ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ

Work From Home : ಮಕ್ಕಳನ್ನು ಎತ್ತಿಕೊಂಡೇ ಹೀಗೆ ವರ್ಕ್​ ಫ್ರಂ ಹೋಂ ಮಾಡಿದ ದಿನಗಳು ನೆನಪಿರಬಹುದು. ಹಾಗೆಯೇ ಸಾಕುಪ್ರಾಣಿಗಳನ್ನೂ. ಎತ್ತಿಕೊಂಡು ಕೆಲಸದಲ್ಲಿ ಕಳೆದುಹೋದಿರೋ ಅಷ್ಟೇ!

ಬರೀ ವರ್ಕ್​ ಫ್ರಂ ಹೋಂ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು ಸ್ವಲ್ಪ; 3 ಮಿಲಿಯನ್​ ಜನರನ್ನು ಸೆಳೆದಿದೆ ಈ ವಿಡಿಯೋ
ಬರೀ ಕೆಲಸ ಮಾಡುತ್ತಲೇ ಇದ್ದರೆ ಹೇಗೆ? ನನ್ನನ್ನೂ ನೋಡು...
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 29, 2022 | 10:53 AM

Viral Video : ಮಕ್ಕಳೂ ಅಷ್ಟೇ ಪ್ರಾಣಿಗಳೂ ಅಷ್ಟೇ. ಅವುಗಳನ್ನು ಮುದ್ದಿಸದಿದ್ದರೆ ಹೀಗೆ ಅಟೆನ್ಷನ್ ಸೀಕಿಂಗ್​ ಶುರುಮಾಡಿಕೊಂಡುಬಿಡುತ್ತವೆ. ಈಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಈ ವ್ಯಕ್ತಿ ಮಗುವಿನ ಹಾಗೆ ಅದನ್ನು ತೊಡೆಮೇಲೆ ಕೂರಿಸಿಕೊಂಡು ಕೆಲಸ ಮಾಡುತ್ತಿದ್ದರೂ ನಾಯಿಗೆ ಸಮಾಧಾನವಿಲ್ಲ. ನೀ ನನ್ನ ಕಡೆ ಗಮನ ಕೊಡುತ್ತಿಲ್ಲ ಬರೀ ಕೆಲಸದಲ್ಲಿಯೇ ಮುಳುಗಿದ್ದೀಯಾ ಎಂದು ಮುಖ ಎತ್ತಿ ಅವನನ್ನು ನೋಡುವ ದೃಶ್ಯ ಹೇಗಿದೆ ನೋಡಿ.

3.3 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಆ ನಾಯಿಯ ಕಣ್ಣಲ್ಲಿರುವ ಪ್ರೀತಿಯ ಯಾಚನೆಯ ಆಳ ನಿಮ್ಮನ್ನು ತಟ್ಟದೇ ಇರದು. ಈ ವ್ಯಕ್ತಿ ಅದರ ಕಡೆ ಗಮನ ಕೊಡುತ್ತಿದ್ದಂತೆ ಸಂತೃಪ್ತಭಾವದಿಂದ ಅವನಿಗೆ ಮತ್ತಷ್ಟು ಒರಗುತ್ತದೆ. ಈ 13 ಸೆಕೆಂಡುಗಳ ದೃಶ್ಯ ಎಂಥವರ ಮನಸ್ಸನ್ನೂ ಕರಗುವಂತೆ ಮಾಡುತ್ತದೆ. ಅನೇಕರು ಈ ವಿಡಿಯೋ ಪ್ರತಿಕ್ರಿಯಿಸಿದ್ದಾರೆ.

ನಾಯಿ ಜೊತೆಗಿಲ್ಲದಿದ್ದರೆ ನನಗೆ ಪ್ರಪಂಚವೇ ನನ್ನ ಜೊತೆಗಿಲ್ಲ ಎಂದೆನ್ನಿಸುತ್ತದೆ ಎಂದಿದ್ದಾರೆ ಒಬ್ಬರು. ನಾಯಿ ಮಾತ್ರ ನಿಮ್ಮನ್ನು ಸಂಪೂರ್ಣವಾಗಿ ಪ್ರೀತಿಸಲು ಸಾಧ್ಯ, ಅಷ್ಟೇ ವಿಶ್ವಾಸಮಯಿ ಜೀವ ಅದು ಎಂದಿದ್ದಾರೆ ಇನ್ನೂ ಒಬ್ಬರು. ಅನೇಕರು ತಮ್ಮ ತಮ್ಮ ನಾಯಿಗಳ ವಿಡಿಯೋಗಳನ್ನು ಈ ಥ್ರೆಡ್​ಗೆ ಟ್ವೀಟ್ ಮಾಡಿದ್ದಾರೆ. ನಾಯಿಪ್ರಿಯರೆಲ್ಲರೂ ಒಂದೆಡೆ ಸೇರಿದರೆ ಆ ಲೋಕ ಬಹಳ ಮುದದಿಂದ ಕೂಡಿರುವಲ್ಲಿ ಸಂಶಯವೇ ಇಲ್ಲ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:52 am, Tue, 29 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ