Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್ ಎಂದ ನೆಟ್ಟಿಗರು
Art: ಪರವಾನಿಗೆ ತೆಗೆದುಕೊಳ್ಳದೇ ಆತನ ಪೋರ್ಟ್ರೇಟ್ ಮಾಡಿದ್ದು ಸರಿಯೇ ಎಂದು ಕೆಲವರು ತಕರಾರೆತ್ತಿದ್ದಾರೆ. ನಿಮ್ಮ ಮನಸಿನಂತೆ ನಿಮ್ಮ ಅಭಿಪ್ರಾಯ. ಶ್ರಮಜೀವಿಗಳ ಮುಖದಲ್ಲಿ ಹೀಗೆ ನಗುವರಳಿಸುವುದು ತಪ್ಪೇ? ವಿಡಿಯೋ ನೋಡಿ ತಿಳಿಸಿ.
Street Vendor : ಈವತ್ತು ಎಲ್ಲವೂ ಬೆರಳತುದಿಯಲ್ಲಿ ಲಭ್ಯ. ಒಬ್ಬರ ಮುಖದ ಮೇಲೆ ನಗುವನ್ನರಳಿಸುವುದು? ಅದೂ ಕೂಡ ಬೆರಳತುದಿಯಲ್ಲಿಯೇ ಸಾಧ್ಯ. ಆದರೂ ಆ ಸಾರ್ಥಕ ಭಾವ ಹೃನ್ಮನದಲ್ಲಿ ಅಚ್ಚಳಿಯದಂತೆ ದಾಖಲಾಗಿಸುವ ಶಕ್ತಿ ಇರುವುದು ಕಲೆಗೆ (Art) ಮಾತ್ರ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅಜ್ಜನೊಬ್ಬ ತನ್ನ ಪಾಡಿಗೆ ಭಜ್ಜಿ ಮಾಡುತ್ತ ಮಾರುತ್ತ ಕುಳಿತಿದ್ಧಾನೆ. ಅಲ್ಲಿಗೆ ಬಂದ ಕಲಾವಿದ ಮನೋಜ್ಕುಮಾರ್ ಅವನಿಂದ ಕಾಗದದಲ್ಲಿ ಭಜ್ಜಿ ಕಟ್ಟಿಸಿಕೊಳ್ಳುತ್ತಾರೆ. ಮುಂದೇನಾಗುತ್ತದೆ? ಕೆಳಗಿನ ವಿಡಿಯೋ ನೋಡಿ.
ಇದನ್ನೂ ಓದಿView this post on Instagram
ಇಂಥ ಹೃದಯಸ್ಪರ್ಶಿ ವಿಡಿಯೋ ನೋಡಿದ ಅನೇಕರು ಈ ಅಜ್ಜ ನಕ್ಕಾಗ ನಾಸೀರುದ್ದೀನ್ ಷಾನಂತೆ (Nasiruddin Shah) ಕಾಣುತ್ತಾನೆ ಎಂದು ಕೆಲವರು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ವಿಡಿಯೋದ ವಿಷಯದ ಕಡೆ ಗಮನ ಕೊಡದೆ ನಾಸೀರುದ್ದೀನ್ ಷಾನನ್ನು ಬೈದಾಡಿದ್ದಾರೆ. ಇನ್ನೂ ಕೆಲವರು, ವ್ಯಕ್ತಿಯ ಪರವಾನಿಗೆ ಇಲ್ಲದೆ ಹೀಗೆ ಪೋರ್ಟ್ರೇಟ್ ಮಾಡುವುದು ಸರಿಯಲ್ಲ ಎಂದು ವಾದಿಸಿದ್ದಾರೆ.
ಇದನ್ನೂ ಓದಿ : Viral: ಇಂಥ ಟ್ವೀಟ್‌ಗೂ ಕೆಲವು ಬುದ್ಧಿಗೇಡಿಗಳು ಮತೀಯ ಬಣ್ಣ ಬಳಿದಿದ್ದಾರೆ
ಆದರೆ ತಪ್ಪುಒಪ್ಪು ನಿಯಮಗಳ ಮಧ್ಯೆ ನಮ್ಮ ಮನಸ್ಸಿನಲ್ಲಿ ಉಳಿಯುವುದು ಅಜ್ಜನ ಅಂತಃಕರಣದಿಂದ ಹೊಮ್ಮಿದ ನಗು ಮತ್ತು ಐಪ್ಯಾಡಿನಲ್ಲಿ ಹಿಡಿದಿಟ್ಟ ಕಲಾವಿದನ ಸೃಷ್ಟಿ. ಅನೇಕ ನೆಟ್ಟಿಗರು, ಇದನ್ನು ದ್ವೇಷಿಸುವವರನ್ನು ನಿರ್ಲಕ್ಷಿಸಿ, ನಿಮ್ಮ ಕಲಾಸಾಮರ್ಥ್ಯವನ್ನು ಪ್ರದರ್ಶಿಸಿರುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ನೀವು ನಿಮ್ಮ ಕಲೆಯಿಂದ ಇನ್ನೊಬ್ಬರಲ್ಲಿ ಸಂತೋಷವನ್ನು ಹೊಮ್ಮಿಸುತ್ತಿದ್ದೀರಿ ಇದು ನಿಮ್ಮ ಗೆಲುವು! ಎಂದು ಕಲಾವಿದನಿಗೆ ಬೆಂಬಲ ವ್ಯಕ್ತಪಡಿಸಿದ್ಧಾರೆ.
ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ
ಅರೆ! ಈ ಕಲಾವಿದ ಯಾರು, ಈ ಅಜ್ಜನ ಹೆಸರೇನು, ಭಜ್ಜಿಯಂಗಡಿ ಯಾವ ಊರಿನಲ್ಲಿದೆ ಎಂಬ ವಿವರ ಕೊಡಬಾರದಿತ್ತೆ? ಎಂದು ಕೆಲವರು ಕೇಳಿದ್ದಾರೆ. ನನ್ನ ಅಜ್ಜ ಈಗಿಲ್ಲ. ಆದರೆ ಈ ವ್ಯಕ್ತಿ ನಗುವಾಗ ನನ್ನ ಅಜ್ಜನಂತೆಯೇ ಕಾಣುತ್ತಿದ್ದಾರೆ. ನನ್ನಜ್ಜ ಚೆನ್ನಾಗಿ ಹಾಡುತ್ತಿದ್ದರು, ನಮ್ಮನ್ನೆಲ್ಲ ನಗಿಸುತ್ತಿದ್ದರು. ಇನ್ನೇನು ನಾವೆಲ್ಲರೂ ಅವರನ್ನು ಕಳೆದುಕೊಳ್ಳುತ್ತೇವೆ ಎಂದೆನ್ನಿಸಿದಾಗ ಅವರೊಂದಿಗೇ ಮಲಗುತ್ತಿದ್ದೆ. ಆದರೂ ಅವರೊಂದಿಗೆ ಕ್ವಾಲಿಟಿ ಟೈಮ್ ಕಳೆಯಲಿಲ್ಲ ಎಂಬ ಅಸಮಾಧಾನವಿದೆ. ವರ್ಷದ ಕೆಳಗೆ ಅವರು ನಮ್ಮೆಲ್ಲರನ್ನೂ ಬಿಟ್ಟು ಹೊರಟುಹೋದರು ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಕಲ್ಲಂಗಡಿ ಆಯ್ಕೆಯಲ್ಲಿ ಎತ್ತಿದ ಕೈ ನನ್ನ ಹೆಂಡತಿ; ಹೆಮ್ಮೆಪಡುತ್ತಿರುವ ಗಂಡ!
ನೀವು ಜಗತ್ತನ್ನು ಹೇಗೆ ನೋಡುತ್ತೀರಿ ಎನ್ನುವುದರ ಮೇಲೆ ನಿಮ್ಮ ಅಭಿಪ್ರಾಯಗಳಿರುತ್ತವೆ. ಕಷ್ಟಪಟ್ಟು ದುಡಿಯುವ ವ್ಯಕ್ತಿಗಳನ್ನು, ಅವರ ಭಾವವನ್ನು ಹೀಗೆ ಬಣ್ಣಗಳಲ್ಲಿ ಹಿಡಿದಿಡುವುದರಲ್ಲಿ ತಪ್ಪೇನೂ ಇಲ್ಲ. ಅವರ ಪೋರ್ಟ್ರೇಟ್ ಅನ್ನು ಪ್ರಿಂಟ್ ಮಾಡಿ, ಲ್ಯಾಮಿನೇಟ್ ಮಾಡಿ, ಫ್ರೇಮ್ ಹಾಕಿಸಿ ಅವರಿಗೆ ಉಡುಗೊರೆಯಾಗಿ ಕೊಟ್ಟಾಗ ಅವರ ಮುಖದ ಮೇಲಿನ ಸಂತೋಷವನ್ನು ಗಮನಿಸಿ. ಈ ಸಾರ್ಥಕ ಭಾವವೇ ಕಲಾವಿದನ ಉಸಿರು.
ನಿಮ್ಮೂರಲ್ಲಿರುವ ಶ್ರಮಜೀವಿಗಳಿಗೆ ಯಾವುದಾದರೂ ರೀತಿಯಿಂದ ಹೀಗೆ ಖುಷಿಪಡಿಸುವ, ಸಮಾಧಾನಗೊಳಿಸುವ ಬಗ್ಗೆ ಆಲೋಚಿಸಿದ್ದೀರಾ? ಇಲ್ಲವಾದರೆ ಪ್ರಯತ್ನಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:50 am, Wed, 7 June 23