‘ಟೋಲ್ ಕಟ್ಟಿ’ ಆನೆಗಳ ಸಿಹಿಯಾದ ವಿನಂತಿ, ಶರಣಾದ ಸಹೃದಯಿ ಡ್ರೈವರ್
Toll Tax : ಆನೆಗಳ ದಾರಿಗೆ ಅಡ್ಡಬಂದವರೇ ನಿಲ್ಲಬೇಕು. ಬಂದಿದ್ದಕ್ಕೆ ಅವರು ಹೀಗೆ ಟ್ಯಾಕ್ಸ್ ವಸೂಲಿ ಮಾಡಿಯೇ ಕಳಿಸುವುದು. ಅದರಲ್ಲೂ ಅವರಿಗೆ ಪ್ರಿಯವಾದ ಆಹಾರವಿದ್ದರೆ ಕೇಳಿಯಾರೇ? ನೋಡಿ ಈ ವಿಡಿಯೋ.
Viral Video : ಒಂದೂರಿನಿಂದ ಇನ್ನೊಂದೂರಿಗೆ ಅಥವಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಾಗ ಟೋಲ್ಗಳಲ್ಲಿ ನಿಗದಿತ ತೆರಿಗೆಯನ್ನು ಪ್ರತಿಯೊಬ್ಬ ಪ್ರಯಾಣಿಕರೂ ಕಟ್ಟಬೇಕಿರುವುದು ನಿಯಮ. ಅದರಲ್ಲೂ ಸರಕು ಸಾಗಣೆ ಸಂಬಂಧಿಸಿದ ವಾಹನ ಮತ್ತು ಟ್ರಕ್ಗಳು ಸ್ವಲ್ಪ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲ ವ್ಯವಸ್ಥೆಯನ್ನು ನಿರ್ವಹಿಸಲು ನಿರ್ವಹಿಸಲು ಸುಸಜ್ಜಿತವಾದ ಸಿಬ್ಬಂದಿಯನ್ನು ಪ್ರತೀ ಟೋಲ್ಗಳಲ್ಲಿಯೂ ನೇಮಿಸಲಾಗಿರುತ್ತದೆ. ಆದರೆ ಇದೀವ ವೈರಲ್ ಆಗಿರುವ ಈ ವಿಡಿಯೋದಲ್ಲಿ ಆನೆಗಳು ಸ್ವಯಂನೇಮಕಗೊಂಡಿವೆ. ತಮಗೆ ಬೇಕಾದ ಸಿಹಿಯಾದ ಟೋಲ್ ಅನ್ನು ತಾವಾಗಿಯೇ ಸಂಗ್ರಹಿಸಿಕೊಳ್ಳುತ್ತಿವೆ.
Tax deduction at source !! pic.twitter.com/h6OO8xsjc9
ಇದನ್ನೂ ಓದಿ— Parveen Kaswan, IFS (@ParveenKaswan) October 20, 2022
ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಆನೆಗಳ ದಾರಿಯಲ್ಲಿ ಈ ಕಬ್ಬಿನ ಟ್ರಕ್ ಅಡ್ಡಬಂದಿದೆ. ಕಬ್ಬು ಮೊದಲೇ ಆನೆಗಳಿಗೆ ಪ್ರಿಯವಾದ ಆಹಾರ. ಸುಮ್ಮನೆ ಬಿಟ್ಟಾವೆಯೇ!? ಅಡ್ಡಗಟ್ಟಿ ಕಬ್ಬನ್ನು ಹಿರಿದೆಳೆದು ಮನಸಾ ತಿಂದಿವೆ. ಅಂತೂ ಹೀಗೆ ಟೋಲ್ ತೆರಿಗೆಯನ್ನು ಸಂಗ್ರಹಿಸುವಲ್ಲಿ ಆನೆಗಳು ಯಶಸ್ವಿಯಾಗಿವೆ.
ಈ ತನಕ ಈ ವಿಡಿಯೋ ಅನ್ನು ಸುಮಾರು 74,000 ಜನರು ನೋಡಿದ್ದಾರೆ. 3,300 ಜನರು ಇಷ್ಟಪಟ್ಟಿದ್ದಾರೆ. ‘ಲಾರಿ ಡ್ರೈವರ್ ಸಹೃದಯಿಯಾಗಿದ್ದಾರೆ, ಏನಾದರೂ ಬಹುಮಾನ ಕೊಡಬೇಕು ಅವರಿಗೆ’ ಎಂದಿದ್ದಾರೆ ಒಬ್ಬರು. ‘ಸರ್, ಈ ಕಬ್ಬಿಗೆ ಸುಮ್ಮನೆ ಚೂರು ಫ್ಲೇವರ್ ಸೇರಿಸಿದೆವು’ ಎಂದು ರೀಟ್ವೀಟ್ ಮಾಡಿದ್ದಾರೆ ಇನ್ನೂ ಒಬ್ಬರು. ‘GST ಎಂದರೆ ಗಜರಾಜ ಟ್ಯಾಕ್ಸ್’ ಎಂದಿದ್ದಾರೆ ಮತ್ತೂ ಒಬ್ಬರು. ‘ERT – Elephant Road Tax’ ಹೀಗೆಂದಿದ್ದಾರೆ ಮಗದೊಬ್ಬರು. ‘ಇವರು ಹೀಗೆ ಟ್ರಕ್ ನಿಲ್ಲಿಸಿರುವುದು ಯಾಕೆ? ವನ್ಯಜೀವಿಗಳಿಗೆ ಹೀಗೆ ಆಹಾರ ಕೊಡುವುದು ಅಪರಾಧ’ ಎಂದು ಒಬ್ಬರು ನ್ಯಾಯ ಅನ್ಯಾಯದ ಬಗ್ಗೆ ಮಾತನಾಡಿದ್ದಾರೆ. ‘ಇದು ಮುದ್ದಾದ ತೆರಿಗೆ’ ಎಂದಿದ್ದಾರೆ ಹೀಗೊಬ್ಬರು. ‘ಅವರು ಟ್ಯಾಕ್ಸ್ ಡಿಪಾರ್ಟ್ಮೆಂಟ್ನವರು ಅಲ್ಲ, ಫುಡ್ ಇನ್ಸ್ಪೆಕ್ಟರ್’ ಎಂದಿದ್ದಾರೆ. ಒಟ್ಟು 249 ಜನರು ಈ ಪೋಸ್ಟ್ ರೀಟ್ವೀಟ್ ಮಾಡಿದ್ದಾರೆ.
ಎಂಥ ಸಿಹಿಯಾದ ತೆರಿಗೆ ಇದಲ್ವಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:13 pm, Fri, 21 October 22