AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲೋವೀನ್ ಪಾರ್ಟಿಗೆ ಮಹಿಳೆಯೊಬ್ಬಳು ತನ್ನ ತಾ ಅಲಂಕರಿಸಿಕೊಂಡ ಈ ಬಗೆ!

Halloween : ಈ ಮಹಿಳೆ ತನ್ನನ್ನು ತಾ ಹೀಗೆ ಎಷ್ಟು ಸಾಧ್ಯವೋ ಅಷ್ಟು ಭಯಂಕರವಾಗಿ ಅಲಂಕರಿಸಿಕೊಳ್ಳಲು ಸುಮಾರು 9 ಗಂಟೆ ವ್ಯಯಿಸಿದ್ದಾಳೆ. ನೆಟ್ಟಿಗರೆಲ್ಲ ಇವಳ ಈ ಪ್ರತಿಭೆಗೆ ಶಭಾಷ್​ ಎನ್ನುತ್ತಿದ್ದಾರೆ.

ಹಾಲೋವೀನ್ ಪಾರ್ಟಿಗೆ ಮಹಿಳೆಯೊಬ್ಬಳು ತನ್ನ ತಾ ಅಲಂಕರಿಸಿಕೊಂಡ ಈ ಬಗೆ!
Woman Transforms Herself Into Horrifying Monster With Makeup For Halloween
TV9 Web
| Edited By: |

Updated on:Oct 31, 2022 | 12:25 PM

Share

Viral Video : ಇಡೀ ಸಾಮಾಜಿಕ ಜಾಲತಾಣದ ತುಂಬಾ ಹಾಲೋವಿನ್​ ಪಾರ್ಟಿಗೆ ಸಂಬಂಧಿಸಿದ ಫೋಟೋ ವಿಡಿಯೋಗಳೇ ತುಂಬಿವೆ. ವಿವಿಧ ಮೇಕಪ್​, ವೇಷಭೂಷಣಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಬಗೆಬಗೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಭಯಾನಕವಾಗಿ ಕಾಣಿಸಿಕೊಳ್ಳಲು ದಿನಗಟ್ಟಲೆ ಮೇಕಪ್​, ಉಡುಗೆ ತೊಡುಗೆಗಾಗಿ ಕಾಲ ಕಳೆಯುತ್ತಿದ್ದಾರೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಪಾರ್ಟಿಗೆ ಹೋಗಲು ಈ ಮಹಿಳೆ ಹೇಗೆ ತಯಾರಾಗಿದ್ದಾಳೆ ಮತ್ತು ಆರಂಭದಿಂದ ಕೊನೆಯವರೆಗೂ ಹೇಗೆ ತನ್ನನ್ನು ಭಯಂಕರವಾಗಿ ಅಲಂಕರಿಸಿಕೊಂಡಿದ್ದಾಳೆ ಎಂದು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿರುವ ಈ ಮಹಿಳೆ ತನ್ನನ್ನು ತಾ ಅತ್ಯಂತ ಕೆಟ್ಟ, ಭಯಾನಕ ಬ್ಯಾಟ್​ ವುಮನ್​ನಂತೆ ಅಲಂಕರಿಸಿಕೊಂಡಿದ್ದಾಳೆ. ಈ ಅವತಾರ ತಾಳಲು ಆಕೆ 9 ತಾಸು ವ್ಯಯಿಸಿದ್ದಾಳೆ. ಆ ಉಗುರು, ಹಲ್ಲು, ರೆಕ್ಕೆ, ರೆಕ್ಕೆ, ಆ ಕಪ್ಪು ಉಡುಗೆ ನೋಡಿದ ಯಾರಿಗೂ ಭಯ ಬರುವುದು ಖಚಿತ!

25,3 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಈ ವಿಡಿಯೋ ಪಡೆದಿದೆ. 1,141 ಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಕೆಲವರು ಕ್ಯಾಟ್​ ಹಾಲೋವೀನ್​ ಎಂದಿದ್ದಾರೆ. ಆದರೆ ಇದು ನೋಡಲು ಬಾವುಲಿಯಂತಿದೆ. ನೀವು ಬಹಳ ಪ್ರತಿಭಾವಂತರು ಎಂದು ಶ್ಲಾಘಿಸಿದ್ದಾರೆ ನೆಟ್ಟಿಗರೊಬ್ಬರು. ಇಷ್ಟೊಂದು ತಾಳ್ಮೆಯಿಂದ ಪರಿಪೂರ್ಣವಾಗಿ ನಿಮ್ಮನ್ನು ನೀವೇ ಸ್ವತಃ ಅಲಂಕರಿಸಿಕೊಂಡಿದ್ದೀರಿ, ವಾಹ್​! ಎಂದಿದ್ದಾರೆ ಮತ್ತೊಬ್ಬರು. ಅನೇಕರು ರೀಟ್ವೀಟ್​ ಮಾಡಿ ತಮ್ಮ ತಮ್ಮ ಹಾಲೋವೀನ್​ ವೇಷಗಳ ವಿಡಿಯೋ, ಫೋಟೋ ಹಂಚಿಕೊಂಡಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:24 pm, Mon, 31 October 22

ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ