ಸುರಿಯುತ್ತಿರುವ ಈ ಮಳೆ, ಬೀದಿನಾಯಿಗಳಿಗೆ ಆಶ್ರಯ ನೀಡಿದ ಮಹಿಳೆ, ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋ

Shelter to Street Dogs : ಧೋ ಎಂದು ಸುರಿಯುತ್ತಿರುವ ಮಳೆಯಲ್ಲಿ ನಿಮ್ಮಲ್ಲಿ ಅದೆಷ್ಟೋ ಜನ ಹೀಗೆ ಬೀದಿನಾಯಿಗಳಿಗೆ ಆಶ್ರಯ ಕೊಡುತ್ತಿರಬಹುದು. ಆದರೆ ಈ ಮಹಿಳೆಯ ನಡೆ ನೋಡಿ...

ಸುರಿಯುತ್ತಿರುವ ಈ ಮಳೆ, ಬೀದಿನಾಯಿಗಳಿಗೆ ಆಶ್ರಯ ನೀಡಿದ ಮಹಿಳೆ, ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋ
Street dogs got shelter from a woman
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Nov 24, 2022 | 2:55 PM

Viral Video : ಮಳೆಬಂದರೆ ಬೀದಿಬದಿಯ ಜನಜೀವನ ಪೂರ್ತಿ ಅಸ್ತವ್ಯಸ್ತವಾಗಿಬಿಡುತ್ತದೆ. ಅದರಲ್ಲಿಯೂ ಪ್ರಾಣಿಗಳ ಅವಸ್ಥೆ ಅಂತೂ ಕೇಳುವುದೇ ಬೇಡ. ಅದೆಷ್ಟು ಜನ ಅವುಗಳ ಬಗ್ಗೆ ಕಾಳಜಿ ವಹಿಸುತ್ತಾರೆ? ಎಲ್ಲೋ ಅಪರೂಪಕ್ಕೆ ಬೆರಳೆಣಿಕೆಯಷ್ಟು ಜನ ಮಾತ್ರ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಮಹಿಳೆ ಬೀದಿನಾಯಿಗಳಿಗೆಲ್ಲ ತಮ್ಮ ಮನೆಯಲ್ಲಿ ಆಶ್ರಯ ಕೊಟ್ಟಿದ್ದಾರೆ. ನೆಟ್ಟಿಗರು ಈ ಮಹಿಳೆಯ ಹೃದಯ ಶ್ರೀಮಂತಿಕೆಗೆ ಸಲಾಮ್​ ಎನ್ನುತ್ತಿದ್ದಾರೆ.

ಈ ಬೀದಿನಾಯಿಗಳಿಗೊಂದೊಂದು ಹೆಸರಿಟ್ಟು ಮುದ್ದಿನಿಂದ ಕೂಗುವ ಈ ಮಹಿಳೆಯ ಪರಿ ಅನನ್ಯ. ಹೊರಗೆ ಗುಡುಗು, ಸುರಿಯುತ್ತಿರುವ ಮಳೆ, ಚಳಿಗೆ ಆತಂಕದಲ್ಲಿಯೇ ನಾಯಿಗಳು ಕುಳಿತಂತಿವೆ. ಎಷ್ಟೇ ಆದರೂ ಬೀದಿನಾಯಿ. ಮಳೆ ನಿಂತ ಮೇಲೆ ಮತ್ತೆ ಬೀದಿಗೇ ಎನ್ನುವ ಬೇಸರ ಅವುಗಳಿಗಿದೆಯೋ ಏನೋ, ಮನಃಸ್ಫೂರ್ತಿ ಅವುಗಳ ಮುಖದ ಮೇಲೆ ಕಾಣದು.

ಬೀದಿನಾಯಿಗಳು ಹೀಗೆ ಮನೆಯೊಳಗೆ ಬಂದು ಆಶ್ರಯ ಪಡೆಯಲೆಂದೇ ತನ್ನ ಮನೆಯ ಗೇಟ್​ ಅನ್ನು ತೆರೆದಿಟ್ಟಿದ್ದಾಳೆ ಈಕೆ. ಮನೆಯ ವರಾಂಡಾದೊಳಗೆ ಏನಿಲ್ಲವೆಂದರೂ ಏಳೆಂಟು ನಾಯಿಗಳು ಮಲಗಿವೆ. ಹಾಗೆಯೇ ತಾಯಿನಾಯಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಬೆಚ್ಚಗೆ ಕುಳಿತಿದೆ.

ಮಳೆಗಾಲ ಅಥವಾ ಕಡುಬೇಸಿಗೆಯ ಸಂದರ್ಭದಲ್ಲಿ ಹೀಗೆ ಪ್ರಾಣಿಗಳಿಗೆ ಆಶ್ರಯ ಕೊಡುವ ಆಲೋಚನೆ ಇದನ್ನು ಓದುತ್ತಿರುವ ಅನೇಕರಿಗೆ ಬಂದರೆ ಸಾಕು.

ಏನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada