ಎಲುಬಿಲ್ಲದ ನಾಲಗೆ ನಿಮ್ಮಲ್ಲೇ ಇದೆ, ಎಲುಬಿಲ್ಲದ ಮೂಗು ಮಾತ್ರ ಈಕೆಯಲ್ಲಿದೆ
Nose : ಹುಟ್ಟುವಾಗಲೇ ಈಕೆಯ ಮೂಗಿಗೆ ಮೂಳೆ ಇಲ್ಲ. ಹಾಗಂತ ಈಕೆ ಅಳುತ್ತ ಕುಳಿತಿಲ್ಲ. ಕೌಶಲಯುತವಾಗಿ ರೀಲ್ಸ್ ಮಾಡಿ ಮೂಳೆಯಿಲ್ಲದ ಮೂಗನ್ನು ಪ್ರದರ್ಶಿಸಿದ್ದಾಳೆ. ಇದು ಆತ್ಮವಿಶ್ವಾಸವೆಂದರೆ! ನೋಡಿ ಈಕೆಯ ವಿಡಿಯೋ.
Viral Video : ಅಯ್ಯೋ ನಾನು ಯಾಕೆ ಹೀಗೆ, ಎಲ್ಲರಂತೆ ನಾನು ಯಾಕೆ ಹುಟ್ಟಲಿಲ್ಲ? ಹೀಗೆಂದು ಈಗಿನ ಯುವಕ-ಯುವತಿಯರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಜಾಯಮಾನದವರಲ್ಲ. ಎಲ್ಲ ಓರೆಕೋರೆಗಳನ್ನೂ ನಿರ್ಭಿಡೆಯಿಂದ ಸಾಮಾಜಿಕ ಜಾಲತಾಣದಲ್ಲಿ ಕೌಶಲಯುತವಾಗಿ ಪ್ರದರ್ಶಿಸಿ ಬೇಸರವನ್ನು ಖೊಡವಿಕೊಂಡುಬಿಡುತ್ತಾರೆ. ಇರುವುದಕ್ಕಿಂತ ಇಲ್ಲದ್ದನ್ನೇ ಪ್ರದರ್ಶಿಸುವ ಕಲೆಗಾರಿಕೆಗೆ ಪ್ರಯತ್ನಪೂರ್ವಕವಾಗಿ ತೆರೆದುಕೊಳ್ಳುತ್ತಾರೆ. ಈಕೆ ಡಚ್ ಮೂಲದ ಯುವತಿ. ಎಲ್ಲರಂತೆಯೇ ಈಕೆಗೂ ಮೂಗು ಇದೆ. ಆದರೆ ಆ ಮೂಗಿಗೆ ಮೂಳೆಯೇ ಇಲ್ಲ. ಈಕೆ ಹುಟ್ಟಿರುವುದೇ ಹೀಗೆ. ರೀಲ್ಸ್ ಮಾಡಿ ತನ್ನ ಮೂಗು ಹೀಗಿದೆ ಎಂದು ತೋರಿಸಿದ್ದಾಳೆ. ನೋಡಿ ಇದೀಗ ವೈರಲ್ ಆಗುತ್ತಿರುವ ಈಕೆಯ ವಿಡಿಯೋ.
View this post on Instagram
ನೆದರ್‌ಲ್ಯಾಂಡ್‌ನ ರೊಮಾನಾ ಬ್ರೂಂಟ್ಝೆಸ್ ಮೂಗಿನ ಮೂಳೆ ಅಂದರೆ ಕಾರ್ಟಿಲೇಜ್ ಇಲ್ಲದೆಯೇ ಹುಟ್ಟಿದ್ದಾಳೆ. ಈ ವಿಡಿಯೋದಲ್ಲಿ ತನ್ನ ಮೂಗನ್ನು ಒತ್ತಿಕೊಳ್ಳುತ್ತ, ಮೂಗಿಗೆ ಮೂಳೆ ಇಲ್ಲದಿರುವುದನ್ನು ಖಚಿಪಡಿಸುತ್ತ ರೀಲ್ಸ್ಗೆ ಅಭಿನಯಿಸಿದ್ದಾಳೆ. ‘ನಿಮ್ಮ ಮೂಗಿನಲ್ಲಿ ಮೂಳೆ ಇದೆಯೇ?’ ‘ನನ್ನ ಮೂಗಿಗೆ ಮೂಳೆ ಇಲ್ಲ’ ಎಂದಿದ್ದಾಳೆ.
ಈ ವಿಡಿಯೋ ಅನ್ನು 1 ಮಿಲಿಯನ್ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಲ್ಲರಿಗೂ ಮೂಗು ಹೀಗೇ ಇರಬೇಕು. ಗಟ್ಟಿಯಾದ ಮೂಗು ನನಗಂತೂ ಇಷ್ಟವೇ ಆಗುವುದಿಲ್ಲ ಎಂದಿದ್ದಾರೆ ಒಬ್ಬರು. ಇದು ಟ್ರಿಕ್, ರೀಲ್ಸ್ಗಾಗಿ ಈಕೆ ಹೀಗೆ ಮಾಡಿದ್ದಾಳೆ ಎಂದಿದ್ದಾರೆ ಇನ್ನೊಬ್ಬರು. ಈ ಡಚ್ ಮಂದಿ ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ವ್ಯಕ್ತಿಗಳೆಂದು ಗುರುತಿಸಿಕೊಳ್ಳಲು ಹೀಗೆ ತಮಾಷೆಯ ರೀಲ್ಸ್ ಮಾಡುತ್ತಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ನೀವೇನಂತೀರಿ ಈ ವಿಡಿಯೋ ನೋಡಿ? ಈಕೆಯ ಮೂಗಿಗೆ ಮೂಳೆ ಇದೆಯೋ ಇಲ್ಲವೊ? ಏನಿದ್ದರೇನು ಇಲ್ಲವಾದರೇನು ಎಲ್ಲವನ್ನೂ ಮೀರಿ ಖುಷಿಯಿಂದ ಇರುವುದು ಮುಖ್ಯ ಅಲ್ಲವೆ? ಆಕೆ ಇಲ್ಲಿ ಯಾರಿಗೂ ಏನೂ ತೊಂದರೆಯನ್ನಂತೂ ಮಾಡುತ್ತಿಲ್ಲ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:33 pm, Thu, 10 November 22