‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ

Elephant : ಬೆಕ್ಕುಗಳಿಗೆ, ನಾಯಿಗಳಿಗೆ ಐಪ್ಯಾಡ್​ ಕೊಟ್ಟು ಕೂರಿಸುವ ವಿಡಿಯೋ ನೋಡಿದ್ದೀರಿ. ಆದರೆ ತಮಿಳುನಾಡಿದ ಈ ಆನೆ ತನ್ನ ಮೊಣಕಾಲೂರಿ ಹರಸಾಹಸಪಡುತ್ತಿದೆ ಮಾವುತನ ಮೊಬೈಲಿನಲ್ಲಿ ಇಣುಕಲು. ನೋಡಿ ವಿಡಿಯೋ.

‘ನೀನೊಬ್ಬನೇ ನೋಡೋದು ಮಹಾಪರಾಧ!’ ಮಾವುತನ ಮೊಬೈಲಿನಲ್ಲಿ ಇಣುಕುತ್ತಿರುವ ಆನೆ
Elephant trying to peek into mahouts phone
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 31, 2022 | 3:49 PM

Viral Video : ಪ್ರಾಣಿ ಮತ್ತು ಮನುಷ್ಯನ ಸಂಬಂಧ ಅವಿನಾಭಾವ. ತನ್ನ ಪಾಡಿಗೆ ಈ ಮಾವುತ ಮೊಬೈಲಿನಲ್ಲಿ ಮುಳುಗಿದ್ದಾನೆ. ಈ ದೈತ್ಯದೇಹಿ ಆನೆಗೂ ಕುತೂಹಲ. ಏನದು ನೀನು ಒಬ್ಬನೇ ನೋಡುವುದು? ನನಗೂ ತೋರಿಸು ಎಂದು ಪುಟ್ಟ ಮೊಬೈಲಿನೊಳಗೆ ಇಣುಕಲು ಹರಸಾಹಸ ಪಡುತ್ತಿದೆ. ಈಗ ವೈರಲ್ ಆಗಿರುವ ಈ ವಿಡಿಯೋ ಚಿತ್ರೀಕರಣಗೊಂಡಿದ್ದು ತಮಿಳುನಾಡಿನಲ್ಲಿ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ
Image
ಹೀಗೊಂದು ಅಚ್ಚರಿ ತನಗಾಗಿ ಕಾಯುತ್ತಿರುತ್ತದೆ ಎಂದು ಮನೆಗೆಲಸದ ಸಹಾಯಕಿಗೆ ಗೊತ್ತಿರಲಿಲ್ಲ
Image
ಹಾಲೋವೀನ್​! ಇಲ್ಲಿ ಏನೇ ಆದರೂ ಹೋದರೂ ಎಲ್ಲವೂ ಮಜಾನೇ
Image
ಗಡ್ಡಕ್ಕೆ ಬೆಂಕಿ ಹತ್ತಿದಾಗ! ಸ್ಟಂಟ್​ ಮಾಡಲು ಹೋದ ವ್ಯಕ್ತಿಯ ಈ ಅವಸ್ಥೆ
Image
ಹಾಲೋವೀನ್ ಪಾರ್ಟಿಗೆ ಮಹಿಳೆಯೊಬ್ಬಳು ತನ್ನ ತಾ ಅಲಂಕರಿಸಿಕೊಂಡ ಈ ಬಗೆ!

ತಮಿಳುನಾಡಿನ ಕುಂಭಕೋಣಂ ಕುಂಬೇಶ್ವರರ್ ದೇವಾಲಯದ ಹೊರಗೆ ಮಾವುತನೊಬ್ಬ ತನ್ನ ಪಾಡಿಗೆ ತಾನು ಮೊಬೈಲು ನೋಡುತ್ತ ಕುಳಿತಾಗ ಆನೆ ಹೀಗೆ ಇಣುಕಲು ಪ್ರಯತ್ನಿಸಿದೆ. 37,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಆನೆಗಳು ಬಹಳ ಸೂಕ್ಷ್ಮ ಮತ್ತು ಮನುಷ್ಯಸ್ನೇಹಿ ಪ್ರಾಣಿಗಳು. ತನ್ನನ್ನು ಸಾಕಿದವರೊಂದಿಗೆ ಬಹಳ ಆಪ್ತವಾಗಿ ಸಮಯವನ್ನು ಕಳೆಯುತ್ತವೆ. ಈ ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಂಥ ಮುದ್ಧಾದ ದೃಶ್ಯವಿದು ಎಂದಿದ್ದಾರೆ ಕೆಲವರು. ಆನೆಗೆ ಬೇಕಾಗೋ ದೊಡ್ಡ ಚಷ್ಮಾ ಅನ್ನು ನಾನು ಕೊಡಿಸುತ್ತೇನೆ ಎಂದಿದ್ದಾರೆ ಒಬ್ಬರು. ಯಾವ ಸಿನೆಮಾ ನೋಡುತ್ತಿದ್ದಾರೆ ನಿನ್ನ ಮಾವುತ ಎಂದು ಕೇಳಿದ್ದಾರೆ ಇನ್ನೂ ಒಬ್ಬರು.

ಬೆಕ್ಕು, ನಾಯಿಗಳು ಹೀಗೆ ಮೊಬೈಲ್​ ನೋಡುವುದು ಈಗ ಸಾಮಾನ್ಯ ಆದರೆ ಆನೆ!? ಮಜಾ ಅನ್ನಿಸುತ್ತಿದೆಯಲ್ಲ ಈ ವಿಡಿಯೋ…

ಮತ್ತಷ್ಟು ವೈರಲ್​ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ

Published On - 3:49 pm, Mon, 31 October 22

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ