‘ಕ್ಷಮಿಸಿ ತುಂಬಾ ರುಚಿಯಾಗಿತ್ತು, ಎಲ್ಲಾ ತಿಂದುಬಿಟ್ಟೆ’ ಡೆಲಿವರಿ ಏಜೆಂಟ್ ಗ್ರಾಹಕರಿಗೆ ಮೆಸೇಜ್ ಮಾಡಿದಾಗ
Delivery Agent : ಈ ವಿಷಯವನ್ನು ನೀವು ಕಂಪೆನಿಗೆ ರಿಪೋರ್ಟ್ ಮಾಡಬಹುದು ಎಂದಿದ್ದಾನೆ ಡೆಲಿವರಿ ಏಜೆಂಟ್. ಭಯಂಕರ ಮಾರಾಯಾ ನೀ ಎಂದು ಲಿಯಾಮ್ ಮೆಸೇಜ್ ಮಾಡಿದಾಗ, ಐ ಡೋಂಟ್ ಕೇರ್ ಎಂದುಬಿಟ್ಟಿದ್ದಾನೆ ಏಜೆಂಟ್.
Viral Video : ಯಾರಿಗಾದರೂ ಹೀಗೊಂದು ಊಹೆ ಇತ್ತಾ? ಮುಂದೊಂದು ದಿನ ಈ ಪರಿಯಲ್ಲಿ ಈ ವೇಗದಲ್ಲಿ ಫುಡ್ ಡೆಲಿವರಿ ಸಿಸ್ಟಮ್ ವ್ಯಾಪಿಸಿಕೊಳ್ಳುತ್ತದೆಯೆಂದು. ತಂತ್ರಜ್ಞಾನದ ಅಚ್ಚರಿ ಎಂದರೆ ಹೀಗೇ. ಆದರೆ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಅದರದೇ ಆದ ಸಾಧಕಬಾಧಕಗಳೂ ಇದ್ದೇ ಇರುತ್ತವೆ. ಆದರೆ ಆ ಚರ್ಚೆ ಈಗಿಲ್ಲಿ ಬೇಡ. ಏಕೆಂದರೆ ಈಗ ವೈರಲ್ ಆಗಿರುವ ಈ ಪೋಸ್ಟ್ ನೋಡಿದಾಗ ನಿಮಗೇನು ಅನ್ನಿಸಬಹುದು ಎಂಬ ಕುತೂಹಲ ನಮಗಿದೆ.
Deliveroo driver has gone rogue this morning pic.twitter.com/sFNMUtNRrk
ಇದನ್ನೂ ಓದಿ— Bags (@BodyBagnall) October 28, 2022
ಓದಿದಿರಲ್ವಾ? ಲಿಯಾಮ್ ಬಾಗ್ನಾಲ್ ಎಂಬ ವ್ಯಕ್ತಿ ಫುಡ್ ಡೆಲಿವರಿ ಏಜೆಂಟ್ನೊಂದಿಗೆ ನಡೆಸಿದ ಸಂಭಾಷಣೆಗೆ ಈ ಟ್ವೀಟ್ ಸಾಕ್ಷಿ. ಆಗಿದ್ದಿಷ್ಟೇ, ಲಿಯಾಮ್ ಆರ್ಡರ್ ಮಾಡಿದ್ದ ಊಟವನ್ನು ಏಜೆಂಟ್ ಆತನಿಗೆ ತಲುಪಿಸದೆ ಕ್ಷಮಿಸಿ ಎಂದು ಮೆಸೇಜ್ ಮಾಡಿದ್ದಾನೆ. ಯಾಕೆ ಏನು ಎಂದು ಲಿಯಾಮ್ ವಾಪಸ್ ಮೆಸೇಜ್ ಮಾಡಿದ್ಧಾನೆ. ಆಗ ಡೆಲಿವರಿ ಏಜೆಂಟ್ ತಿಂಡಿ ಬಹಳ ರುಚಿಯಾಗಿತ್ತು ಹಾಗಾಗಿ ನಾನೇ ತಿಂದುಬಿಟ್ಟೆ. ಮತ್ತೆ ಈ ವಿಷಯವನ್ನು ನೀವು ಕಂಪೆನಿಗೆ ರಿಪೋರ್ಟ್ ಮಾಡಬಹುದು ಎಂದಿದ್ದಾನೆ. ಭಯಂಕರ ಮಾರಾಯಾ ನೀ ಎಂದು ಲಿಯಾಮ್ ಮೆಸೇಜ್ ಮಾಡಿದಾಗ, ಐ ಡೋಂಟ್ ಕೇರ್ ಎಂದುಬಿಟ್ಟಿದ್ದಾನೆ ಏಜೆಂಟ್.
ನಂತರ ಲಿಯಾಮ್, ಅಪ್ಲಿಕೇಷನ್ ಮೂಲಕ ಕಸ್ಟಮರ್ ಕೇರ್ ಸಿಬ್ಬಂದಿಗೆ ಈ ಸಂಭಾಷಣೆಯ ಸ್ಕ್ರೀನ್ ಶಾಟ್ ಕಳಿಸಿ ಹಣ ಮರುಪಾವತಿಸಲು ಕೇಳಿಕೊಂಡಿದ್ಧಾನೆ. ನೀವು ಮತ್ತೊಮ್ಮೆ ಆರ್ಡರ್ ಮಾಡುವವರೆಗೂ ಹಣವನ್ನು ಮರುಪಾವತಿ ಮಾಡಲಾಗದು ಎಂದು ಅತ್ತಕಡೆಯಿಂದ ಸಂದೇಶ ಬಂದಿದೆ. ಆಗ ಲಿಯಾಮ್ ಮತ್ತೊಮ್ಮೆ ಆರ್ಡರ್ ಮಾಡಿ ಬೇರೊಬ್ಬ ಡೆಲಿವರಿ ಏಜೆಂಟ್ ಮೂಲಕ ಊಟ ತರಿಸಿಕೊಂಡಿದ್ದಾರೆ.
ವೃತ್ತಿಪರವಾಗಿರಬೇಕು ಎಂದು ಪ್ರತಿಯೊಬ್ಬ ಗ್ರಾಹಕರೂ ನಿರೀಕ್ಷಿಸುತ್ತಾರೆ. ಈಗ ಈ ಘಟನೆಯಿಂದ ಬೇಸರವಾಗಿದೆ ಎಂದು ಲಿಯಾಮ್ ‘ಮಿರರ್’ಗೆ ತಿಳಿಸಿದ್ದಾರೆ. ನಂತರ ಡೆಲಿವರಿ ಪಾರ್ಟನರ್ ಏಜನ್ಸಿಯು ಕ್ಷಮೆ ಕೇಳಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತಕ್ಷಣವೇ ನಾವು ಮತ್ತೊಮ್ಮೆ ಲಿಯಾಮ್ ಅವರಿಗೆ ಊಟವನ್ನು ಕಳಿಸಿದ್ದೇವೆ. ಜೊತೆಗೆ ಮೊದಲ ಡೆಲಿವರಿ ಏಜೆಂಟ್ ಕುರಿತು ವಿಚಾರಣೆಯನ್ನೂ ನಡೆಸುತ್ತಿದ್ದೇವೆ ಎಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಈ ಪೋಸ್ಟ್ಗೆ ವಿವಿಧ ರೀತಿಯಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಎಂಥ ಆಘಾತ ಇದು ಎಂದಿದ್ದಾರೆ. ಇನ್ನೂ ಕೆಲವರು, ನನಗೂ ಹೀಗೆಲ್ಲ ಆಗಿದೆ ಎಂದಿದ್ದಾರೆ. ಡೆಲಿವರಿ ಏಜೆಂಟ್ನ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು ಎಂದಿದ್ದಾರೆ ಒಬ್ಬರು.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:51 pm, Mon, 31 October 22