AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಗಳ ಹಿರಿಯಣ್ಣ; ಗಿನ್ನೀಸ್​ ರೆಕಾರ್ಡ್​ಗೆ ಸೇರಿದ 22 ವರ್ಷದ ‘ಗಿನೋ ವೂಲ್ಫ್​’

Guinness World Record : ಗಿನೋ ವೂಲ್ಫ್​ಗೆ 22 ವರ್ಷ. ಇದೀಗ ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ ಗೌರವ ಪಡೆದಿದ್ಧಾನೆ. ನಿಯಮಿತ ವೈದ್ಯಕೀಯ ತಪಾಸಣೆ, ಸಮತೋಲಿತ ಆಹಾರ ಮತ್ತು ಕುಟುಂಬ, ನೆರೆಹೊರೆಯವರ ಪ್ರೀತಿಯೇ ದೀರ್ಘಾಯುಷ್ಯದ ಗುಟ್ಟು.

ನಾಯಿಗಳ ಹಿರಿಯಣ್ಣ; ಗಿನ್ನೀಸ್​ ರೆಕಾರ್ಡ್​ಗೆ ಸೇರಿದ 22 ವರ್ಷದ ‘ಗಿನೋ ವೂಲ್ಫ್​’
ವಿಶ್ವದ ಅತೀ ಹಿರಿಯ ನಾಯಿ ಗಿನೋ ವೂಲ್ಫ್​
TV9 Web
| Edited By: |

Updated on:Nov 24, 2022 | 1:07 PM

Share

Viral Post : ವಿಶ್ವದ ಅತ್ಯಂತ ಹಿರಿಯ ನಾಯಿ ಎಂಬ ಹೆಗ್ಗಳಿಕೆಗೆ 22 ವರ್ಷದ ಗಿನೋ ವುಲ್ಫ್ ಪಾತ್ರವಾಗಿದೆ. ಈ ಮೂಲಕ ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ನ ಪಟ್ಟಿಗೆ ಈ ಹಿರಿಯ ವಯಸ್ಸಿನ ನಾಯಿಯ ಹೆಸರು ಸೇರ್ಪಡೆಯಾಗಿದೆ. 22 ವಸಂತಗಳನ್ನು ಪೂರೈಸಿರುವ ಈ ನಾಯಿ ಹುಟ್ಟಿದ್ದು ಸೆಪ್ಟೆಂಬರ್​ 2000ರಲ್ಲಿ. ಅಲೆಕ್ಸ್ ವೂಲ್ಫ್​​ ಎಂಬುವವರು ಈ ನಾಯಿಯನ್ನು ಕೊಲೊರ್ಯಾಡೋದ ಹ್ಯೂಮನ್​ ಸೊಸೈಟಿ ಆಫ್​ ಬೌಲ್ಡರ್​ ವ್ಯಾಲಿಯಿಂದ ದತ್ತು ತೆಗೆದುಕೊಂಡು ಮಗುವಿನಂತೆ ಸಾಕುತ್ತ ಬಂದರು. ಇದೀಗ ಜಿನೋಗೆ 22ರ ಹರೆಯ!

ಗಿನೋನ ಪೋಷಕ ಅಲೆಕ್ಸ್​ ವೂಲ್ಫ್​, ‘ಎರಡು ವರ್ಷದವನಿದ್ದಾಗ ಇವನನ್ನು ದತ್ತು ತೆಗೆದುಕೊಂಡೆ. ಅಂದಿನಿಂದ ಇಂದಿನವರೆಗೂ ಇವನನ್ನು ಬಹಳ ಕಾಳಜಿ ಮತ್ತು  ಪ್ರೀತಿಯಿಂದ ನೋಡಿಕೊಂಡಿದ್ದೇನೆ. ಇವನ ದೇಹ ಮತ್ತು ವಯಸ್ಸನ್ನು ನೋಡಿದಾಗ ಅಚ್ಚರಿಯಾಗುತ್ತದೆ, ಇವನಿಗೆ 22 ವರ್ಷ? ಎಂದು. ಇದೀಗ ಗಿನ್ನೀಸ್​ ವರ್ಲ್ಡ್​ ರೆಕಾರ್ಡ್​ಗೆ ಇವನ ಹೆಸರು ಸೇರಿರುವುದು ಬಹಳ ಸಂತೋಷವೆನ್ನಿಸುತ್ತಿದೆ. ಇವನು ಬಹಳ ಒಳ್ಳೆಯವನು’ ಎನ್ನುತ್ತಾರೆ.

ಇದನ್ನೂ ಓದಿ : ವಿಶ್ವ ಗಿನ್ನೀಸ್ ದಾಖಲೆ; ಜಗತ್ತಿನಲ್ಲೇ ಅತೀ ದೊಡ್ಡ ಪಾದಗಳನ್ನು ಹೊಂದಿರುವ ಮಹಿಳೆ

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಮಾತು ಮುಂದುವರೆಸಿದ ಅಲೆಕ್ಸ್​, ‘ಇವನು ಚಿಕ್ಕವನಿದ್ದಾಗ ಮ್ಯಾನ್​ಹಟನ್​ ಬೀಚಿನ ಬಳಿ ಇದ್ದ​ ನಮ್ಮ ಮನೆಯಲ್ಲಿ ಇನ್ನೂ ಒಂದಿಷ್ಟು ನಾಯಿಗಳಿದ್ದವು. ಅವುಗಳೊಂದಿಗೆ ಹಿತ್ತಲಿನೊಳಗೆ ಓಡಾಡಿ ನನ್ನ ಅಪ್ಪ ಅಮ್ಮನನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ಸಮುದ್ರ ತೀರದಲ್ಲಿ ಭರದಿಂದ ಓಡುತ್ತಿದ್ದ. ಗಾಲ್ಫ್​ನ ಅಂಗಳದಲ್ಲಿಯೂ ಮುದದಿಂದ ಆಟವಾಡಿಕೊಂಡಿರುತ್ತಿದ್ದ.’ ಎನ್ನುತ್ತಾರೆ.

ಸದ್ಯದ ದಿನಗಳಲ್ಲಿ ಜಗಿನೋ ಬೆಚ್ಚಗೆ ಮಲಗಲು ಇಷ್ಟಪಡುತ್ತಾನೆ. ಸಾಲ್ಮನ್​ ಫಿಷ್​ ಎಂದರೆ ತುಂಬಾ ಇಷ್ಟ. ಆದರೆ ವಯಸ್ಸಿನ ಕಾರಣದಿಂದಾಗಿ ದೃಷ್ಟಿ ಕಳೆದುಕೊಂಡಿದ್ದಾನೆ. ಆದರು ಅಕ್ಕಪಕ್ಕದವರೊಂದಿಗೆ ಪ್ರೀತಿಯಿಂದ ಇರುತ್ತಾನೆ. ನಿಯಮಿತವಾಗಿ ವೈದ್ಯತಪಾಸಣೆ, ಆಹಾರ ಮತ್ತು ಕುಟುಂಬದವರ ಪ್ರೀತಿಯೇ ಅವನ ದೀರ್ಘಾಯುಷ್ಯದ ಗುಟ್ಟು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:42 pm, Thu, 24 November 22

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್