Che Guevara Birth Anniversary: ‘ಮೈಬಗ್ಗಿಸಿ ದುಡಿದರೆ ನೀವು ಗಂಡಸರಾಗುತ್ತೀರಿ’ ಗೇ ಜನರಿಗೆ ಹೀಗೆ ಹೇಳಿದ್ದನೇ ಚೆ ಗುವಾರ್?

Viral: 'LGBTQ+ ಸಮುದಾಯ ಮತ್ತವರನ್ನು ಗೌರವಿಸುವವರು ಈ ಸಂಗತಿಯನ್ನು ಮರೆಯುವಂತಿಲ್ಲ. ಯಾರನ್ನೂ ದೈವತ್ವಕ್ಕೆ ಏರಿಸಿ ಪೂಜಿಸುವ ಮನೋಭಾವ ಸಲ್ಲದು. ಎಲ್ಲ ಮನುಷ್ಯರಂತೆ ಚೆ ಗುವಾರಾ ಅವರಲ್ಲೂ ದೌರ್ಬಲ್ಯಗಳು ಇದ್ದವು ಎಂದು ನಿರ್ಣಯಿಸಿ, ಅವರ ತಪ್ಪುಗಳನ್ನು ಕ್ಷಮಿಸೋಣ.' ವಸುಧೇಂದ್ರ, ಲೇಖಕ.

Che Guevara Birth Anniversary: 'ಮೈಬಗ್ಗಿಸಿ ದುಡಿದರೆ ನೀವು ಗಂಡಸರಾಗುತ್ತೀರಿ' ಗೇ ಜನರಿಗೆ ಹೀಗೆ ಹೇಳಿದ್ದನೇ ಚೆ ಗುವಾರ್?
ಕಮ್ಯೂನಿಸ್ಟ್ ನಾಯಕ ಚೆ ಗುವಾರಾ. (ಸೌಜನ್ಯ : ಅಂತರ್ಜಾಲ)
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 14, 2023 | 3:01 PM

Communist: ”ಚೆ ಗುವಾರಾ ಕುರಿತು (Che Guevara) ವಿಪರೀತ ವಿಜ್ರಂಭಣೆಯ ಮಾತುಗಳನ್ನು ನಾವು ಜಗತ್ತಿನೆಲ್ಲೆಡೆ ಕೇಳುತ್ತಿರುತ್ತೇವೆ. ಅವನ ಹಲವು ಸಾಮಾಜಿಕ ಕಾಳಜಿಗಳನ್ನು ನಾವು ಗೌರವಿಸಿದರೂ, ಅವನಲ್ಲಿ ಸಾಕಷ್ಟು ಅಮಾನವೀಯ ಗುಣಗಳಿದ್ದವು. ಬಹುಮುಖ್ಯವಾಗಿ ಗೇ (Gay) ಜನರನ್ನು ಆತ ಅತ್ಯಂತ ಕೀಳಾಗಿ ಕಂಡಿದ್ದಾನೆ. ಹಿಟ್ಲರ್‌ನು ಯಹೂದಿಗಳನ್ನು ನಿರ್ನಾಮ ಮಾಡಿದ್ದನ್ನು ಮಾದರಿಯಾಗಿ ತೆಗೆದುಕೊಂಡು, ಚೆ ಗುವಾರನು ಗೇ ಜನರನ್ನು ವ್ಯವಸ್ಥಿತವಾಗಿ ಕೊಲ್ಲಲು ಯೋಜನೆ ಹೂಡಿದ್ದ. ಅವರಿಗಾಗಿ ಊರ ಹೊರಗೆ ಜೈಲುಗಳನ್ನು ತೆರೆದು ಕೂಡಿ ಹಾಕಿದ್ದ. ‘ಮೈ ಬಗ್ಗಿ ದುಡಿದರೆ ನೀವು ಗಂಡಸರಾಗುತ್ತೀರಿ’ ಎಂದು ಫಲಕ ಬರೆಸಿ ಹಾಕಿಸಿದ್ದ.” ಲೇಖಕ ವಸುಧೇಂದ್ರ ಅವರ ಪ್ರಸ್ತುತ ಫೇಸ್​ಬುಕ್​ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.

”LGBTQ+ ಸಮುದಾಯದವರು ಮತ್ತು ಅವರನ್ನು ಗೌರವಿಸುವವರು ಯಾರೂ ಈ ಸಂಗತಿಯನ್ನು ಮರೆಯುವಂತಿಲ್ಲ. ಯಾರನ್ನೂ ದೈವತ್ವಕ್ಕೆ ಏರಿಸಿ ಪೂಜಿಸುವ ಮನೋಭಾವ ನಮ್ಮಲ್ಲಿ ಇರಬಾರದು. ಎಲ್ಲಾ ಮನುಷ್ಯರಂತೆ ಅವರಲ್ಲೂ ದೌರ್ಬಲ್ಯಗಳು ಇದ್ದವು ಎಂದು ನಿರ್ಣಯಿಸಿ, ಅವರ ತಪ್ಪುಗಳನ್ನು ಕ್ಷಮಿಸೋಣ” ಎಂದಿರುವ ವಸುಧೇಂದ್ರ ಈ ಕುರಿತು ಆನ್​ಲೈನ್​ ಮಾಹಿತಿಯ ಪುರಾವೆ ನೀಡಿದ್ದಾರೆ. ನೆಟ್ಟಿಗರಿಂದ ಈ ವಿಷಯವಾಗಿ ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡಿವೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಜೀನಾ ಇಸೀ ಕಾ ನಾಮ್ ಹೈ; ಅಜ್ಜಿಯ ಡ್ಯಾನ್ಸ್​ ಮೂಡ್​ಗೆ ನೆಟ್ಟಿಗರೆಲ್ಲ ಫಿದಾ

ಲೇಖಕ ಪೀರ್​ ಬಾವಜಿ, ”ಗೇ ಜನರ ಬಗ್ಗೆ ನಿಮ್ಮ ಸಂಶೋಧನೆಯ ಬಗ್ಗೆ ತಿಳಿಯದು. ಆದರೆ “ಹಿಟ್ಲರನ ಮಾದರಿಯಲ್ಲಿ” “ಜನರನ್ನು ಕೊಲ್ಲಲು” ಇಂತಹ ಬಿಡುಬೀಸಾದ ಹೇಳಿಕೆಗಳು ನಿಮ್ಮ ತಿಳಿವಳಿಕೆಯ ಮಿತಿ ಅಥವಾ ಕುತ್ಸಿತತನವನ್ನೂ ಬಯಲು ಮಾಡುತ್ತವೆ. ಚೆ ಗುವಾರಾ ಹಲವರಿಗೆ ಇಷ್ಟವಾಗದಿರಲು ಹಲವು ಕಾರಣಗಳಿವೆ. ಅವರಲ್ಲಿ ನೀವೂ ಒಬ್ಬರು ಎಂದಾದರೆ ಆಶ್ಚರ್ಯವಿಲ್ಲ. ಆದರೆ ಒಬ್ಬ ಲೇಖಕ ಎನಿಸಿಕೊಂಡಾತ ಬಾಲಿಶವಾಗಿ ಮಾತಾಡಬಾರದು ಎಂಬುದನ್ನು ನಿಮ್ಮ ಹಿನ್ನೆಲೆಯಲ್ಲಿ ಹೇಳಬೇಕಾಯ್ತು.” ಎಂದಿದ್ದಾರೆ.

ಇದನ್ನೂ ಓದಿ : Viral Post: ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ; ನಾಸಾ ಬಿಡುಗಡೆ ಮಾಡಿದ ಚಿತ್ರವೀಗ ವೈರಲ್

ಮಂಜುಳಾ ಹುಲಿಕುಂಟೆ, ”ಯಾವುದೇ ಹೋರಾಟಗಾರನ್ನ, ಬಂಡವಾಳಶಾಯಿ ವ್ಯವಸ್ಥೆಯ ವಿರುದ್ಧ ನಿಂತವರನ್ನ ಬ್ರಾಹ್ಮಣ್ಯದ ಮನಸ್ಥಿತಿಗಳು ಒಪ್ಪಿಕೊಳ್ಳೋದಿಲ್ಲ. ಅವರ ಚಿಕ್ಕ ತಪ್ಪನ್ನು ದೊಡ್ಡದು ಮಾಡಿ ಪ್ರಚಾರ ಮಾಡೋ ಬ್ರಾಹ್ಮಣ್ಯ ಎಲ್ಲಾ ಕಾಲಕ್ಕೂ ಇತ್ತು. ನೀವು ಹೇಳ್ತಿರೋದು ನಿಜಾ ಆಗಿದ್ರೆ ಈ ಹಿಂದೆ ಈ ವಿಚಾರ ಹೆಚ್ಚು ಪ್ರಚಾರ ಪಡೀತಿತ್ತು. ಆದ್ರೆ ಚೆ ಗುವಾರನ ಕುರಿತು ಇಂಥ ಸಣ್ಣತನದ ಮಾತು, ಚರ್ಚೆಗಳು ಬೆಳೆಸೋದು ಸಾಧ್ಯ ಆಗಲಿಲ್ಲ. ಅವನ ಇಡೀ ಬದುಕು ಹಂತ-ಹಂತದಲ್ಲೂ ದಾಖಲಾಗಿದೆ. ಜೊತೆ ನಡೆದವರು ಮೊನ್ನೆ ಮೊನ್ನೆವರೆಗೂ ಬದ್ಕಿದ್ರು. ಇದೆಲ್ಲಾ ಕಟ್ಟು ಕಥೆ. ಅವನ ವಿರುದ್ಧ ಕೆಟ್ಟ ಪ್ರಚಾರಕ್ಕೆ ಬಳಸಿರೋದಷ್ಟೇ…ಒಬ್ಬ ಹೋರಾಟಗಾರ ಮತ್ತೆ ಸರ್ವಾಧಿಕಾರಿಯನ್ನ ಒಟ್ಟಿಗಿಟ್ಟು ನೋಡೋದೆ ಕುತಂತ್ರ.” ಎಂದಿದ್ದಾರೆ.

ಇದನ್ನೂ ಓದಿ : Viral Post: ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ; ನಾಸಾ ಬಿಡುಗಡೆ ಮಾಡಿದ ಚಿತ್ರವೀಗ ವೈರಲ್

ಅನೇಕರು ವಸುಧೇಂದ್ರ ಅಭಿಪ್ರಾಯದ ಮೇಲೆ ಮುಗಿಬಿದ್ದ ಪರಿಣಾಮ, ”ನಾನು ಸಂಶೋಧಕನಲ್ಲ. ಆದರೆ ಅಂತರ್ಜಾಲದಲ್ಲಿ ಈ ಕುರಿತು ಸಾಕಷ್ಟು ಚರ್ಚೆ, ಪುರಾವೆ, ಲೇಖನ, ಪ್ರಬಂಧಗಳು ಮಂಡನೆಯಾಗಿವೆ. ಅವುಗಳನ್ನು ಸುಳ್ಳೆಂದು ನಿರೂಪಿಸಿದ ಲೇಖನಗಳು ಹುಡುಕಿದರೂ ಸಿಗಲಿಲ್ಲ. ಚೆಯನ್ನು ಬಲ್ಲ ವ್ಯಕ್ತಿಗಳು ಪುರಾವೆ ಸಮೇತ ಇದೆಲ್ಲಾ ಸುಳ್ಳು ಎಂದು ತಿಳಿಸಿದರೆ ಖಂಡಿತಾ ನನ್ನ ನಿಲುವು ಬದಲಾಯಿಸುವೆ. ಅದಕ್ಕೂ ಹೆಚ್ಚು ನಾನೇನು ಮಾಡಲು ಸಾಧ್ಯ?” ಎಂದು ಸಮರ್ಥಿಸಿಕೊಂಡಿದ್ದಾರೆ ವಸುಧೇಂದ್ರ.

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:59 pm, Wed, 14 June 23