‘ಮಹುವಾ’ದ ಅಮಲಿನಿಂದ ಒಡಿಶಾದ ಅರಣ್ಯದೊಳಗೆ ನಿದ್ದೆಹೋದ 24 ಆನೆಗಳು

Odisha : ಗ್ರಾಮಸ್ಥರು ‘ಮಹುವಾ’ ಎಂಬ ಮದ್ಯದ ತಯಾರಿ ನಡೆಸಿದಾಗ ಈ ಅವಘಡ ಸಂಭವಿಸಿದೆ. ಬಾಯಾರಿ ಬಂದ ಒಟ್ಟು 24 ಆನೆಗಳಿಗೆ ಹೊಂಡದ ನೀರು ರುಚಿ ಹತ್ತಿದೆ. ಮುಂದೆ ನಡೆಯಲಾಗದೆ ಮಾರನೇ ದಿನದ ತನಕ ಅಮಲೇರಿ ಮಲಗಿಬಿಟ್ಟಿವೆ.

‘ಮಹುವಾ’ದ ಅಮಲಿನಿಂದ ಒಡಿಶಾದ ಅರಣ್ಯದೊಳಗೆ ನಿದ್ದೆಹೋದ 24 ಆನೆಗಳು
Herd Of 24 Elephants Drink Country Liquor ‘Mahua’, Doze Off For Hours Inside Odisha Forest
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 10, 2022 | 5:17 PM

Viral : ಒಡಿಶಾದ ಕಿಯೋಂಜಾರ್​ ಜಿಲ್ಲೆಯ ಕಾಡಿನಲ್ಲಿ ಹಳ್ಳಿಗರ ಗುಂಪೊಂದು ಮದ್ಯವನ್ನು ತಯಾರಿಸಲು ದೊಡ್ಡ ಹೊಂಡವೊಂದರಲ್ಲಿ ಹುಗಿದ ಮಡಕೆಗಳೊಳಗೆ ನೀರಿನೊಂದಿಗೆ ಮಹುವಾ ಹೂಗಳನ್ನು ಹಾಕಿ ಹುದುಗು ಬರಲು ಬಿಟ್ಟಿತ್ತು. ಆದರೆ ಬಾಯಾರಿಕೆ ತಣಿಸಿಕೊಳ್ಳಲು ಅಲ್ಲಿಗೆ ಬಂದ ಆನೆಗಳ ಹಿಂಡು ಆ ಮಡಕೆಯೊಳಗಿನ ನೀರನ್ನು ಕುಡಿದು ನಶೆ ಏರಿ ಕಾಡಿನಲ್ಲಿ ಎಷ್ಟೋ ಗಂಟೆಗಳ ಕಾಲ ಗಾಢ ನಿದ್ದೆಗೆ ಜಾರಿದ್ದವು. ಒಟ್ಟು ಒಂಭತ್ತು ಗಂಡು, ಆರು ಹೆಣ್ಣು ಮತ್ತು ಒಂಭತ್ತು ಮರಿಗಳು ಹಿಂಡಿನಲ್ಲಿದ್ದವು.

ಗೋಡಂಬಿ ಕಾಡಿನ ಬಳಿ ವಾಸಿಸುವ ಗ್ರಾಮಸ್ಥರು ‘ಮಹುವಾ’ ಎಂಬ ಮದ್ಯದ ತಯಾರಿ ನಡೆಸಿದಾಗ ಈ ಅವಘಡ ಸಂಭವಿಸಿದೆ. ಬಾಯಾರಿ ಬಂದ ಒಟ್ಟು 24 ಆನೆಗಳಿಗೆ ಹೊಂಡದ ನೀರು ರುಚಿ ಹತ್ತಿದೆ. ಕುಡಿದು ಕುಡಿದು ಹಾಗೇ ಅಮಲಿಗೆ ಬಿದ್ದಿವೆ. ನಡೆಯಲಾರದೆ ಕಾಡಿನೊಳಗೇ ಮಲಗಿಕೊಂಡುಬಿಟ್ಟಿವೆ.

‘ನಾವು ಮಹುವಾ ತಯಾರಿಸಲು ಬೆಳಿಗ್ಗೆ 6 ಗಂಟೆಗೆ ಕಾಡಿನೊಳಗೆ ಹೋದೆವು. ನೋಡಿದರೆ ಮಹುವಾ ಹೂವುಗಳನ್ನು ನೀರಿನಲ್ಲಿ ಹಾಕಿ ಹುದುಗು ಬರಲು ಇಟ್ಟಂಥ ಮಡಿಕೆಗಳೆಲ್ಲಾ ಧ್ವಂಸವಾಗಿದ್ದವು. ಅದರೊಳಗಿನ ನೀರೆಲ್ಲಾ ಖಾಲಿಯಾಗಿತ್ತು. ಪಕ್ಕದಲ್ಲಿಯೇ ಆನೆಗಳು ಮಲಗಿದ್ದವು. ಈ ನೀರನ್ನು ಕುಡಿದೇ ಈ ಆನೆಗಳು ಮತ್ತು ಬಂದು ಮಲಗಿವೆ ಎನ್ನುವುದು ತಿಳಿಯಿತು. ಆ ಮದ್ಯವನ್ನು ಇನ್ನೂ ಸಂಸ್ಕರಿಸಿರಲಿಲ್ಲ. ಎಷ್ಟೇ ಎಬ್ಬಿಸಿದರೂ ಅವು ಏಳಲೇ ಇಲ್ಲ. ನಂತರ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದೆವು’ ಎನ್ನುತ್ತಾರೆ ಈ ಹಳ್ಳಿಯವರಾದ ನಾರಿಯಾ ಸೇಥಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ನಂತರ ಅರಣ್ಯ ಇಲಾಖೆ ಸಿಬ್ಬಂದಿಯು ಡ್ರಮ್​ ಬಾರಿಸಿ ಅವುಗಳನ್ನು ಎಚ್ಚರಿಸಿದರು. ಬೆಳಗ್ಗೆ 10 ಗಂಟೆಗೆ ಆನೆಗಳ ಹಿಂಡು ಈ ಸ್ಥಳದಿಂದ ನಿರ್ಗಮಿಸಿದೆ. ಆದರೆ ಆನೆಗಳು ಮಹುವಾ ಅನ್ನು ಕುಡಿದಿವೆಯೋ ಇಲ್ಲವೋ ಎಂಬ ಬಗ್ಗೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಬಹುಶಃ ವಿಶ್ರಾಂತಿ ಪಡೆಯುತ್ತಿದ್ದವೇನೋ ಎಂದಿದ್ದಾರೆ ಅರಣ್ಯಾಧಿಕಾರಿ ಘಾಸೀರಾಮ್​ ಪಾತ್ರಾ.

ಮಹುವಾ ಮರದ ಹೂವುಗಳನ್ನು ನೀರಿನಲ್ಲಿ ಹಾಕಿ ಹುದುಗು ಬರಿಸಿ ಮತ್ತು ಬರುವ ಪಾನೀಯವನ್ನು ಭಾರತದ ಅನೇಕ ಬುಡುಕಟ್ಟು ಜನಾಂಗದವರು ತಯಾರಿಸುವ ಕ್ರಮವನ್ನು ರೂಢಿಯಲ್ಲಿರಿಸಿಕೊಂಡಿದ್ಧಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ