ಇದು ನಿಜವಾದ ಪ್ರೀತಿ ಎನ್ನುತ್ತಿದ್ದಾರೆ ನೆಟ್ಟಿಗರು, ನೋಡಿ ವೈರಲ್​ ವಿಡಿಯೋ

Love and Care : ಇದು ಕರ್ನಾಟಕದ ಯಾವುದೋ ಬಸ್​ಸ್ಟ್ಯಾಂಡಿನಲ್ಲಿ ಸೆರೆಹಿಡಿಯಲಾದ ದೃಶ್ಯ. ಅನಾರೋಗ್ಯಕ್ಕೆ ತುತ್ತಾದ ಆಕೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡ ಈ ವ್ಯಕ್ತಿಯ ಮುಖ ನೋಡಿದರೆ ಸಾಕು ಪ್ರೀತಿಯ ಆಳ ಅರ್ಥವಾಗುತ್ತದೆ.

ಇದು ನಿಜವಾದ ಪ್ರೀತಿ ಎನ್ನುತ್ತಿದ್ದಾರೆ ನೆಟ್ಟಿಗರು, ನೋಡಿ ವೈರಲ್​ ವಿಡಿಯೋ
ಮಹಿಳೆಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡ ಪುರುಷ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 24, 2022 | 3:42 PM

Viral Video : ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ತನ್ನ ತೊಡೆಯ ಮೇಲೆ ಈ ಮಹಿಳೆಯನ್ನು ಈ ವ್ಯಕ್ತಿ ಮಲಗಿಸಿಕೊಂಡಿದ್ದಾರೆ. ಬಹುಶಃ ಆರೋಗ್ಯ ಸಮಸ್ಯೆ ಇದ್ದಿರಬಹುದು, ಆಕೆಯ ತಲೆಯನ್ನು ತಟ್ಟುತ್ತಿರುವ ಈ ವ್ಯಕ್ತಿಯ ಮುಖದಲ್ಲಿ ಕಾಳಜಿ ಸ್ಫುರಿಸುತ್ತಿದೆ ಜೊತೆಗೆ ನೋವೂ ಮಡುಗಟ್ಟಿದಂತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಇದು ನಿಜವಾದ ಪ್ರೀತಿ ಎಂದು ಭಾವುಕರಾಗುತ್ತಿದ್ದಾರೆ. ಇದು ಕರ್ನಾಟಕದ ಯಾವುದೋ ಬಸ್​ಸ್ಟ್ಯಾಂಡಿನಲ್ಲಿ ಸೆರೆಹಿಡಿದ ವಿಡಿಯೋ.

ಜಿಂದಗೀ ಗುಲ್ಝಾರ್ ಹೈ ಎಂಬ ಅಕೌಂಟ್​ನಿಂದ ಈ ವಿಡಿಯೋ ಟ್ವೀಟ್ ಆಗಿದೆ. ಅತ್ಯಂತ ಪ್ರೀತಿಯಿಂದ ಈತ ಈಕೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದಾರೆ. ಹೊರಗಿನ ಗದ್ದಲ, ಬೆಳಕು ಆಕೆಗೆ ತೊಂದರೆ ಉಂಟುಮಾಡದಂತೆ ಆಕೆಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಈ ವಿಡಿಯೋ ಅನ್ನು 58,000ಕ್ಕಿಂತಲೂ ಹೆಚ್ಚು ಜನ ನೋಡಿದ್ಧಾರೆ. 4,700 ಜನರು ಇಷ್ಟಪಟ್ಟಿದ್ದಾರೆ. ದಾಂಪತ್ಯವೆಂದರೆ ಇದು ಎಂದು ಅನೇಕರು ಹೇಳಿದ್ದಾರೆ. ಶ್ರದ್ಧಾ ಪ್ರಕರಣದ ನಂತರ ಈ ದೃಶ್ಯ ನ್ಯೂಸ್​ ಚಾನೆಲ್​ನವರಿಗೆ ಕಾಣುತ್ತಿಲ್ಲವೆ? ಎಂದಿದ್ದಾರೆ ಇನ್ನೂ ಒಬ್ಬರು. ಇದು ಕರ್ನಾಟಕದ ಬಸ್​ ನಿಲ್ದಾಣದಲ್ಲಿ ಸೆರೆಹಿಡಿದ ದೃಶ್ಯ ಎಂದಿದ್ದಾರೆ ಯಾರೋ ಒಬ್ಬರು. ಇದು ಶತಮಾನದ ವಿಡಿಯೋ ಎಂದಿದ್ದಾರೆ ಮಗದೊಬ್ಬರು. ಸಂಬಂಧವೆಂದರೆ ಇದೇ ಎಂದಿದ್ದಾರೆ ಮತ್ತೂ ಒಬ್ಬರು. ಪ್ರೀತಿಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳದಂತೆ ಮಾಡುತ್ತಿದೆ ಈ ವಿಡಿಯೋ ಎಂದಿದ್ದಾರೆ.

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:42 pm, Thu, 24 November 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್