Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ
Fraternity : 'ಇಬ್ಬರು ಸೋದರರು'; ಚಪ್ಪಲಿ, ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ. ಇದು ನಿಜವಾದ ಭಾರತ ಎನ್ನುತ್ತಿರುವ ನೆಟ್ಟಿಗರು.
Viral Video : “ಇದು ನನ್ನ ಭಾರತ”, “ಇದು ನಿಜವಾದ ಭಾರತ”, “ಹಳೆಯ ಭಾರತದ ಸಣ್ಣ ಕುರುಹು” ಎಂಬಿತ್ಯಾದಿ ವಿಶೇಷಣಗಳೊಂದಿಗೆ ಟ್ವಿಟರ್ನಲ್ಲಿ ಜನರು ಪ್ರತಿಕ್ರಿಯಿಸುತ್ತಿರುವ ಒಂದು ಅಪೂರ್ವ ಚಿತ್ರ ಮತ್ತು ಸುದ್ದಿ ಇಲ್ಲಿದೆ. ಕೊಲ್ಕತ್ತೆಯ ಕೂಡ್‌ಘಾಟ್ (Kudghat) ಪ್ರದೇಶದಲ್ಲಿ ಒಂದು ಗೂಡಂಗಡಿಯಿದೆ. “ದುಯಿ ಭಾಯೀ” (ಇಬ್ಬರು ಸೋದರರು) ಎಂಬ ಹೆಸರಿನ ಚಪ್ಪಲಿ ಹಾಗೂ ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ.
A neighborhood shop run by a Hindu and a Muslim. The name of the store is ‘Two Brothers’. With time, the shop that repairs shoes and leather bags have become smaller.. But still exists. ? pic.twitter.com/fpyDDwzfXd
ಇದನ್ನೂ ಓದಿ— Debotri Ghosh (@DebotriG) June 4, 2023
“ನಾನು ಈ ಅಂಗಡಿಯಿಂದ ಐದು ನಿಮಿಷದಷ್ಟು ದೂರದಲ್ಲಿದ್ದ ಮನೆಯಲ್ಲಿ ಹುಟ್ಟಿ ಬೆಳೆದಿದ್ದೆ. ಈ ಅಂಗಡಿ ಇನ್ನೂ ಇದೆ ಎಂದು ತಿಳಿದು ಹರ್ಷವಾಗುತ್ತಿದೆ!,” “ನಾನು ಹತ್ತಿರದಲ್ಲಿಯೇ ಕೆಲಸ ಮಾಡುತ್ತೇನೆ. ಶೂ ರಿಪೇರಿಗೆ ನಾನು ಯಾವಾಗಲೂ ಇಲ್ಲಿಯೇ ಹೋಗುವುದು,” ಎಂದು ಈ ಅಂಗಡಿಯ ಪರಿಚಯವಿರುವವರು ಪ್ರತಿಕ್ರಿಯಿಸಿದ್ದಾರೆ. “ಇದೆಷ್ಟು ಸುಂದರ ಸಂಬಂಧ! ಇವರ ಸಂತತಿ ಸಾವಿರವಾಗಲಿ,” “ಸಾಮರಸ್ಯದ ಸಹಿಷ್ಣುತೆಯ ಧರ್ಮನಿರಪೇಕ್ಷತೆಯ ಈ ಭಾರತಕ್ಕೆ ಮತ್ತೆ ಮರಳೋಣ,” ಮೊದಲಾಗಿ ನೂರಾರು ಜನ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್ ಎಂದ ನೆಟ್ಟಿಗರು
ಈ ಇಬ್ಬರಂತೆ ಸೋದರರು, ಸೋದರಿಯರು ಹತ್ತಿರ ಬಂದು ಒಟ್ಟಿಗೆ ಕೆಲಸ ಮಾಡತೊಡಗಿದರೆ ಎಲ್ಲರಿಗೂ ಒಳ್ಳೆಯದಲ್ಲವೇ? ಮೇಲಿನ ಚಿತ್ರಕ್ಕೆ ಒಬ್ಬರು ಪ್ರತಿಕ್ರಿಯಿಸಿದಂತೆ, “ಚಪ್ಪಲಿ ಬ್ಯಾಗಳನ್ನು ರಿಪೇರಿ ಮಾಡಿದಂತೆ ಈ ಇಬ್ಬರು ಸೋದರರು ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ತಿದ್ದಿ ಸರಿಪಡಿಸಲಿ.”
ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ
ಅತಿಯಾದ ಮತೀಯ ಭಾವನೆಗಳ ಪ್ರದರ್ಶನದ, ನಕಾರಾತ್ಮಕತೆಯ, ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ ಸಹಬಾಳ್ವೆಯನ್ನು ಸಾರುವ ಇಂಥ ನಿದರ್ಶನಗಳು ಹೆಚ್ಚಾಗಬೇಕು. ನಿಮ್ಮ ದೃಷ್ಟಿಗೂ ಇಂಥ ಸಾಮರಸ್ಯದ ಉದಾಹರಣೆಗಳು ಬಿದ್ದಿದ್ದಲ್ಲಿ ಅವನ್ನು ಹಂಚಿಕೊಳ್ಳಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:31 pm, Wed, 7 June 23