Viral Video: ಗುರುವಿನ ಜೊತೆಗೆ ಕೂತು ಸಂಗೀತ ಅಭ್ಯಾಸ ಮಾಡಿದ ಸಂಗೀತಾ ಕಟ್ಟಿ, ವಿಡಿಯೊ ಮತ್ತೆ ವೈರಲ್

ಸಂಗೀತಾ ಕಟ್ಟಿ ಅವರು ತನ್ನ ಗುರುಗಳ ಮನೆಗೆ ಹೋಗಿ ಸಂಗೀತ ಕಲಿತ್ತಿರುವ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಮತ್ತೆ ವೈರಲ್ ಆಗುತ್ತಿದೆ. ಸಂಗೀತಾ ಕಟ್ಟಿ ಅವರು ತಮ್ಮ ಬಾಲ್ಯ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. 92 ವರ್ಷದ ಗುರುಗಳೊಂದಿಗೆ ಒಬ್ಬ ಸಾಮಾನ್ಯ ಶಿಷ್ಯೆಯಂತೆ ಅವರ ಪಕ್ಕದಲ್ಲೇ ಕೂತು ಸಂಗೀತ ಅಭ್ಯಾಸವನ್ನು ಮಾಡಿದ್ದಾರೆ. ಇದೀಗ ಎಲ್ಲ ಕಡೆ ಮತ್ತೆ ವೈರಲ್ ಆಗಿದೆ.

Viral Video: ಗುರುವಿನ ಜೊತೆಗೆ ಕೂತು ಸಂಗೀತ ಅಭ್ಯಾಸ ಮಾಡಿದ ಸಂಗೀತಾ ಕಟ್ಟಿ, ವಿಡಿಯೊ ಮತ್ತೆ ವೈರಲ್
angeeta Katti
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 29, 2022 | 1:34 PM

ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಜನ ಮಾನಸದಲ್ಲಿ ನೆಲೆಸಿರುವ ಸಂಗೀತಾ ಕಟ್ಟಿ ಅವರು ತನ್ನ ಗುರುಗಳ ಮನೆಗೆ ಹೋಗಿ ಸಂಗೀತ ಕಲಿತ್ತಿರುವ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಮತ್ತೆ ವೈರಲ್ ಆಗುತ್ತಿದೆ. ಸಂಗೀತಾ ಕಟ್ಟಿ ಅವರು ತಮ್ಮ ಬಾಲ್ಯ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. 92 ವರ್ಷದ ಗುರುಗಳೊಂದಿಗೆ ಒಬ್ಬ ಸಾಮಾನ್ಯ ಶಿಷ್ಯೆಯಂತೆ ಅವರ ಪಕ್ಕದಲ್ಲೇ ಕೂತು ಸಂಗೀತ ಅಭ್ಯಾಸವನ್ನು ಮಾಡಿದ್ದಾರೆ. ಇದೀಗ ಎಲ್ಲ ಕಡೆ ಮತ್ತೆ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಂಗೀತಾ ಕಟ್ಟಿ ಹಾಕಿರುವ ವಿಡಿಯೊ, ಅದೆಷ್ಟು ಜನರ ಮೆಚ್ಚುಗೆ ಕಾರಣವಾಗಿದೆ. ತನ್ನ ಜೀವನದಲ್ಲಿ ಎಷ್ಟೇ ಬೆಳೆದರೂ, ಆ ಸರಳತೆಯನ್ನು ಸಂಗೀತಾ ಕಟ್ಟಿ ಅವರು ಮರೆತಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಇದು ಅತ್ಯಂತ ಹಳೆಯ ವಿಡಿಯೊ, ಆದರೆ ಇದೀಗ ಮತ್ತೆ ವೈರಲ್ ಆಗಿದೆ.

ಈ ವಿಡಿಯೊ ಹಂಚಿಕೊಂಡ ಸಂಗೀತಾ ಕಟ್ಟಿ ತಮ್ಮ ಗುರುಗಳ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಗುರುಗಳ ಜೊತೆಗೆ ಹಾಡಿರುವ ವಿಡಿಯೊ. ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ. ಆನಂದ… ಆನಂದ ಎಂಬ ಹಾಡನ್ನು ಹಾಡುವ ಮೂಲಕ ಅನೇಕರ ಮೆಚ್ಚುಗೆ ಪಾತ್ರರಾಗಿದ್ದಾರೆ. ಮತ್ತೊಮ್ಮೆ ತನ್ನ ಗುರುಗಳ ಜೊತೆಗೆ ಕೂತು ಸಂಗೀತ ಅಭ್ಯಾಸ ಮಾಡುವ ಪುಣ್ಯ ಕ್ಷಣ ನನ್ನದಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ:ಧೋನಿ, ಪಾಂಡ್ಯ, ಇಶಾನ್ ಕಿಶನ್ ಭರ್ಜರಿ ಡ್ಯಾನ್ಸ್ ಪಾರ್ಟಿ: ಇಲ್ಲಿದೆ ವಿಡಿಯೋ

ನಾನು ನನ್ನ ಗುರುಗಳಿಂದ ಬಾಲ್ಯದಿಂದಲ್ಲೇ ಭಕ್ತಿಗೀತೆ ಕಲಿಯುತ್ತ ಬಂದಿದ್ದೇನೆ, ನನ್ನ ಗುರುಗಳು ಶ್ರೀ ಅನಂತಾಚಾರ್ ಕಟಗೇರಿ(ಕಟಗೇರಿ ದಾಸರು) ಅವರು ಪ್ರತಿದಿನ ಮನೆಗೆ ಬಂದು ಹರಿದಾಸರ ಪದಗಳು, ಭಜನೆಗಳನ್ನು ಕಲಿಸುತ್ತಿದ್ದರು. ಅವರಿಗೆ ಈಗ 92 ವರ್ಷ ಮತ್ತು ಅವರ ಧ್ವನಿಯ ಮಾಧುರ್ಯ ಮತ್ತು ಆಳವನ್ನು ನೋಡಿ.. ತುಂಬಾ ದೈವಿಕನಾದೇ. ಬೆಳಗಾವಿ ಜಿಲ್ಲೆಯ ಅವರ ಮನೆಗೆ ಹೋದಾಗ ಸ್ಮರಣೀಯ ದಿನವಾಗಿತ್ತು ಮತ್ತು ಅವರನ್ನು ಭೇಟಿಯಾಗುವುದು ನನಗೆ ನಿಜವಾದ ಆಶೀರ್ವಾದವಾಗಿದೆ. ನಾನು ಅವರನ್ನು ಭೇಟಿಯಾದಾಗಲೆಲ್ಲಾ ಅವರಿಂದ ಕಲಿಯುವುದು ನಿಜಕ್ಕೂ ವರದಾನ ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಬಳಕೆದಾರರೂ ನಿಮ್ಮ ಈ ಸರಳ ಸ್ವಭಾವವೇ ನಿಮ್ಮನ್ನು ಎತ್ತರಕ್ಕೆ ಬೆಳೆಸಿದ್ದು. ಇಳಿ ವಯಸ್ಸಿನಲ್ಲಿರುವ ಗುರುಗಳಾದ ಕಟಗೇರಿ ದಾಸರ ಮನೆಗೆ ಭೇಟಿ ಕೊಟ್ಟುˌಮತ್ತೆ ಹಳೆಯ ಗುರುಶಿಷ್ಯರ ಸಂಬಂಧವನ್ನು ಗಟ್ಟಿ ಗೊಳಿಸಿ …’ಕಲಿಸು ಗುರುವೆ ನೀ ಕಲಿಸು’ ಎಂಬಂತೆ ಗುರುಗಳ ಮನಕ್ಕೆ ಖುಷಿಕೊಟ್ಟು(ನಿಮಗೆ ಅದು ಕಷ್ಟವಲ್ಲ ಆದರೂ ಗುರುವಿಗೆ ಗೌರವ )ಪ್ರೀತಿಯಿಂದ ಹಾಡು ಕಲಿತು ನಮಗೆಲ್ಲ ಮಾದರಿಯಾದಿರಿ. ಗುರುಗಳು ಹ್ರುದಯಾರೆ ನಿಮಗೆ ಹರಸಿರುತ್ತಾರೆ. ಇನ್ನೂ ಬೆಳೆಯಿರಿ ಗುರುಗಳನ್ನು ಮರೆಯದಿರಿ ಎಂದು ಫೇಸ್ ಬುಕ್ ಬಳಕೆದಾರರೂ ಕಮೆಂಟ್ ಮಾಡಿದ್ದಾರೆ. ಈ ವಿಡಿಯೊ 350 ಸಾವಿರ ವಿಕ್ಷೇಣೆಯನ್ನು ಪಡೆದಿದೆ. 13 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Tue, 29 November 22