‘ನಾಗರಾಜ’ನಿಗೆ ಮುತ್ತು ಕೊಟ್ಟ ಸುರೇಶ, ನೆಟ್ಟಿಗರೆಲ್ಲ ಗಡಗಡಗಡಗಡ

Man Kisses King Cobra : ಒಂದು ಮುತ್ತಿನ ಹಿಂದೆ ಅದೆಂಥ ಸಾಹಸದ ಕಥೆ ಇರುತ್ತದೆ. ಇನ್ನು ನಾಗರಹಾವಿಗೆ ಮುತ್ತು ಕೊಡುವುದೆಂದರೆ! ನೋಡಿ ಕೇರಳದ ಈ ಉರಗ ಪರಿಣತನ ವಿಡಿಯೋ.

‘ನಾಗರಾಜ’ನಿಗೆ ಮುತ್ತು ಕೊಟ್ಟ ಸುರೇಶ, ನೆಟ್ಟಿಗರೆಲ್ಲ ಗಡಗಡಗಡಗಡ
Man Kisses King Cobra on Head
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 21, 2022 | 1:51 PM

Viral Video : ಈ ನಾಗರಾಜನ ಸುದ್ದಿಯಂತೂ ದಿನವೂ ಕೇಳುತ್ತಿರುತ್ತೀರಿ, ನೋಡುತ್ತಿರುತ್ತೀರಿ. ವೈರಲ್ ಆದ ವಿಡಿಯೋಗಳಿಗಂತೂ ಲೆಕ್ಕವೇ ಇಲ್ಲ. ಮೊನ್ನೆಮೊನ್ನೆಯಷ್ಟೇ ಒಬ್ಬ ವ್ಯಕ್ತಿ ನಾಗರಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ವಿಡಿಯೋ ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗಿರುವ ಈ ಉರಗ ಪರಿಣತ ನಾಗರಹಾವಿಗೆ ಮುತ್ತು ಕೊಡುವಲ್ಲಿ ಯಶಸ್ವಿಯಾಗಿದ್ದಾನೆ. ನೆಟ್ಟಿಗರಂತೂ ಈ ದೃಶ್ಯ ನೋಡಿ ಬೆಚ್ಚಿಬೆಚ್ಚಿ ಬೀಳುತ್ತಿದ್ದಾರೆ. ಈತನ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Saurabh Jadhav Jadhav (@10_viper_21)

ಇಂಥ ವಿಷಕಾರಿಯಾದ ನಾಗರಹಾವಿನ ನೆತ್ತಿಯ ಮೇಲೆ ಈತ ಹೀಗೆ ಮುತ್ತಿಡುವುದನ್ನು ನೋಡುವುದೇ ಭಯಾನಕವಾಗಿದೆ. ಇದನ್ನು ಪ್ರಯತ್ನಿಸಿ ಎಂದು ನಿಮಗೆ ಯಾರಾದರೂ ಹೇಳಿದರೆ? ಸೌರಭ್ ಜಾಧವ್ ಎನ್ನುವವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ಉರಗ ಪರಿಣತನ ಹೆಸರು ವಾವಾ ಸುರೇಶ. ಇವರು ಕೇರಳ ಮೂಲದವರು. ಈತನಕ 38,000 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ, 190 ಹಾವುಗಳನ್ನು ರಕ್ಷಿಸಿದ್ದಾರೆ ಮತ್ತು 3,000ಕ್ಕೂ ಹೆಚ್ಚು ಹಾವುಗಳಿಂದ ಕಚ್ಚಿಸಿಕೊಂಡಿದ್ದಾರೆ ಕೂಡ! ‘ಕೇರಳದ ಹಾವಿನ ಮನುಷ್ಯ’ ಎಂದೇ ಇವರು ಪ್ರಸಿದ್ಧರಾಗಿದ್ದಾರೆ.

ಈ ವಿಡಿಯೋ ಅನ್ನು 780 ಜನರು ಇಷ್ಟಪಟ್ಟಿದ್ದಾರೆ. ಇವರ ಧೈರ್ಯವನ್ನು ನೆಟ್ಟಿಗರು ಹೊಗಳಿದ್ದಾರೆ. ಕೆಲವರು ಇದು ಅಪಾಯಕಾರಿ ಎಂದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:51 pm, Fri, 21 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ