಹರಣದ ನಾಟಕವಾಡಿದಳಾ?

Electronic City: ಮುಂದಿನ ಒಂದೆರಡು ನಿಮಿಷಗಳಲ್ಲಿ ಪ್ರತ್ಯಕ್ಷಳಾದ ಹುಡುಗಿ, ಯಾರೋ ಅಪರಿಚಿತ ಕರೆಗಂಟೆ ಬಾರಿಸಿದ, ಬಾಗಿಲು ತೆರೆದಾಗ ಒಳನುಗ್ಗಿ ತನ್ನನ್ನು ಟೆರೇಸಿಗೆ ಎಳೆದುಕೊಂಡು ಹೋದ, ಅವನ ಕೈ ಕಚ್ಚಿ ತಾನು ಪಾರಾಗಿ ಬಂದೆ ಎಂದಿದ್ದಾಳೆ.

Viral: ಇದು ಅತಿಯಾದ ಚೇಷ್ಟೆಯೋ? ಬೆಂಗಳೂರಿನ ಈ ಬಾಲಕಿ ಅಪಹರಣದ ನಾಟಕವಾಡಿದಳಾ?
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 14, 2023 | 6:07 PM

Kidnapping: ನಮ್ಮೆಲ್ಲರನ್ನೂ ತಲ್ಲಣಗೊಳಿಸಬೇಕಾದ ಘಟನೆಯೊಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ (Electronic City, Bengaluru) ಬಹುಮಹಡಿ ವಸತಿ ಸಮುಚ್ಚಯದಲ್ಲಿ ಇತ್ತೀಚಿಗೆ ನಡೆದಿದ್ದು ಅದರ ರೋಚಕ ವಿವರಗಳು  ವಾಟ್ಸ್ಯಾಪ್‌ ಗುಂಪುಗಳಲ್ಲೆಲ್ಲ ವ್ಯಾಪಕವಾಗಿ ಹರಿದಾಡುತ್ತಿವೆ. ಪುಟ್ಟ ಹುಡುಗಿಯೊಬ್ಬಳು ತನ್ನ ತುಂಟಾಟಗಳಿಂದ ತನ್ನ ಪಾಲಕರನ್ನು ನೆರೆಹೊರೆಯವರನ್ನು ಆತಂಕಕ್ಕೆ ತಳ್ಳಿದ್ದು, ಪೊಲೀಸರಿಗೆ ಗೊಂದಲವುಂಟುಮಾಡಿದ್ದಲ್ಲದೇ, ಡೆಲಿವರಿ ಏಜೆಂಟ್​ಗೆ ವಿನಾಕಾರಣ ಶಿಕ್ಷೆಗೆ ಗುರಿಮಾಡಿದ ಘಟನೆ ಇದಾಗಿದೆ. ಇದರ ವಿವರಗಳನ್ನು ಓದಿದರೆ ಇವು ಬಾಲ್ಯಸಹಜ ಚೇಷ್ಟೆಗಳೋ!? ಎಂಬ ಜಿಜ್ಞಾಸೆ ಉಂಟಾಗುವ ಸಾಧ್ಯತೆ ಇದೆ.

ತಮ್ಮನನ್ನು ಶಾಲೆಗೆ ಬಿಟ್ಟು ಬರುತ್ತೇವೆ, ನೀನು ಮನೆಯಲ್ಲಿಯೇ ಇರು ಎಂದು  ಬೆಳಗ್ಗೆ ಒಂಬತ್ತರ ಸುಮಾರಿಗೆ ಶಾಲೆಗೆ ಹೊರಟಿದ್ಧಾರೆ ಎಂಟು ವರ್ಷದ ಬಾಲಕಿಯ ತಂದೆ ತಾಯಿ. ಹದಿನೈದಿಪ್ಪತ್ತು ನಿಮಿಷಗಳ ನಂತರ ಮರಳಿದ ಅವರು ಮನೆಯ ಬಾಗಿಲು ಹೊರಗಿಂದ ಲಾಕ್ ಆಗಿದ್ದನ್ನು ನೋಡಿ ಗಾಬರಿಯಿಂದ ಮಗಳನ್ನು ಹುಡುಕತೊಡಗಿದ್ದಾರೆ. ಇವರೊಂದಿಗೆ ನೆರೆಮನೆಯವರೊಬ್ಬರು ಜೊತೆಯಾಗಿದ್ದಾರೆ. ಮುಂದಿನ ಒಂದೆರಡು ನಿಮಿಷಗಳಲ್ಲಿ ಪ್ರತ್ಯಕ್ಷಳಾದ ಹುಡುಗಿ, ಯಾರೋ ಅಪರಿಚಿತ ಕರೆಗಂಟೆ ಬಾರಿಸಿದ, ಬಾಗಿಲು ತೆರೆದಾಗ ಒಳನುಗ್ಗಿ ತನ್ನನ್ನು ಟೆರೇಸಿಗೆ ಎಳೆದುಕೊಂಡು ಹೋದ, ಅವನ ಕೈ ಕಚ್ಚಿ ತಾನು ಪಾರಾಗಿ ಬಂದೆ’ ಎಂದಿದ್ದಾಳೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Che Guevara Birth Anniversary: ”ಮೈಬಗ್ಗಿಸಿ ದುಡಿದರೆ ನೀವು ಗಂಡಸರಾಗುತ್ತೀರಿ”; ಗೇ ಜನರಿಗೆ ಹೀಗೆ ಹೇಳಿದ್ದನೇ ಚೆ ಗುವಾರ್?

ಹುಡುಗಿಯ ಅಪ್ಪ ಮತ್ತು ನೆರೆಯವರು ಸೆಕ್ಯುರಿಟಿಯವರಲ್ಲಿ ವಿಚಾರಿಸಿದಾಗ, ಆ ಸಮಯದಲ್ಲಿ ಒಬ್ಬ ಡೆಲಿವರಿ ಏಜೆಂಟ್ ಒಳಗೆ ಬಂದಿದ್ದು ತಿಳಿದು ಬಂದಿದೆ. ಬಾಲಕಿ ಇವನೇ ಅವನು ಎಂದು ಗುರುತಿಸಿದಾಗ, ಅಲ್ಲಿದ್ದವರು ಅವನಿಗೆ ಏಟು ಕೊಟ್ಟಿದ್ದಾರೆ. ಅಷ್ಟರಲ್ಲಿ ಸುದ್ದಿ ಪೊಲೀಸರಿಗೆ ತಲುಪಿ ಅವರು ತನಿಖೆ ಶುರು ಮಾಡಿದಾಗ CCTVಯಲ್ಲಿ ಆ ಡೆಲಿವರಿ ಏಜೆಂಟ್​ ಸಮುಚ್ಚಯದೊಳಗೆ ಬಂದದ್ದೇ 9:40ಕ್ಕೆ ಎಂದು ತಿಳಿದು ಬಂದಿದೆ. ಅವನ ಬೆಂಬಲಕ್ಕೆ ನೂರಾರು ಡೆಲಿವರಿ ಏಜೆಂಟರುಗಳು ಬಂದು ಗೇಟಿನ ಹೊರಗೆ ನೆರೆದಿದ್ದಾರೆ. ಅವರನ್ನು ಚದುರಿಸಿ ಪೊಲೀಸರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಮುಂದೆ ಇನ್ನೊಬ್ಬ ಸಂದೇಹಿತ ವ್ಯಕ್ತಿಯನ್ನು ತನಿಖೆಗೊಳಪಡಿಸಿ ಅವನೂ ನಿರ್ದೋಷಿ ಎಂದು ಸಾಬೀತಾಗಿದೆ.

ಇದನ್ನೂ ಓದಿ : Viral Video: ಜೀನಾ ಇಸೀ ಕಾ ನಾಮ್ ಹೈ; ಅಜ್ಜಿಯ ಡ್ಯಾನ್ಸ್​ ಮೂಡ್​ಗೆ ನೆಟ್ಟಿಗರೆಲ್ಲ ಫಿದಾ

ಹಾಗಿದ್ದರೆ ಆದದ್ದಾದರೂ ಏನು? ಇದು ಗೊತ್ತಾಗಿರುವುದು ಮರುದಿನ. ಪಕ್ಕದ ಕಟ್ಟಡವೊಂದರ CCTV ತುಣುಕುಗಳನ್ನು ಪರಿಶೀಲಿಸಿದಾಗ, ಹಿಂದಿನ ದಿನ 9ರಿಂದ 9.20ರವರೆಗೆ 8 ವರ್ಷದ ಆ ಹುಡುಗಿ ಟೆರೇಸ್ ಮೇಲೆ ಒಬ್ಬಳೇ ಓಡಾಡುತ್ತ, ಲಿಫ್ಟ್ ಮೂಲಕ ಪಕ್ಕದ ಕಟ್ಟಡಗಳ ಸುತ್ತು ಹೊಡೆಯುತ್ತಿದ್ದಳು. ಆ ಹೊತ್ತಿಗೆ ಮೇಲೆ ಬಂದ ನೆರೆಯವರನ್ನು ಕಂಡಕ್ಷಣ ತನ್ನ ತಂದೆತಾಯಿ ಮರಳಿರಬೇಕು, ತನ್ನನ್ನು ಹುಡುಕುತ್ತಿರಬೇಕು ಎಂಬುದು ಅರಿವಿಗೆ ಬಂದು ಆಕೆ ಹೀಗೆ ವರ್ತಿಸಿರಬಹುದು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:46 pm, Wed, 14 June 23

ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು