Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ
3D Art : ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
Street Art: ಬೀದಿ ಕಲೆ, ತ್ರೀಡಿ ಕಲೆ ಎಂದಾಗ ನಮಗೆ ಥಟ್ಟನೆ ನೆನಪಾಗುವುದು ಮೈಸೂರಿನ ಪ್ರತಿಭಾವಂತ ಕಲಾವಿದ ಬಾದಲ್ ನಂಜುಂಡಸ್ವಾಮಿ. ಮೈಸೂರು ಬೆಂಗಳೂರಿನ ಹಾಳಾದ ರಸ್ತೆಗಳಿಗೆ, ತೆರೆದ ರಸ್ತೆಗುಂಡಿಗಳಿಗೆ ಕಲಾತ್ಮಕ ಸ್ಪರ್ಶ ಕೊಟ್ಟು ಅಧಿಕಾರಿಗಳ ಗಮನ ಸೆಳೆದ ಆರ್ಟ್ ಆ್ಯಕ್ಟಿವಿಸ್ಟ್. ಈ ಕೆಳಗಿನ ವಿಡಿಯೋ ಕೂಡ ಬೀದಿಕಲೆಗೆ ಸಂಬಂಧಿಸಿದ್ದು. ಆದರೆ ವಿಡಿಯೋದ ಆರಂಭದಲ್ಲಿ ಈ ಹೆಣ್ಣುಮಗಳು ನಡೆದು ಬರುವ ರೀತಿ ಖಂಡಿತ ನಿಮಗೆ ಮುಂದಿನ ಸುಳಿವನ್ನು ಬಿಟ್ಟುಕೊಡಲಾರದು!
Street art? pic.twitter.com/xSeH1iWlGV
ಇದನ್ನೂ ಓದಿ— Tansu YEĞEN (@TansuYegen) June 3, 2023
ಹೆಣ್ಣುಮಕ್ಕಳಿಗೆ ಹೊರಿಸಿದ ಅಕಾರಣ ಭಾರಗಳನ್ನು ಇಳಿಸಿದರೆ ಅವರು ಲೀಲಾಜಾಲವಾಗಿ ತಮ್ಮಿಷ್ಟದ ಕಲೆ, ಕೌಶಲಗಳಲ್ಲಿ ಹೇಗೆ ಹರಿಯುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ತಲೆಯ ಮೇಲೆ ಸೆರಗು ಹೊದ್ದು ಬರುವ ಈಕೆ ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಬಂದು ಗೆರೆಗಳನ್ನು ಬರೆಯಲಾರಂಭಿಸುತ್ತಾರೆ. ರಂಗೋಲಿ ಹಾಕುತ್ತಾರೆಯೇ ಎಂದು ಮೊದಲಿಗೆ ಅನ್ನಿಸಿದರೂ ಅದೂ ಅಲ್ಲ. ನೋಡನೋಡುತ್ತಿದ್ದಂತೆ ರಸ್ತೆಯನ್ನು ಸೀಳಿ ಹೆಬ್ಬಾವಿನಂತೆ ಕಾಣುವ ಕಲ್ಲುಗೋಡೆ ಧುತ್ತೆಂದು ನಿಂತುಬಿಡುತ್ತದೆ.
ಇದನ್ನೂ ಓದಿ : Viral Video: ಎಚ್ಡಿಎಫ್ಸಿ ಆನ್ಲೈನ್ ಮೀಟಿಂಗ್ನಲ್ಲಿ ಉದ್ಯೋಗಿ ನಿಂದನೆ; ಅಧಿಕಾರಿ ಅಮಾನತು
ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಈಕೆಯ ನೈಪುಣ್ಯತೆಯನ್ನು ಶ್ಲಾಘಿಸುತ್ತಿದ್ದಾರೆ. ನೋಡಲು ಸಾಮಾನ್ಯ ಗೃಹಿಣಿಯಂತೆ ಕಾಣುವ ಈಕೆಯೊಳಗೆ ಇಂಥ ಅದ್ಭುತ ಕಲಾವಿದೆ ಅಡಗಿದ್ದಾಳೆ ಎನ್ನುವುದು ತಿಳಿಯುವುದೇ ಇಲ್ಲ ಎಂದು ಅಚ್ಚರಿಗೆ ಒಳಗಾಗಿದ್ದಾರೆ. ಇವರ ಕಲಾಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ
ಆದರೆ ಈಕೆ ಪಶ್ಚಿಮ ಬಂಗಾಳದ ಕಲಾ ಶಿಕ್ಷಕಿ. ತ್ರೀಡಿ ಆರ್ಟ್ (3D) ಅನ್ನು ಕರಗತ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಈಗಾಗಲೇ ಜನರ ಮನಸೂರೆಗೊಂಡಿರುವಾಕೆ. ಯೋಚನಾಶಕ್ತಿ ಮತ್ತು ಆಸಕ್ತಿ ಇದ್ದರೆ ಇದ್ದ ಅವಕಾಶದಲ್ಲಿಯೇ ಹೇಗೆ ಕಾಲು ಚಾಚಬೇಕು ಎನ್ನುವುದನ್ನು ಕರಗತ ಮಾಡಿಕೊಂಡಿರುವ ದಿಟ್ಟೆ ಇವರು.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ