AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Willi Ninja: ಅಪ್ರತಿಮ ನೃತ್ಯಸಂಯೋಜಕ ವಿಲ್ಲಿ ನಿಂಜಾಗೆ ಗೂಗಲ್​ ಡೂಡಲ್​ ಗೌರವ

Google Doodle: 1990ರ ಇದೇ ದಿನ ''ಪ್ಯಾರಿಸ್ ಈಸ್ ಬರ್ನಿಂಗ್'' (ಐಕಾನಿಕ್ ಹೌಸ್ ಆಫ್ ನಿಂಜಾ) ಸಾಕ್ಷ್ಯಚಿತ್ರವು ನ್ಯೂಯಾರ್ಕ್​ನ LGBTQ+ ಚಲನಚಿತ್ರೋತ್ಸವದಲ್ಲಿ ಬಿಡುಗಡೆಗೊಂಡಿತ್ತು. ಈ ಪ್ರಯುಕ್ತ ಗೂಗಲ್,​ ಡೂಡಲ್ ಮೂಲಕ ಸಂಭ್ರಮಿಸುತ್ತಿದೆ.

Willi Ninja: ಅಪ್ರತಿಮ ನೃತ್ಯಸಂಯೋಜಕ ವಿಲ್ಲಿ ನಿಂಜಾಗೆ ಗೂಗಲ್​ ಡೂಡಲ್​ ಗೌರವ
ವಿಲ್ಲಿ ನಿಂಜಾ (Willi Ninja) ಗೂಗಲ್ ಡೂಡಲ್
TV9 Web
| Updated By: Digi Tech Desk|

Updated on:Jun 09, 2023 | 11:04 AM

Share

Google Doodle : ‘ಗಾಡ್‌ಫಾದರ್‌ ಆಫ್‌ ವೋಗ್ಯಿಂಗ್‌’ ಎಂದು ಕರೆಯಲ್ಪಟ್ಟ ಅಪ್ರತಿಮ ನರ್ತಕ, ನೃತ್ಯ ಸಂಯೋಜಕ ವಿಲ್ಲಿ ನಿಂಜಾ (Willi Ninja) ಅವರ ನೃತ್ಯಪರಂಪತೆಯನ್ನು ಅದ್ಭುತವಾದ ಡೂಡಲ್ ವಿಡಿಯೋದೊಂದಿಗೆ ಗೂಗಲ್ ಇಂದು ಆಚರಿಸುತ್ತಿದೆ. ಈ ಮೂಲಕ LGBTQ ಸಮುದಾಯವನ್ನು ಗೌರವಿಸುವುದು ಗೂಗಲ್​ನ ಉದ್ಧೇಶವಾಗಿದೆ. ‘ದಿ ಐಕಾನಿಕ್ ಹೌಸ್ ಆಫ್ ನಿಂಜಾ’ ದ ಯೂಟ್ಯೂಬ್ ತುಣುಕಿನೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ. ಮಧ್ಯದಲ್ಲಿ ಹರ್ಲೆಮ್ ಬಾಲ್​ರೂಮ್​ ಸೀನ್​ ಅನ್ನೂ ಡೂಡಲ್ ಮಾಡಲಾಗಿದೆ.

ನ್ಯೂಯಾರ್ಕ್‌ನ ನ್ಯೂ ಹೈಡ್ ಪಾರ್ಕ್‌ನಲ್ಲಿರುವ ಲಾಂಗ್ ಐಲ್ಯಾಂಡ್ ಯಹೂದಿ ಆಸ್ಪತ್ರೆಯಲ್ಲಿ 1961ರ ಏಪ್ರಿಲ್ 12ರಂದು ವಿಲ್ಲೀ ಜನಿಸಿದರು. ವಿಲ್ಲಿ ಮಿಶ್ರ ಜನಾಂಗೀಯ ಇತಿಹಾಸ ಹೊಂದಿದ್ದರು. ತಾಯಿ ಕಪ್ಪುಮೂಲದವರು. ಐರಿಶ್, ಚೆರೋಕೀ ಮತ್ತು ಏಷ್ಯನ್ ಪೂರ್ವಜರನ್ನು ವಿಲ್ಲಿ ಹೊಂದಿದ್ದರು. 1980 ಮತ್ತು 1990 ರ ದಶಕಗಳಲ್ಲಿ, ನೃತ್ಯದಲ್ಲಿ ಆಕರ್ಷಕ ಮಟ್ಟು ಮತ್ತು ಭಂಗಿಗಳಿಂದ ಜಗತ್ತಿಗೆ ಚಿರಪರಿಚಿತರಾದ ವಿಲ್ಲಿ ಬ್ಲ್ಯಾಕ್​ LGBTQ+ ಪ್ರಾತಿನಿಧ್ಯ ಮತ್ತು ಸ್ವೀಕಾರಕ್ಕೆ ದಾರಿ ಮಾಡಿಕೊಡುವ ಜವಾಬ್ದಾರಿಯನ್ನು ಹೊಂದಿದ್ದರು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇದನ್ನೂ ಓದಿ : Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

ಇಪ್ಪತ್ತರ ದಶಕದಲ್ಲಿ ವೋಗ್ ಶೈಲಿಯನ್ನು ಹುಟ್ಟುಹಾಕಿದ ಇವರು ಗುರುವಿನ ಮಾರ್ಗದರ್ಶನವಿಲ್ಲದೆಯೇ ಸ್ವಪ್ರಯತ್ನದಿಂದ ಕಲಿತಿರುವುದು ಗಮನಾರ್ಹ. ಈ ನೃತ್ಯಶೈಲಿಯು ಕೆಮೆಟಿಕ್ ಚಿತ್ರಲಿಪಿ, ಮೈಕೆಲ್ ಜಾಕ್ಸನ್, ಫ್ರೆಡ್ ಆಸ್ಟೈರ್, ಒಲಿಂಪಿಕ್ ಜಿಮ್ನಾಸ್ಟ್‌ ಮತ್ತು ಏಷ್ಯನ್ ನೃತ್ಯಸಂಸ್ಕೃತಿಗಳ ಪ್ರಭಾವವನ್ನು ಹೊಂದಿದೆ.

ವಿಲ್ಲಿ ನಿಂಜಾ 2006ರ ಸೆಪ್ಟಂಬರ್​ 6 ರಂದು ನಿಧನ ಹೊಂದಿದರು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:48 am, Fri, 9 June 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!