ಓರಿಯನ್ ಮಾಲ್​ನಲ್ಲಿರುವ ಈ ಆನೆ ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದೆ

Baadal Nanjundaswamy : ಗ್ರಾಹಕರಲ್ಲಿ ಶಕ್ತಿ, ಆರೋಗ್ಯ, ಸಂತೋಷ ಮತ್ತು ಅದೃಷ್ಟವನ್ನು ಸಾಂಕೇತಿಸುವ ನಿಟ್ಟಿನಲ್ಲಿ ಈ ಕಲಾಕೃತಿ ಚಿತ್ರಿತಗೊಂಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಬಾದಲ್​ ನಂಜುಂಡಸ್ವಾಮಿ ಅವರು ಈ ತ್ರಿಡಿ ಆನೆಯನ್ನು ಚಿತ್ರಿಸಿದ್ದಾರೆ.

ಓರಿಯನ್ ಮಾಲ್​ನಲ್ಲಿರುವ ಈ ಆನೆ ನಿಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದೆ
ಕಲಾವಿದ ಬಾದಲ್ ನಂಜುಂಡಸ್ವಾಮಿ ತಮ್ಮ ಕಲಾಕೃತಿಗಳೊಂದಿಗೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 29, 2022 | 2:31 PM

Viral Video : ಮೈಸೂರಿನ ಯುವಕಲಾವಿದ ಬಾದಲ್​ ನಂಜುಂಡಸ್ವಾಮಿ ಬಣ್ಣಕುಂಚಗಳ ವ್ಯಾಮೋಹವಿರುವ ಪ್ರತಿಯೊಬ್ಬರಿಗೂ ಪರಿಚಿತರು. ಅದರಲ್ಲೂ ಬಿಬಿಎಂಪಿ ಅಧಿಕಾರಿಗಳಿಗಂತೂ ಕೇಳುವುದೇ ಬೇಡ! ಸುಮಾರು ಹತ್ತು ವರ್ಷಗಳಿಂದ ಸ್ಟ್ರೀಟ್​ ಆರ್ಟ್​ ಮೂಲಕ ವ್ಯವಸ್ಥೆಯ ಓರೆಕೋರೆಗಳನ್ನು ಗುರುತಿಸುತ್ತ ಬಂದಿರುವ ಇವರು ನಮ್ಮ ನಡುವಿನ ಅಪರೂಪದ, ಪ್ರತಿಭಾನ್ವಿತ ಕಲಾವಿದರು. ಬೆಂಗಳೂರು ಮತ್ತು ಮೈಸೂರಿನ ಹದಗೆಟ್ಟ ರಸ್ತೆಗಳನ್ನು, ರಸ್ತೆಗುಂಡಿಗಳನ್ನು ಕೇಂದ್ರೀಕರಿಸಿಕೊಂಡು ಕಲೆಯ ಮೂಲಕ ವ್ಯವಸ್ಥೆಯ ಚುಕ್ಕಾಣಿ ಹಿಡಿದವರ ಗಮನ ಸೆಳೆದ ಇವರ ಸೃಜನಶೀಲತೆ ಅಗಾಧ. ಬಾದಲ್​ ಒಂದು ಹಂತದಲ್ಲಿ ಎಷ್ಟು ಜನಪ್ರಿಯರಾದರೆಂದರೆ, ಯಾರೇ ಎಲ್ಲೇ ರಸ್ತೆಗುಂಡಿಗಳನ್ನು ನೋಡಿದರೂ ಮೊದಲು ಬಾದಲ್​ ಅವರಿಗೆ ತಿಳಿಸಬೇಕು ಎನ್ನುವಷ್ಟು! ಹಾಗಿದ್ದರೆ ಬಾದಲ್​ ಈಗ ಹೇಗೆ ಸುದ್ದಿಯಲ್ಲಿದ್ದಾರೆ? ಈ ವಿಡಿಯೋ ನೋಡಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Orion Malls (@orionmalls)

ಇತ್ತೀಚೆಗೆ ಬೆಂಗಳೂರಿನ ಓರಿಯನ್​ ಮಾಲ್​ನಲ್ಲಿ ಬಾದಲ್​ ಸೃಷ್ಟಿಸಿದ ತ್ರೀಡಿ ಆನೆ ಬೆಂಗಳೂರಿಗರನ್ನು ಬಹುವಾಗಿ ಸೆಳೆಯುತ್ತಿದೆ. ಗೋಡೆಯೊಡೆದುಕೊಂಡು ಇನ್ನೇನು ಆನೆ ಬಂದೇ ಬಿಡುವುದೇ ಎಂಬಂಥ ನೈಜ ಮತ್ತು ಮಾಂತ್ರಿಕತೆಯನ್ನು ಬಾದಲ್ ಇಲ್ಲಿ​ ಕಟ್ಟಿಕೊಟ್ಟಿದ್ದಾರೆ.

ಬೆಂಗಳೂರಿನ ಓರಿಯನ್ ಮಾಲ್​ನಲ್ಲಿರುವ ಈ ಆನೆಯ ಕಲಾಕೃತಿಯ ಬಳಿ ಯಾರೂ ಹೋಗಿ ಫೋಟೋ ತೆಗೆಸಿಕೊಳ್ಳಬಹುದು. ‘ಈ ಸ್ಥಳದಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಕಡಿಮೆ ಬೆಳಕಿದ್ದರೆ ಒಳ್ಳೆಯದು’ ಎಂದು ಸಲಹೆಯನ್ನೂ ನೀಡಿದ್ದಾರೆ ಬಾದಲ್​.

ರಂಗಕಲಾವಿದರು, ಕಥೆಗಾರರು, ಕಲಾನಿರ್ದೇಶಕರು ಆಗಿರುವ ಬಾದಲ್​ ಈಗಾಗಲೇ ತಮ್ಮ ಚಿತ್ರಕಲೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವಂಥವರು. ಇವರ ಅದ್ಭುತ ಕಲೆಗಾರಿಕೆಗೆ ಮತ್ತಷ್ಟು ಅಂತಾರಾಷ್ಟ್ರೀಯ ಮನ್ನಣೆ ಸಿಗಬೇಕೆಂದು ನೆಟ್ಟಿಗರು ಹಾರೈಸಿದ್ದಾರೆ. ಇವರ ಸೃಜನಶೀಲತೆಗೆ ಇವರೇ ಸಾಟಿ ಎಂದು ಶ್ಲಾಘಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬಾದಲ್​ ಅವರ ಆರ್ಟ್​ಮ್ಯಾಜಿಕ್​ ಎತ್ತ ಸಾಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿ ಬಳಗ ಕಾಯುತ್ತಿದೆ. ಓರಿಯನ್​ ಮಾಲ್​ಗೆ ಭೇಟಿ ಕೊಟ್ಟಾಗ ಮರೆಯದಿರಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:13 pm, Tue, 29 November 22

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ