ಅಣ್ಣ ಕೊಟ್ಟ ಅಚ್ಚರಿ; ಸ್ಕೂಟಿ ನೋಡಿ ಹನಿಗಣ್ಣಾದ ತಂಗಿ

Brother Sister Love : ಅಣ್ಣ ಪುಟ್ಟ ಡಬ್ಬಿಯನ್ನು ಕೊಡುತ್ತಾನೆ. ತಂಗಿ ತೆರೆದು ನೋಡಿದಾಗ ಸ್ಕೂಟಿಯ ಚಾವೀ ಇರುತ್ತದೆ. ಅಚ್ಚರಿಯಿಂದ ಅವಳಿಗೆ ದುಃಖ ಉಮ್ಮಳಿಸಿ ಬರುತ್ತದೆ. ನೋಡಿ ಈ ಹೃದಯಸ್ಪರ್ಶಿ ವಿಡಿಯೋ.

ಅಣ್ಣ ಕೊಟ್ಟ ಅಚ್ಚರಿ; ಸ್ಕೂಟಿ ನೋಡಿ ಹನಿಗಣ್ಣಾದ ತಂಗಿ
Brother surprises sister with scooty
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 10, 2022 | 7:56 PM

Viral Video : ಬಾಂಧವ್ಯ ಚೆನ್ನಾಗಿರಬೇಕೆಂದರೆ ಆಗಾಗ ಖುಷಿ ಉಂಟುಮಾಡುವ ಉಪಾಯಗಳನ್ನು ಹೂಡುತ್ತಿರಬೇಕು. ಅದು ಯಾವ ಸಂಬಂಧವೇ ಆಗಿರಲಿ, ಅವರ ಮನಸ್ಸಿನಲ್ಲಿ ಏನಿದೆ ಏನು ಬೇಕು ಎನ್ನುವುದನ್ನು ತಿಳಿದುಕೊಂಡು ಅದನ್ನು ಒದಗಿಸುವುದು ಒಂದು ರೀತಿಯ ಪ್ರೀತಿಯೇ. ಈಗಿಲ್ಲಿ ಅಣ್ಣನೊಬ್ಬ ತಂಗಿಗೆ ಸ್ಕೂಟಿ ಕೊಡಿಸಿ ಅಚ್ಚರಿಗೆ ಬೀಳಿಸಿದ್ದಾನೆ. ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಐಶ್ವರ್ಯ ಭದಾಣೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಇದನ್ನು ಪೋಸ್ಟ್​ ಮಾಡಿದ್ದಾರೆ. ನೆಟ್ಟಿಗರು, ಇದ್ದರೆ ಇಂಥ ಅಣ್ಣನಿರಬೇಕು ಎಂದು ಪ್ರಶಂಸಿಸುತ್ತಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇಂಥ ಅಣ್ಣನಿದ್ದರೆ ಬದುಕು ಸಮೃದ್ಧವಾಗಿರುತ್ತದೆ ಎಂದು ನೆಟ್ಟಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಹೌದು ತಾನೆ? ಅಣ್ಣ ಕೊಟ್ಟ ಪುಟ್ಟ ಡಬ್ಬಿಯನ್ನು ತಂಗಿ ತೆರೆದು ನೋಡುತ್ತಾಳೆ. ಆಗ ಸ್ಕೂಟಿಯ ಕೀ ಅದರಲ್ಲಿ ಇರುತ್ತದೆ. ಪಕ್ಕದಲ್ಲಿದ್ದ ಸ್ಕೂಟಿ ನೋಡಿ ಆನಂದಭಾಷ್ಪ ಸುರಿಸುತ್ತಾಳೆ. ಈ ವಿಡಿಯೋ ಈಗಾಗಲೇ 9 ಮಿಲಿಯನ್​ ಜನರನ್ನು ತಲುಪಿದೆ. 1 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ನನಗೂ ಇಂಥ ಅಣ್ಣನೊಬ್ಬ ಇದ್ದಿದ್ದರೆ ಎಂದು ಒಬ್ಬರು ಬೇಸರಿಸಿಕೊಂಡಿದ್ದಾರೆ. ಅಯ್ಯೋ ನನಗೆ ತಂಗಿ ಇಲ್ಲವಲ್ಲ, ನನಗೂ ಹೀಗೆಲ್ಲ ಪ್ರೀತಿಸಬೇಕು ಎನ್ನಿಸುತ್ತದೆ ಎಂದು ಇನ್ನೊಬ್ಬರು ಬೇಸರಿಸಿಕೊಂಡಿದ್ದಾರೆ. ನೀವಿಬ್ಬರೂ ಸುಖವಾಗಿರಿ ಎಂದು ಮಗದೊಬ್ಬರು ಹಾರೈಸಿದ್ದಾರೆ.

ಏನನ್ನಿಸುತ್ತಿದೆ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 7:56 pm, Thu, 10 November 22