AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್

Elephant : ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್​ ಶುರು ಮಾಡಬೇಕು. ಇಂತಿಂಥ ಪ್ರಾಣಿಗಳೆಲ್ಲ ಇದರ ಬ್ಯಾಂಡ್ ಸೇರಬೇಕು. ಪ್ರದರ್ಶನಕ್ಕೆ ನಾನಂತೂ ಹಣ ಕೊಟ್ಟೇ ಹೋಗುತ್ತೇನೆ ಎನ್ನುತ್ತಿದ್ದಾರೆ ನೆಟ್ಟಿಗರು. ನೀವೇನಂತೀರಿ?

ಡ್ರಮ್ಮರ್ ಆನೆ; ಸೊಂಡಿಲಿನಿಂದ ಡ್ರಮ್ ನುಡಿಸುತ್ತಿರುವ ಆನೆಯ ವಿಡಿಯೋ ವೈರಲ್
ಸೊಂಡಿಲಿನಿಂದ ಡ್ರಮ್​ ನುಡಿಸುತ್ತಿರುವ ಆನೆ
TV9 Web
| Edited By: ಶ್ರೀದೇವಿ ಕಳಸದ|

Updated on:Nov 24, 2022 | 1:27 PM

Share

Viral Video : ಆಗಾಗ ಆನೆಗಳ ವೈರಲ್ ವಿಡಿಯೋ ನೋಡುತ್ತಿರುತ್ತೀರಿ. ಅಷ್ಟೇ ಬಲಶಾಲಿ ಅಷ್ಟೇ ಚುರುಕಾಗಿರುವ ಆನೆ ಬುದ್ಧಿವಂತಿಕೆಗೂ ಹೆಸರಾದ ಪ್ರಾಣಿ. ಮನುಷ್ಯನನ್ನು ಅನುಕರಿಸುವಲ್ಲಿ ಇವುಗಳು ಎತ್ತಿದ ಕೈ. ಆನೆಗಳು ಪೇಂಟ್ ಮಾಡುವ ವಿಡಿಯೋ ನೋಡಿದ್ದೀರಿ. ಚೆಂಡಾಟವಾಡುವ ವಿಡಿಯೋ ನೋಡಿದ್ದೀರಿ, ಮೊಬೈಲ್​ನಲ್ಲಿ ಇಣುಕುವ ಆನೆಯ ವಿಡಿಯೋ ನೋಡಿದ್ದೀರಿ.  ಈಗ ವೈರಲ್ ಆದ ಈ ವಿಡಿಯೋ ನೋಡಿ, ಡ್ರಮ್ ಕಲಾವಿದರನೊಬ್ಬ ತನ್ನ ಪಾಡಿಗೆ ತಾನು ನುಡಿಸುತ್ತ ಕುಳಿತಿದ್ದಾನೆ. ಅಲ್ಲಿಗೆ ಬಂದ ಆನೆ ತಾನೂ ನುಡಿಸುವಲ್ಲಿ ಆಸಕ್ತಿ ತೋರಿ ತನ್ನ ಸೊಂಡಿಯನ್ನು ಬೇಲಿಯೊಳಗಿಂದ ಚಾಚಿದೆ.

ಎರಿಕ್ ಸ್ಕಿಫರ್ ಎಂಬುವವರು ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದಾರೆ. ಸೊಂಡಿಲಿನಿಂದ ನುಡಿಸಲು ಪ್ರಯತ್ನಿಸುತ್ತದೆ, ಅದೂ ಲಯಬದ್ಧವಾಗಿ. ನಂತರ ಅದಕ್ಕೆ ಸ್ಟಿಕ್ ಬೇಕೆನ್ನಿಸುತ್ತದೆ ಎನ್ನಿಸುತ್ತದೆ. ಸ್ಟಿಕ್​ಗಾಗಿ ಸೊಂಡಿಲು ಚಾಚಿದ್ದನ್ನು ಗಮನಿಸಬಹುದು. ಸುಮಾರು 50,000 ಜನರಿಂದ ಈ ವಿಡಿಯೋ ಆಕರ್ಷಿಸಲ್ಪಟ್ಟಿದೆ.

ಈ ಆನೆಯು ಕಾಡಿನಲ್ಲಿ ತನ್ನದೇ ಆದ ಬ್ಯಾಂಡ್​ ಶುರು ಮಾಡಬೇಕು ಎಂದು ಅನೇಕರು ಅಭಿಪ್ರಾಯಿಸಿದ್ದಾರೆ. ಇನ್ನೂ ಅನೇಕರು ಆನೆಯ ಬ್ಯಾಂಡ್​ಗೆ ಯಾವ್ಯಾವ ಪ್ರಾಣಿಗಳ ಹೆಸರನ್ನು ಸೇರಿಸಬೇಕು ಎಂದು ಪಟ್ಟಿ ಮಾಡಿದ್ದಾರೆ. ಆನೆಯ ಬ್ಯಾಂಡ್​ ಪ್ರದರ್ಶನ ನೀಡಿದರೆ ನಾನಂತೂ ಖಂಡಿತ ಹಣ ಕೊಟ್ಟು ನೋಡುತ್ತೇನೆ ಎಂದ್ದಾರೆ ಇನ್ನೂ ಒಬ್ಬರು. ನಂತರ ಯಾರಾದರೂ ಈ ಕಲಾವಿದ ಆನೆ ಬಗ್ಗೆ ಡಾಕ್ಯುಮೆಂಟರಿ ಮಾಡಿದರೆ ನಾನು ನೆಟ್​ಫ್ಲಿಕ್ಸ್​ನಲ್ಲಿ ನೋಡಲು ಇಚ್ಛಿಸುತ್ತೇನೆ ಎಂದಿದ್ಧಾರೆ ಮಗದೊಬ್ಬರು. ಇಡೀ ಕಾಡಿನಲ್ಲಿಯೇ ಇದು ಮುದ್ದಾದ ಕೂಸು ಎಂದಿದ್ದಾರೆ ಇನ್ನೂ ಒಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:25 pm, Thu, 24 November 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್