‘ನಮ್‌ ಸ್ಕೂಲಂಥ ಸ್ಕೂಲಿಲ್ಲ ನಮ್‌ ಮಿಸ್ಸಂಥ ಮಿಸ್ಸಿಲ್ಲ’ ಯಾಕೆ ಅಂತ ನೋಡಿ ಈ ವಿಡಿಯೋ

Bihar : ನೀವು ಹೇಗೆ ಪಾಠ ಮಾಡುತ್ತಿದ್ದೀರಿ ಎನ್ನುವುದು ಮಕ್ಕಳ ಮುಖದ ಮೇಲೆ ಪ್ರತಿಫಲಿಸುವಂತಿರಬೇಕು, ಈ ಮಕ್ಕಳ ಮುಖದಲ್ಲಿ ಅರಳಿರುವ ಮಂದಹಾಸದಂತೆ. ಎಷ್ಟು ಲವಲವಿಕೆಯಿಂದ ಕಲಿಸುತ್ತಿದ್ದಾರೆ ನೋಡಿ ಬಿಹಾರದ ಖುಷ್ಬೂ ಟೀಚರ್​.

‘ನಮ್‌ ಸ್ಕೂಲಂಥ ಸ್ಕೂಲಿಲ್ಲ ನಮ್‌ ಮಿಸ್ಸಂಥ ಮಿಸ್ಸಿಲ್ಲ’ ಯಾಕೆ ಅಂತ ನೋಡಿ ಈ ವಿಡಿಯೋ
ಬಿಹಾರದ ಶಿಕ್ಷಕಿ ಖುಷ್ಬೂ ಕುಮಾರಿ ಮಕ್ಕಳೊಂದಿಗೆ
TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Nov 24, 2022 | 4:54 PM

Viral Video : ಶಿಕ್ಷಕ ವೃತ್ತಿ ಎಲ್ಲಕ್ಕಿಂತಲೂ ಮಿಗಿಲಾದುದು. ಮಕ್ಕಳ ಎಳೆಯ ಮನಸ್ಸುಗಳಿಗೆ ಸ್ಪಂದಿಸುತ್ತ ಅವುಗಳಿಗೆ ಆಕಾರ ಕೊಡುವ ಕೆಲಸವಿದೆಯಲ್ಲ ಅದು ಬಹಳ ಪ್ರೀತಿ, ಶ್ರದ್ಧೆ ಮತ್ತು ಕಾಳಜಿಯಿಂದ ಕೂಡಿರುವಂಥದ್ದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಬಿಹಾರದ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹಾಡು ನೃತ್ಯದ ಮೂಲಕ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಐಎಎಸ್​ ಅಧಿಕಾರಿ ದೀಪಕ್ ಕುಮಾರ್ ಸಿಂಗ್​ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಇನ್ನಿಲ್ಲದಂತೆ ಈ ದೃಶ್ಯವನ್ನು ಆನಂದಿಸುತ್ತಿದ್ದಾರೆ.

ಈ ಶಿಕ್ಷಕಿ ಬಿಹಾರದ ಬಂಕಾ ಮೂಲದವರು. ಖುಷ್ಬೂ ಕುಮಾರಿ ಈಕೆಯ ಹೆಸರು. ಪಾಠ ಎನ್ನುವುದು ನಾಲ್ಕು ಗೋಡೆಗಳ ಮಧ್ಯೆ ಅಲ್ಲ, ಅದರಾಚೆ ಎನ್ನುವುದನ್ನು ಈಕೆ ಅಕ್ಷರಶಃ ಪಾಲಿಸುತ್ತಿದ್ಧಾರೆ. ಆಟದ ಮೈದಾನ, ಗಿಡಗಂಟಿಗಳ ಮಧ್ಯೆಯೆಲ್ಲ ಓಡಾಡಿ ಮಕ್ಕಳೊಂದಿಗೆ ಮಗುವಾಗಿ ಈ ಶಿಕ್ಷಕಿ ಪಾಠ ಹೇಳಿ ಕೊಡುತ್ತಿದ್ದಾರೆ. ಇಂಥ ಆಹ್ಲಾದಕರ ಘಳಿಗೆಗಳು ಮಕ್ಕಳನ್ನು ಮತ್ತಷ್ಟು ಉತ್ತೇಜಿಸುತ್ತವೆ. ಶಾಶ್ವತವಾಗಿ ಪಾಠವೂ ಆಟವೂ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ.

22,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ನೆಟ್ಟಿಗರಂತೂ ಈ ಕ್ರಮವನ್ನು ಬಹಳ ಶ್ಲಾಘಿಸುತ್ತಿದ್ಧಾರೆ. ಎಲ್ಲ ಮಕ್ಕಳಿಗೂ ಇಂಥ ಶಿಕ್ಷಕರೇ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಹೊಸದಾಗಿ ಕೆಲಸಕ್ಕೆ ಸೇರಿದ ಇಂಥ ಕೆಲವೇ ಕೆಲ ಶಿಕ್ಷಕ-ಶಿಕ್ಷಕಿಯರು ಹೀಗೆ ಉತ್ಸಾಹವನ್ನು ಹೊಂದಿದ್ದಾರೆ. ಉಳಿದವರೂ ಇಂಥ ಉತ್ಸಾಹವನ್ನು ಪಡೆದುಕೊಳ್ಳಲಿ ಎಂದು ಒಬ್ಬರು ಹೇಳಿದ್ದಾರೆ. ಅನೇಕರು ಈ ವಿಡಿಯೋ ಕೊಂಡಾಡಿದ್ದಾರೆ.

ಮಕ್ಕಳ ಶಿಕ್ಷಣ, ಆರೋಗ್ಯ, ಸಂತೋಷದ ಹಿಂದೆ ದೇಶದ ಉನ್ನತಿ ಇದೆ. ಹಾಗಾಗಿ ಶಿಕ್ಷಕರು ಮನಸ್ಸಿಟ್ಟು ಮಕ್ಕಳನ್ನು ಪೋಷಿಸಬೇಕು. ಅಲ್ಲವೆ?

ಇದನ್ನೂ ಓದಿ

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada